ಸಮಾಚಾರ

ಮದುವೆಯಲ್ಲಿ ಪತಿ-ಪತ್ನಿ ಜೊತೆಯಾಗಿ ಸಪ್ತಪದಿ ಅಂದರೆ ಆ ಏಳು ಹೆಜ್ಜೆಗಳ ಇಡುವ ಅರ್ಥವೇನು ಗೊತ್ತಾ,ಅದರ ಹಿಂದೆ ಇರುವ ಉದ್ದೇಶ ಏನು ಅಂತ ಗೊತ್ತಾ ,ತಿಳ್ಕೊಳ್ಳಿ

ಹಿಂದೂ ಮದುವೆಯು ಇಬ್ಬರು ಸೂಕ್ತ, ಸಮರಸದ ವ್ಯಕ್ತಿಗಳನ್ನು ಒಟ್ಟಿಗೆ ತರುವ ಪ್ರಕ್ರಿಯೆಯೇ ವಿವಾಹವೆನಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಸಂಸ್ಕಾರ ಬರಿ ಆಡಂಬರದ ವಿಧಿ ಆಗಿರುವದು ವಿಷಾದದ ಸಂಗತಿ. ಮದುವೆ ದಿನದಂದು ಸಪ್ತಪದಿಯ ಹೆಜ್ಜೆ ಇಡುವಾಗ ಸ್ವೀಕರಿಸುವ ಪ್ರತಿಜ್ಞಾನವಿಧಿಯನ್ನು ಆಚರಣೆಗೆ ತಂದಾಗ ನೂತನ ದಂಪತಿ ಆದರ್ಶ ದಂಪತಿ ಆಗಿ ಬಾಳುವುದರಲ್ಲಿ ಸಂದೇಹವೇ ಇಲ್ಲ. ವಿವಾಹವಾಗುವ ನೂತನ ದಂಪತಿಗಳಿಗೆ ಪುರೋಹಿತರು ಸಪ್ತಪದಿಯ ಮಹತ್ವನ್ನು ತಿಳಿಯಪಡಿಸಬೇಕಾದ ಅಗತ್ಯ ಇದೆ.

ಮದುವೆ ಎಂದರೆ ವಿಶೇಷವಾಗಿರುವ ಸಾಮಾಜಿಕ ಹೊಣೆಗಾರಿಕೆಯನ್ನು ಎದುರಿಸುವುದು. ‘ವಿಶೇಷ ವಹನಂ’ ಗೃಹಸ್ಥನಾಗಿ ಕುಟುಂಬದ ನಿರ್ವಹಣೆಯನ್ನು ಮಾಡೋದು, ಬ್ರಹ್ಮಪಿತೃ, ಯಜ್ಞಾದಿಗಳು, ದೇವ ಋುಣ, ಋುಷಿ ಋುಣ, ಪಿತೃ ಋುಣ, ತ್ರಯಗಳನ್ನು ತೀರಿಸಲು ಅಧಿಕಾರವನ್ನು ಪಡೆಯುವುದೇ ಮದುವೆ ಬಂಧನ.

 

 

ಮದುವೆಯಲ್ಲಿ ‘ಸಪ್ತಪದಿ’ ಬಹಳ ಮುಖ್ಯವಾದದ್ದು. ಮಾಂಗಲ್ಯಧಾರಣೆಯ ನಂತರದ ಕಾರ್ಯ ಸಪ್ತಪದಿಗೆ ಅತ್ಯಂತ ಮಹತ್ವಪೂರ್ಣ ಸ್ಥಾನ ನೀಡಲಾಗುವುದು. ಸಪ್ತಪದಿಯ ಶಾಸ್ತ್ರ ಮಾಡಲೇಬೇಕು. ಮದುವೆಯಲ್ಲಿ ವಧು ವರರು ಪ್ರದಕ್ಷಿಣೆ ಮಾಡುತ್ತಾ 7 ಹೆಜೆಯನ್ನು ಇಡುವುದನ್ನು ಸಪ್ತಪದಿ ಎಂದು ಹೇಳಲಾಗುತ್ತದೆ. ಈ ಏಳು ಹೆಜ್ಜೆಗಳು ಏಳು ಬಯಕೆಗಳಿಗೆ ಸಂಕೇತ ಆಗಿರುತ್ತದೆ.

ವಧು ವರರು ಒಂದಾಗಿ ಮೊದಲನೆ ಹೆಜ್ಜೆಯನ್ನು ಇಡುವುದರಿಂದ ತಿನ್ನುವುದಕ್ಕೆ ಅನ್ನವನ್ನು, ಎರಡನೆಯ ಹೆಜ್ಜೆಯನ್ನು ಇಡುವುದರಿಂದ ತಿಂದ ಅನ್ನದಿಂದ ಬಲವನ್ನು, ಮೂರನೆಯ ಹೆಜ್ಜೆ ಇಡುವುದರಿಂದ ಬಲದಿಂದ ಒಳ್ಳೆಯ ಕೆಲಸಗಳನ್ನು, ನಾಲ್ಕನೆಯ ಹೆಜ್ಜೆ ಇಡುವುದರಿಂದ ಒಳ್ಳೆಯ ಕೆಲಸಗಳಿಂದ ಸುಖವನ್ನು, ಐದನೇ ಹೆಜ್ಜೆ-ಸುಖದಿಂದ ಸಮೃದ್ಧಿಯನ್ನು, ಆರನೇ ಹೆಜ್ಜೆ-ಋತು ಸಂಪತ್ತನ್ನು, ಏಳನೇ ಹೆಜ್ಜೆ-ಏಳೇಳು ಜನ್ಮಕ್ಕೂ ನಾವು ಇಬ್ಬರು ಪತಿ ಪತ್ನಿಯಾಗಿರಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದು ಉದ್ದೇಶ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top