ಮನೋರಂಜನೆ

ಅಂದು ಕಿತ್ತಾಡಿಕೊಂಡಿದ್ದ ಶೋನಲ್ಲೇ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಶಾರುಖ್ ಮತ್ತು ಸಲ್ಮಾನ್.

ಬಾಲಿವುಡ್ ಸೂಪರ್ ಸ್ಟಾರ್’ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವೆ ಇರೋದು ಒಂದು ರೀತಿಯ ಲವ್ ಅಂಡ್ ಹೇಟ್ ರಿಲೇಷನ್ ಅಂತಲೇ ಹೇಳಬಹುದು. ಏಕೆಂದರೆ ಒಟ್ಟೊಟ್ಟಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟು ಜೊತೆಯಲ್ಲೇ ಸ್ಟಾರ್’ಗಳಾಗಿ ಬೆಳೆದ ಇವರು ಆಗಿನಿಂದಲೂ ಉತ್ತಮ ಗೆಳೆಯರು.. ಹಾಗಿದ್ದರೂ ಆಗೋಮೆ ಹೀಗೊಮ್ಮೆ ಸಣ್ಣ ಪುಟ್ಟ ವಿಚಾರಕ್ಕೂ ಕಿತ್ತಾಡಿಕೊಂಡಿದ್ದ ಇವರು ವರ್ಷಾನುಗಟ್ಟಲೆ ಮುನಿಸಿಕೊಂಡಿದ್ದೂ ಇದೆ.. ಇಂಥಾ ಸ್ಟಾರ್ ಸ್ನೇಹಿತರು ಸದ್ಯ ಅನ್ಯೋನ್ಯವಾಗಿಯೇ ಇದ್ದಾರೆ.

 

 

ಶಾರುಖ್ ಮತ್ತು ಸಲ್ಮಾನ್ ಹಿಂದೊಮ್ಮೆ ಕಿತ್ತಾಡಿಕೊಂಡಿದ್ದ ಕಿರುತೆರೆ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ನಿರೂಪಕನಾಗಿ ನಡೆಸೆಕೊಡುತ್ತಿರುವ ‘ದಸ್ ಕಾ ಧಮ್’ ಶೋನಲ್ಲಿ ಶಾರುಖ್ ಅತಿಥಿಯಾಗಿ ಆಗಮಿಸುತ್ತಿದ್ದು ಈ ಮೂಲಕ ಈ ಇಬ್ಬರೂ ಸ್ಟಾರ್ ದ್ವಯರು ಜೊತೆಯಾಗಿ ಮತ್ತೊಮ್ಮೆ ಅದೇ ಕಾರ್ಯಕರಮದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸಂಚಿಕೆಯ ಪ್ರೊಮೊ ಬಿಡುಗಡೆಯಾಗಿದ್ದು ಎಲ್ಲೆಡೆ ಸಿಕ್ಕಾಪಟ್ಟೆ ಹರಿದಾಡುತ್ತಿದೆ..

2008 ರಲ್ಲಿ ಸಲ್ಮಾನ್ ಖಾನ್ ‘ದಸ್ ಕಾ ಧಮ್’ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಇದೇ ಸಮಯದಲ್ಲಿ ಶಾರುಕ್ ಕೂಡ ಮತ್ತೊಂದು ಟಿವಿ ಶೋವನ್ನು ಹೋಸ್ಟ್ ಮಾಡುತ್ತಿದ್ದರು. ಈ ಎರಡು ಶೋಗಳಲ್ಲಿ ಸಲ್ಮಾನ್ ನಡೆಸಿಕೊಡುತ್ತಿದ್ದ ಶೋಗೆ TRP ಜಾಸ್ತಿಯಿತ್ತು.. ಈ ವಿಚಾರದ ಬಗ್ಗೆ ತಮ್ಮ ಶೋನಲ್ಲಿ ಪ್ರತಿಕ್ರಿಯಿಸಿದ್ದ ಸಲ್ಮಾನ್ ಚಿಟಕೆ ಹೊಡೆದು ಇನ್ನು ಮುಂದೆ ‘ಕಿಂಗ್ ಖಾನ್’ ಎಂದು ಹೆಸರು ಹೇಳೋದನ್ನು ನಿಲ್ಲಿಸಿ ಎಂದು ಹೇಳಿದ್ದರು. ನಂತರ ಶಾರುಕ್ ಕೂಡ ವೈಯಕ್ತಿಕವಾಗಿ ಕಮೆಂಟ್ ಮಾಡಿದ್ದರು. ಇದಾದ ನಂತರ ಸುಮಾರು ವರ್ಷಗಳ ಕಾಲ ಇಬ್ಬರೂ ಮುನಿಸಿಕೊಂಡಿದ್ದರು. 2013ರಲ್ಲಿ ಈ ಇಬ್ಬರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮತ್ತೆ ಒಂದಾಗಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top