ಮನೋರಂಜನೆ

ದಕ್ಷಿಣದಲ್ಲಿ ಕಾಮಿಡಿ ಸ್ಟಾರ್ ಆಗಿ ಬದಲಾದ ಸನ್ನಿ ಲಿಯೋನ್- ಕಾಮಿಡಿಯನ್ ಪಾತ್ರ ಒಪ್ಪಿಕೊಳ್ಳೋಕೆ ಕಾರಣವೇನು ಗೊತ್ತಾ?

ನೀಲಿಚಿತ್ರಗಳ ತಾರೆಯೆಂಬ ಹಣೆಪಟ್ಟಿಯಿಂದ ಕಳಚಿಕೊಳ್ಳುವ ಸಲುವಾಗಿ ನಾಯಕ ನಟಿಯಾಗಿ ರೂಪುಗೊಂಡಿರುವಾಕೆ ಸನ್ನಿ ಲಿಯೋನೀ. ಬಾಲಿವುಡ್‌ನ ಇತರೇ ನಟಿಯರೆಲ್ಲ ಸೇರಿಕೊಂಡು ಈಕೆಯನ್ನು ನೀಲಿ ಚಿತ್ರಗಳಿಗೇ ಬ್ರ್ಯಾಂಡ್ ಮಾಡಿ ಮೂಲೆಗೆ ನೂಕುವ ಪ್ರಯತ್ನ ಮಾಡಿದಷ್ಟೂ ಪುಟಿದೆದ್ದು ನಿಲ್ಲುತ್ತಾ ಬಂದಿರುವ ಸನ್ನಿಯ ಚಿತ್ರಗಳು ಪಡೆಯೋ ಭಾರೀ ಪ್ರಚಾರ ಕಂಡು ಬಾಲಿವುಡ್ ನಟಿಯರನೇಕರು ಕರುಬುತ್ತಾ ನೆಟಿಕೆ ಮುರಿಯಲಾರಂಭಿಸಿದ್ದಾರೆ. ಅಂಥಾ ಕೆಲ ಖಾಲಿ ಕೂತ ಹೊಟ್ಟೆಕಿಚ್ಚಿನ ನಟಿಯರು ಸನ್ನಿ ವಿರುದ್ಧ ಹೇಳಿಕೆ ನೀಡೋ ಮೂಲಕ ತಮ್ಮ ಅಸಹನೆ ಹೊರ ಹಾಕಿದಷ್ಟೂ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಲಾರಂಭಿಸಿದೆ.

 

 

ನಾಲ್ಕು ಗೋಡೆಗಳ ಮಧ್ಯದ ಸೀಮಿತ ದೃಷ್ಯಾವಳಿಗಳಲ್ಲೂ ಶಕ್ತಿ ಮೀರಿ ನಟಿಸುತ್ತಾ ತನ್ನ ಪ್ರತಿಭೆಯನ್ನು ಖುಲ್ಲಂಖುಲ್ಲ ಜಗತ್ತಿನೆದುರು ಅನಾವರಣಗೊಳಿಸಿರುವಾಕೆ ಸನ್ನಿ ಲಿಯೋನ್. ಬಾಲಿವುಡ್ ಇರಲಿ, ಹಾಲಿವುಡ್ಡೇ ಇರಲಿ, ಅದೆಂಥಾ ಪ್ರತಿಭಾವಂತ ನಟಿಯರೇ ಆಗಿದ್ದರೂ ಸರಿಯೇ; ಅವರ‍್ಯಾರೂ ಸನ್ನಿಗೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲ. ಯಾಕೆಂದರೆ, ಕೊಂಚ ಶ್ರಮ ಹಾಕಿದರೆ ಆ ನಟಿಯರು ನಟಿಸಿದ ಪಾತ್ರಗಳಲ್ಲಿ ಸನ್ನಿ ನಟಿಸಬಹುದು. ಆದರೆ ಸನ್ನಿ ಲಿಯೋನ್ ನಿರ್ವಹಿಸಿರೋ ಪಾತ್ರಗಳಲ್ಲಿ ಕಾಣಿಸಿಕೊಳ್ಳೋ ಗುಂಡಿಗೆ ಯಾವ ನಟಿಯರಿಗೂ ಇದ್ದಂತಿಲ್ಲ.

ಇಂಥಾ ಅಪರೂಪದ ಪ್ರತಿಭೆಯಿಂದಲೇ ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡಿರೋ ಸನ್ನಿ ಇದೀಗ ಕಾಮಿಡಿಯನ್ ಆಗಿಯೂ ಮುಂಚಲು ಮುಂದಾಗಿದ್ದಾಳೆ. ಮಲೆಯಾಳಂ ಚಿತ್ರದಲ್ಲಿನ ಕಾಮಿಡಿಯನ್ ಪಾತ್ರವನ್ನು ಮಾಡಿಕೊಂಡಿರುವ ಸನ್ನಿ ಅದಕ್ಕಾಗಿ ಹೋಮ್ ವರ್ಕನ್ನು ಆರಂಭಿಸಿದ್ದಾಳಂತೆ. ಚಿತ್ರದ ಕತೆಯನ್ನು ಕೇಳಿ ಫಿದಾ ಆಗಿರುವ ಸನ್ನಿ ಕತೆಗೆ ತಕ್ಕಂತೆ ತನ್ನ ಪಾತ್ರ ವಿಭಿನ್ನವಾಗಿದ್ದು ಅದಕ್ಕಾಗಿಯೇ ಮಾಡಲು ಒಪ್ಪಿಕೊಂಡಿದ್ದಾಳಂತೆ ನಿರ್ಮಾಪಕ ಒಮರ್ ಲಾಲುರವರ ಮುಂಬರುವ ಕಾಮಿಡಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದಾಳಂತೆ. ಸನ್ನಿ, ಜಯರಾಮ್, ಧರ್ಮರಾಜನ್ ಬಾಲಗಟ್ಟಿ ಹಾಗೂ ಹನಿರೋಸ್ ಮತ್ತು ವಿನಯ್ ಫೋರ್ಟ್ ಮುಖ್ಯ ಭೂಮಿಕೆಯಲ್ಲಿ ಈ ಚಿತ್ರ ಮೂಡಿಬರಲಿದೆ.

ಸನ್ನಿ ಲಿಯೋನ್ ಸದ್ಯ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ವೀರಮಹಾದೇವಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಅದು ಮುಗಿದ ನಂತರ ಇನ್ನೂ ಹೆಸರಿಡದ ಈ ಕಾಮಿಡಿ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾಳಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top