ಮನೋರಂಜನೆ

ಮತ್ತೋಮ್ಮೆ ಮಾನವೀಯತೆ ಮೆರೆದ ಚಾಲೆಂಜಿಂಗ್ ಸ್ಟಾರ್- ದಚ್ಚು ಸರಳತೆಗೆ ತಲೆಬಾಗಿದ ಅಂಗವಿಕಲ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲದರಲ್ಲಿಯೂ ಭಿನ್ನ. ಹೊರ ಜಗತ್ತಿಗೆ ಕೊಂಚ ಒರಟಾಗಿ ಕಂಡರೂ ಎಲ್ಲರ ಬಗ್ಗೆಯೂ ಪ್ರೀತಿ ಮತ್ತು ಕಾಳಜಿ ಹೊಂದಿರೋದು ಅವರ ಅಸಲೀ ವ್ಯಕ್ತಿತ್ವ. ಬಹುಶಃ ಕರ್ನಾಟಕದಲ್ಲಿ ದರ್ಶನ್ ಅವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದಕ್ಕೆ ಈ ವ್ಯಕ್ತಿತ್ವವೂ ಒಂದು ಕಾರಣವಾಗಿದ್ದಿರ ಬಹುದು.. ತಾವು ಎಷ್ಟೇ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದರೂ ಸಾಮಾನ್ಯ ಕಲಾವಿದನಂತೆ ವರ್ತಿಸೋದು ದರ್ಶನ್ ಅವರ ವಿಶೇಷ ಗುಣ.

 

 

ಮೊನ್ನೆ ಚಾಮುಂಡೇಶ್ವರಿ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿರುವ ತಮ್ಮ ಫಾರಂಹೌಸ್’ನಲ್ಲಿ ದರ್ಶನ್ ಪೂಜಾಮಹೋತ್ಸವ ಏರ್ಪಡಿಸಿದ್ದರು. ಪೂಜಾಮಹೋತ್ಸವಕ್ಕೆ ಆಕಸ್ಮಿಕವಾಗಿ ಅಲ್ಲಿಗೆ ಬಂದ ಅಂಗವಿಕಲ ಅಭಿಮಾನಿಗೆ ಕೈಯಾರೆ ಔತಣ ಕೊಟ್ಟು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ. ಫೋಟೋ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ವೈರಲ್ ಮಾಡಿದ್ದು ದರ್ಶನ್ ಅವರ ಈ ನಡೆಯನ್ನು ಹೊಗಳುತ್ತಿದ್ದಾರೆ.

ಒಂದು ವ್ಯಕ್ತಿತ್ವವಾಗಿ ದರ್ಶನ್ ಮೆಚ್ಚಿಕೊಳ್ಳದಿರುವವರು ಅತೀ ಕಡಿಮೆ. ಅದೇನೇ ಸಾಧಿಸಿದರೂ, ಯಾವ ಎತ್ತರಕ್ಕೆ ಬೆಳೆದಿದ್ದರೂ ತಮಗಾಗಿ ಕಾತರಿಸೋ ಜೀವಗಳನ್ನು ಖುಷಿಯಾಗಿಡುವುದೇ ಜೀವನದ ನಿಜವಾದ ಸೌಂದರ್ಯ. ಈ ಮಾತಿಗೆ ಸೂಕ್ತ ಉದಾಹರಣೆ ದರ್ಶನ್.. ಅಂಕವಿಕಲ ಅಭಿಮಾನಿಯೊಂದಿಗೆ ಸರಳತೆ ಮೆರೆದ ದರ್ಶನ್ ಸರತೆಯ ಸಾಮ್ರಾಟ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top