ಸಮಾಚಾರ

ಸನ್ಯಾಸಿಯಾಗಿ ಬದಲಾದ ವೀರೇಂದ್ರ ಸೆಹ್ವಾಗ್ ,ಏನ್ ಇದು ಸನ್ಯಾಸಿ ಕಥೆ ನೀವೇ ನೋಡಿ

ಸಾಮಾಜಿಕ ಜಾಲತಾಣ ಟ್ವಿಟ್ಟರ್, ಫೇಸ್ಬುಕ್ ನಲ್ಲಿ ಸದಾ ಸಕ್ರಿಯರಾಗಿ ಪೋಸ್ಟ್ ಮಾಡುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಈಗ ಸನ್ಯಾಸಿ ಆಗಿದ್ದಾರೆ. ಯೋಚಿಸುವ ಅಗತ್ಯವಿಲ್ಲ ನಿಜವಾಗಿ ಸನ್ಯಾಸ ದೀಕ್ಷೆ ಪಡೆದಿಲ್ಲ, ಬದಲಾಗಿ ಸನ್ಯಾಸಿ ವೇಷ ತೊಟ್ಟಿದ್ದಾರೆ ಅಷ್ಟೇ.

ಕೈ ಮತ್ತು ಕುತ್ತಿಗೆಗೆ ರುದ್ರಾಕ್ಷಿ ಮಾಲೆ ಹಾಕಿರುವ ಸೆಹ್ವಾಗ್, ಸನ್ಯಾಸಿ ವೇಷ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹಳದಿ ಕುರ್ತಾ, ದೋತಿ ತೊಟ್ಟಿರುವ ಸೆಹ್ವಾಗ್ ಕಪ್ಪು ಕನ್ನಡಕ ಧರಿಸಿದ್ದಾರೆ. ಪೋಸ್ಟ್ ಮಾಡುವಾಗ ಶೀರ್ಷಿಕೆ ಹಾಕಿದ್ದು Guru karna jaan kar, Paani peena chaan kar .Jai Bhole ! Jai Shri Ram ! Jai Bajrangbali ! ಎಂದು ಬರೆದಿದ್ದಾರೆ ಎಂದು ತಿಳಿದು ಬಂದಿದೆ.

 

ಸದ್ಯ ಸೆಹ್ವಾಗ್ ಅವರ ಸನ್ಯಾಸಿ ವೇಷಧಾರಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರಕ್ಕೆ 70 ಸಾವಿರ ಲೈಕ್ಸ್ ಸಿಕ್ಕಿದ್ದು, 8 ಸಾವಿರ ಬಾರಿ ರೀಟ್ವಿಟ್ ಮಾಡಲಾಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ 5 ಲಕ್ಷ ಲೈಕ್ಸ್ ಸಿಕ್ಕಿದೆ ಎನ್ನಲಾಗಿದೆ. ವೀರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದ್ ಚಮಕ್ ನೀಡುತ್ತಾ ಸುದ್ದಿಯಲ್ಲಿ ಇರುತ್ತಾರೆ. ಮುಂದಿನ ಬಾರಿ ಯಾವ ರೀತಿ ಚಮಕ ನೀಡಲಿದ್ದಾರೆ ಕಾದು ನೋಡೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top