ಸಮಾಚಾರ

ಇನ್ನೂ ಕೆಲವೇ ತಿಂಗಳುಗಳಲ್ಲಿ ಸಾನಿಯಾ ಮಿರ್ಜಾ ಜೀವನದ ರಹಸ್ಯಗಳು ಬಯಲಾಗಲಿದೆ .ಹೇಗೆ ಅಂತೀರಾ,ನೋಡಿ ನೀವೇ

ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಯಾರಿಗೆ ಗೊತ್ತಿಲ್ಲ ಹೇಳಿ ತನ್ನ ಅಮೋಘ ಟೆನಿಸ್ ಆಟದ ಪ್ರದರ್ಶನದ ಮೂಲಕ ಭಾರತಕ್ಕೆ ಹೆಸರು ತಂದುಕೊಟ್ಟ ಖಾತಿ ಸಾನಿಯಾ ಮಿರ್ಜಾ ಅವರಿಗೆ ಸಲ್ಲುತ್ತದೆ. ತಾರೆ ಸಾನಿಯಾ ಮಿರ್ಜಾ ರವರ ಜೀವನ ಯಾವ ಸಿನಿಮಾಗೇನು ಕಮ್ಮಿ ಇಲ್ಲ. ಅದಕ್ಕಾಗಿ ಬಾಲಿವುಡ್ ನಿರ್ದೇಶಕರು ಈ ಹಿಂದೆಯೇ ಸಾನಿಯಾಗೆ ಅಪ್ರೋಚ್ ಮಾಡಿದ್ದರು. ಆದರೆ ಆಗ ಸಾನಿಯಾ ಒಪ್ಪಿರಲಿಲ್ಲ.

ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ಮಿಲ್ಕಾ ಸಿಂಗ್, ಸೈನಾ ನೆಹ್ವಾಲ್ ಹೀಗೆ ಅನೇಕ ಕ್ರೀಡಾಪಟುಗಳು ಸಿನಿಮಾ ಬಂದಿವೆ. ಈಗ ಸಾನಿಯಾ ಮಿರ್ಜಾ ಸಿನಿಮಾ ಕೂಡ ಬರಲಿದೆ ಎನ್ನಲಾಗುತ್ತಿದೆ. ಈಗ ಸಾನಿಯಾ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಮೂಲಗಳ ಮಾಹಿತಿ ಪ್ರಕಾರ ಸಾನಿಯಾ ಕುರಿತಾದ ಸಿನಿಮಾ ಮಾಡಲು ಹಕ್ಕನ್ನು ಬಾಲಿವುಡ್ ಸಿನಿಮಾ ನಿರ್ಮಾಪಕ ರೋನೀ ಸ್ಕ್ರೂವಾಲಾ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರದಲ್ಲಿ ಸಾನಿಯಾರ ಟೆನಿಸ್ ವೃತ್ತಿ ಬದುಕಿನ ಜತೆಗೆ ಅವರ ಪಾಕಿಸ್ತಾನ ಪತಿ ಶೊಯೇಬ್ ಮಲಿಕ್ ಜತೆಗಿನ ಪ್ರೇಮ ಸಂಬಂಧ ಇತ್ಯಾದಿ ವೈಯಕ್ತಿಕ ಬದುಕಿನ ವಿವರಣೆಯೂ ಇರಲಿದೆ ಎನ್ನಲಾಗಿದೆ. ಹಾಗಾಗಿ ಸಾನಿಯಾರ ವೈಯಕ್ತಿಕ ಬದುಕಿನ ಬಗ್ಗೆಯೂ ತಿಳಿಯುವ ಕುತೂಹಲವಿದ್ದರೆ ಈ ಸಿನಿಮಾ ನೋಡಬಹುದು. ತಾರಾಗಣ, ತಂತ್ರಜ್ಞರ ಆಯ್ಕೆ ಇನ್ನಷ್ಟೇ ಶುರು ಆಗಬೇಕಿದೆ.

ಸದ್ಯ ಸಾನಿಯಾ ಮಿರ್ಜಾ ಅವರು ತಾವು ಗರ್ಭಿಣಿ ಆಗಿದ್ದು ಟೆನಿಸ್ ಕ್ರೀಡೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಸಾನಿಯಾ ಮಿರ್ಜಾಗೆ ಅಕ್ಟೋಬರ್ ನಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top