ಸಮಾಚಾರ

ದಕ್ಷಿಣದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಹಿಂದಿ ನಟ ಯಾರಂತೆ ಗೊತ್ತಾ

ಈ ಹಿಂದೆ ಬಾಲಿವುಡ್ ನಲ್ಲಿ ಅಭಿನಯ ಮಾಡಿ ಮಿಂಚುತ್ತಿದ್ದ ಖ್ಯಾತ ನಟ ವಿವೇಕ್ ಒಬೆರಾಯ್ ಈಗ ದಕ್ಷಿಣ ಭಾರತೀಯ ಸಿನೆಮಾಗಳ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ವಿವೇಕ್ ಒಬೆರಾಯ್ ಸದ್ಯ ಬಾಲಿವುಡ್ ನ ಯಾವುದೇ ಚಿತ್ರಗಳಲ್ಲಿ ಅಭಿನಯ ಮಾಡುತ್ತಿಲ್ಲ. ದಕ್ಷಿಣ ಸಿನಿಮಾ ರಂಗದಲ್ಲಿ ಹೆಚ್ಚೆಚ್ಚು ಆಫರ್ ಪಡೆಯುತ್ತಿರುವ ವಿವೇಕ್, ಉದ್ಯಮದಲ್ಲಿ ಹೆಚ್ಚು ಸಂಭಾವನೆ ಪಡೆಯುವ ಹಿಂದಿ ನಟರಾಗಿದ್ದಾರೆ ಎಂದು ತಿಳಿದು ಬಂದಿದೆ.

ದಕ್ಷಿಣ ಸಿನಿಮಾ ರಂಗದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯ್ ಮಾಡುತ್ತಿರುವ ವಿವೇಕ್ ಇಲ್ಲಿ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ವಿವೇಗಮ್ ಚಿತ್ರದ ಮೂಲಕ ವಿವೇಕ್ ಒಬೆರಾಯ್ ಪ್ರಸಿದ್ಧಿಯನ್ನು ಪಡೆದರು. ಚಿತ್ರದಲ್ಲಿ ಅಜಿತ್ ಜೊತೆ ಕಾಣಿಸಿಕೊಂಡಿದ್ದ ವಿವೇಕ್, ವಿಲನ್ ಆಗಿ ಅಭಿನಯ ಮಾಡಿದ್ದರು. ಆದ್ರೆ ಅಜಿತ್ ಗೆ ನೀಡಿದಷ್ಟೇ ಸಂಭಾವನೆಯನ್ನು ವಿವೇಕ್ ಗೆ ಕೂಡ ನೀಡಲಾಗಿತ್ತು. ಈ ಚಿತ್ರ ಯಶಸ್ಸು ಕಾಣ್ತಿದ್ದಂತೆ ವಿವೇಕ್ ದಕ್ಷಿಣ ಚಿತ್ರಗಳಲ್ಲಿ ಗಟ್ಟಿಯಾಗಿ ಉಳಿದು ಬಿಟ್ಟಿದ್ದಾರೆ.

 

 

ವಿವೇಕ್ ಒಬೆರಾಯ್ ಗೆ ಈಗ ಕನ್ನಡ, ತೆಲುಗು, ಮಲೆಯಾಳಂ ಹಾಗೂ ತಮಿಳು ಚಿತ್ರಗಳಿಂದ ಆಫರ್ ಬರುತ್ತಿವೆ ಎನ್ನಲಾಗಿದೆ. ಈಗ ಕನ್ನಡದ “ರುಸ್ತುಂ’ ಚಿತ್ರಕ್ಕೂ ಸೈ ಅಂದಿದ್ದಾರೆ. ಶಿವರಾಜ್ ಕುಮಾರ ಅವರ “ರುಸ್ತುಂ’ ಸಿನಿಮಾದಲ್ಲಿ ವಿವೇಕ್‌ ಒಬೆರಾಯ್‌ ಅಭಿನಯ ಮಾಡಲು ಒಪ್ಪಿದ್ದಾರೆ. ಚಿತ್ರದಲ್ಲಿ ಶಿವಣ್ಣ ಎದುರು ನಿಲ್ಲುವ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಅದಕ್ಕಾಗಿ ನಟರ ಹುಡುಕಾಟ ನಡೆಸಿದ ಚಿತ್ರತಂಡಕ್ಕೆ ವಿವೇಕ್‌ ಒಬೆರಾಯ್‌ ಸೂಕ್ತ ಎಂದೆನಿಸಿದೆ. ಅದಕ್ಕೆ ಸರಿಯಾಗಿ ಕಥೆ ಕೇಳಿದ ವಿವೇಕ್‌ ಕೂಡಾ ಖುಷಿಯಿಂದ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ಸಿನೆಮಾದಲ್ಲೂ ಕೂಡ ವಿವೇಕ್ ಒಬೆರಾಯ್ ಅಭಿನಯ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ತೆಲುಗು ನಟ ರಾಮ್ ಚರಣ್ ತೇಜಾ ಜೊತೆಗೆ ಇನ್ನೊಂದು ಸಿನೆಮಾಗೆ ಸಹಿ ಹಾಕಿದ್ದಾರಂತೆ. ಒಟ್ನಲ್ಲಿ ವಿವೇಕ್ ಒಬೆರಾಯ್ ಈಗ ದಕ್ಷಿಣದಲ್ಲಿ ಮಿಂಚುತ್ತಿದ್ದಾರ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top