ಮನೋರಂಜನೆ

ಎಚ್ಚರಗೊಳ್ಳದಿದ್ದರೇ ವಾಜಪೇಯಿಗೆ ಆದ ಗತಿಯೇ ಮೋದಿಗೂ ಆಗುತ್ತೆ- ಬಿಜೆಪಿ ಸಂಸದನ ಅಚ್ಚರಿಯ ಹೇಳಿಕೆ.

14 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗಾದ ಗತಿಯೇ(ಸೋಲು) ನರೇಂದ್ರ ಮೋದಿಗೂ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಪಕ್ಷದ ಕಾರ್ಯಕರ್ತರು ಮೈ ಮರೆತರೆ ಅಂದು ಅಟಲ್’ಜೀಗೆ ಆದ ಸೋಲಿನ ರೀತಿ 2019ರಲ್ಲಿ ನರೇಂದ್ರ ಮೋದಿಗೂ ಆಗಲಿದೆ ಎಂದು ಸಿದ್ದೇಶ್ವರ್ ಹೇಳಿದ್ದಾರೆ.

 

 

ದಾವಣಗೆರೆಯ ಜಿಎಂಐಟಿ ಕಾಲೇಜ್ ನಲ್ಲಿ ನಡೆದ ರಾಜ್ಯ ಮಹಿಳಾ ಮೋರ್ಚಾದ ಪ್ರಶಿಕ್ಷಣ ಶಿಬಿರದಲ್ಲಿ ಮಾತನಾಡಿದ ಅವರು “ವಾಜಪೇಯಿ ದೇಶದ ಜನತೆಗೆ ಸರ್ವ ಶಿಕ್ಷಣ ಅಭಿಯಾನ, ಗ್ರಾಮ ಸಡಕ್ ಯೋಜನಂತಹ ಮಾದರಿ ಯೋಜನೆಗಳನ್ನೂ ಕೊಟ್ಟಿದ್ದರು. ಆದರೂ 2004ರ ಚುನಾವಣೆಯಲ್ಲಿ ವಾಜಪೇಯಿ ಸೋಲು ಕಂಡರು. ವಾಜಪೇಯಿ ಸರ್ಕಾರ ಮಾಡಿದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ಪಕ್ಷದ ಕಾರ್ಯಕರ್ತರು ವಿಫಲರಾಗಿದ್ದರು. ಅಂದಿನ ಸೋಲಿಗೆ ಇದೇ ಪ್ರಮುಖ ಕಾರಣವಾಗಿತ್ತು. ಮುಂದಿನ ಚುನಾವಣೆಯಲ್ಲಿ ಮೋದಿಯವರ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡದಿದ್ದರೆ ಅವರೂ ಅಟಲ್ ಅವರಂತೆ ಸೋಲುತ್ತಾರೆ” ಎಂದು ಸಿದ್ದೇಶ್ವರ್ ಹೇಳಿದರು..

ಬಿಜೆಪಿ ಕಾರ್ಯಕರ್ತರು ಈಗಲೇ ಎಚ್ಚೆತ್ತುಕೊಂಡು ಮೋದಿ ಸರ್ಕಾರದ ಸಾಧನೆ ಬಗ್ಗೆ ಮತದಾರರಿಗೆ ಮನದಟ್ಟು ಮಾಡಿಕೊಡಬೇಕು. ಪರಿಸ್ಥಿಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಈಗ ಎಚ್ಚೆತ್ತುಕೊಳ್ಳದಿದ್ದರೆ ಆಮೇಲೆ ಕೈ ಕೈ ಹಿಸುಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.” ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top