ಮನೋರಂಜನೆ

KCCಯಲ್ಲೂ ಜೊತೆಯಾಗಲಿದ್ದಾರಾ ದರ್ಶನ್- ಸುದೀಪ್

ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಂತೆಯೇ ಕುಚಿಕ್ಕೂ ಗಳೆಯರಾಗಿ ಪ್ರಸಿದ್ಧರಾಗಿದ್ದವರು ದರ್ಶನ್ ಮತ್ತು ಸುದೀಪ್. ಆದರೆ ಅದೇನು ಸಂಭವಿಸಿತೋ… ಕಳೆದ ವರ್ಷಗಳಿಂದೀಚೆಗೆ ಇವರಿಬ್ಬರ ನಡುವೆ ಮುನಿಸೊಂದು ಹಬ್ಬಿಕೊಂಡಿತ್ತು. ಆದರೆ ಇವರಿಬ್ಬರ ಅಭಿಮಾನಿಗಳು ಸಹ ಮತ್ತೆ ತಮ್ಮ ಇಷ್ಟದ ನಟರು ಒಂದಾಗೋ ಕಾಲಕ್ಕಾಗಿ ತುದಿಗಾಲಲ್ಲಿ ಕಾದು ಕೂತಿದ್ದಾರೆ.. ಇದೀಗ ಈ ಇಬ್ಬರ ಮುನಿಸಿನ ಮಬ್ಬು ಕರಗೋ ಕಾಲ ಹತ್ತಿರದಲ್ಲಿದೆಯಾ? ಅಂತೊಂದು ಪ್ರಶ್ನೆ ದರ್ಶನ್ ಹಾಗೂ ಸುದೀಪ್ ಅಭಿಮಾನಿ ವಲಯದಲ್ಲಿ ಮೂಡಿಕೊಂಡಿದೆ!

 

 

ಹೌದು, ಸುದೀಪ್ ಮತ್ತು ದರ್ಶನ್ ಸುಮಾರು ವರ್ಷಗಳ ನಂತರ ಮತ್ತೆ ಒಂದೇ ವೇದಿಕೆಯ್ಲಲಿ ಕಾಣಿಸಿಕೊಳ್ಳಲಿದ್ದಾರೆ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಆಡಿಯೋ ರಿಲೀಸ್ ಸಮಾರಂಭದಲ್ಲಿ ಸುದೀಪ್ ಮತ್ತು ದರ್ಶನ್ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.. ನಿರ್ಮಾಪಕ ಜಾಕ್ ಮಂಜು ದರ್ಶನ್ ಗೆ ಆಡಿಯೋ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಅಂಬರೀಷ್ ಅವರು ದರ್ಶನ್ ಮತ್ತು ಸುದೀಪ್ ರನ್ನು ಮತ್ತೆ ಒಂದು ಮಾಡಲಿದ್ದಾರೆ.. ಆಗಸ್ಟ್ 10ನೇ ತಾರೀಖೀನಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಅದ್ಧೂರಿ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಇಬ್ಬರೂ ಸೇರಿ ಆಡಿಯೋ ಬಿಡುಗಡೆ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೀಗಿರುವಾಗಲೇ ದರ್ಶನ್ ಅವರು ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರಾ? ಎಂಬ ಪ್ರಶ್ನೆಗಳು ಅಭಿಮಾನಿಗಳ ನಡುವೆ ಎದ್ದಿವೆ. ಆದರೆ ಕೆಸಿಸಿಯಲ್ಲಿ ದರ್ಶನ್ ಭಾಗವಹಿಸುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಯಾವುದೇ ಮಾಹಿತಿ ನಿಖರ ಲಭ್ಯವಾಗಿಲ್ಲ.  ಗೆಳೆಯರಿಬ್ಬರೂ ಒಂದಾಗಿ ಒಟ್ಟಿಗೆ ಬಂದರೆ ಅಭಿಮಾನಿಗಳ ಪಾಲಿಗೆ ಅದಕ್ಕಿಂತಲೂ ಖುಷಿಯ ಸಂಗತಿ ಬೇರೇನಿದೆ? ದರ್ಶನ್ ಮತ್ತು ಸುದೀಪ್ ಅಭಿಮಾನಿಗಳೂ ಕೂಡಾ ಅಂಥಾದ್ದೊಂದು ಪವಾಡಕ್ಕಾಗಿ ಎದುರು ನೋಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top