ಸಮಾಚಾರ

ಖ್ಯಾತ ನಟಿ ಊರ್ಮಿಳಾ ಬಾಳಲ್ಲಿ ನಡೆದೇ ಹೋಯ್ತು ಅಲ್ಲೊಲ್ಲ ಕಲ್ಲೊಲ್ಲ

ನಟಿ ಊರ್ಮಿಳಾ ಮಾತೋಂಡ್ಕರ್ ರವರು ಬಾಲಿವುಡ್‌ ಖ್ಯಾತ ನಟಿಯಲ್ಲಿ ಒಬ್ಬರು. ಊರ್ಮಿಳಾ, 1980ರಲ್ಲಿ ಕಲಿಯುಗ್ ಸಿನಿಮಾ ಮೂಲಕ ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಮಾಡಿದರು, ನರಸಿಂಹ (1991) ಸಿನಿಮಾದಲ್ಲಿ ನಾಯಕಿ ನಟಿಯಾದರು. ರಂಗೀಲಾ , ಜುದಾಯಿ ಹಾಗು ಸತ್ಯ ಸಿನಿಮಾದದಲ್ಲಿನ ಅಮೋಘ ಅಭಿನಯದಿಂದ ಜನಪ್ರಿಯತೆ ಗಳಿಸಿ ಹಿಂದಿ ಚಲನಚಿತ್ರರಂಗದ ಮುಖ್ಯಧಾರೆಯಲ್ಲಿ ಸ್ಥಾನ ಪಡೆದರು. ಈ ಚಿತ್ರಗಳೆಲ್ಲವೂ ಆಕೆಯನ್ನು ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವಂತೆ ಮಾಡಿದ್ದವು.

ಈ ಹಿಂದೆ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿರುತ್ತಿದ್ದ ನಟಿ ಊರ್ಮಿಳಾ ಈಗ ವೈಯಕ್ತಿಕ ವಿಚಾರದಿಂದ ಈ ಬಾರಿ ನಟಿ ರಂಗೀಲಾ ಸುದ್ದಿಯಲಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಸಿನಿಮಾ ಜೀವನದ ಉತ್ತುಂಗದಲ್ಲಿದ್ದಾಗಲೇ ಉದ್ಯಮಿ ಮೋಸಿನ್ ಕಸ್ತರ್ ಜೊತೆ ಮದುವೆಯಾದ ನಟಿ ಬಳಿಕ ಕೆಲ ವರ್ಷ ಸಿನೆಮಾದಿಂದ ದೂರವಿದ್ದರು. ಆಮೇಲೆ ಮತ್ತೆ ಸಿನಿಮಾ ರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದರು. ಆದರೆ ಈಗ ಊರ್ಮಿಳಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 

 

ಮೂಲಗಳ ಮಾಹಿತಿ ಪ್ರಕಾರ ಊರ್ಮಿಳಾ ಪತಿ ಸಿಡುಕು ಸ್ವಭಾವದವರಾಗಿದ್ದಾರೆ. ಇದರಿಂದ ಉರ್ಮಿಳಾಗೆ ತೊಂದರೆ ಅನುಭವಿಸುವಂತಾಗಿದೆ. ಆದರೆ ಊರ್ಮಿಳಾ ಪತಿಯ ಕಿರುಕುಳವನ್ನು ಸಹಿಸಿಕೊಂಡು ಇರುತ್ತಿದ್ದರು. ನಗುಮುಖದಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಪತಿಯ ಬಗ್ಗೆ ನೇರವಾಗಿ ಎಲ್ಲಿಯೂ ಆರೋಪ ಮಾಡಿರಲಿಲ್ಲ.

ತಮ್ಮ ದಾಂಪತ್ಯ ಕಲಹದ ಬಗ್ಗೆ ದಂಪತಿಗಳು ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಇಬ್ಬರ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಈಗ ಗುಟ್ಟಾಗಿ ಉಳಿದಿಲ್ಲ. ಅಭಿಮಾನಿಗಳು ಊರ್ಮಿಳಾ ದಂಪತಿಗಳು ಒಟ್ಟಾಗಿ ಇರಲಿ ಎಂದು ಆಶಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ದಂಪತಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top