ಮನೋರಂಜನೆ

ಆದಷ್ಟು ಬೇಗ ಹಣ್ಣಣ್ಣು ಮುದುಕಿಯಾಗುತ್ತಾಳಂತೆ ಬಹುಭಾಷಾ ನಟಿ ಸಮಂತಾ.

ಲಕ್ಕಿ ಚಾರ್ಮ್ ಕ್ಯೂಟ್ ಸುಂದರಿ ಸಮಂತ ಕೆಲದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸೌತ್ ಇಂಡಷ್ಟ್ರಿಯಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ಕಾಣಿಸುತ್ತಿರುವ ಸ್ಯಾಮ್ ಕಳೆದ ವರ್ಷ ತಾನೇ ಅಕ್ಕಿನೇನಿ ನಾಗಾರ್ಜುನನನ್ನು ಕಟ್ಟಿಕೊಳ್ಳೋ ಮೂಲಕ ಸಂಸಾರಸ್ಥೆಯಾಗಿದ್ದಳು. ಮದುವೆಯಾದ ಮೇಲೆ ನಟನೆಗೆ ಫುಲ್ ಸ್ಟಾಪ್ ಹಾಕುತ್ತಾರೆ ಎಂಬ ಆತಂಕವೊಂದು ಅವರ ಅಭಿಮಾನಿಗಳಲ್ಲಿ ಕಾಡಿತ್ತು ಆದರೆ ಆ ಆತಂಕವನ್ನೆಲ್ಲಾ ಥಂಡಾ ಹೊಡೆಸುವಂತೆ ಸಮಂತಾ ಹೊಸ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

 

 

ಸಂಸಾರವನ್ನ ನೀಟಾಗಿ ಮೇಂಟೇನು ಮಾಡುತ್ತಲೇ ಅತ್ತ ಚಿತ್ರಗಳಲ್ಲಿಯೂ ನಟಿಸುತ್ತಾ ಮುಂದುವರಿಯುತ್ತಿರುವ ಸಮಂತಾ ಇತ್ತೀಚಿಗೆ ಕಮರ್ಷಿಯಲ್ ಸಿನಿಮಾಗಳ ಮೇಲಿನ ಒಲವನ್ನು ಕಳೆದುಕೊಂಡಂತೆ ಕಾಣುತ್ತಿದೆ. ಯಾಕೆಂದರೆ ಕೇವಲ ಗ್ಲಾಮರ್ ತೋರಿಸೋದಕ್ಕೆ ಮತ್ತು ಡ್ಯಾನ್ಸ್ ಮಾಡುವುದಕ್ಕೆ ಮಾತ್ರ ಸೀಮಿತವಾಗುವ ಕಮರ್ಷಿಯಲ್ ಸಿನಿಮಾಗಳಲ್ಲಿ ಹೀರೋಯಿನ್’ಗಳಿಗೆ ಹೆಚ್ಚಿನ ಸ್ಕೋಪ್ ಇರೋದಿಲ್ಲ ಎಂಬುದು ಆಕೆಯ ನಿಲುವು. ಅದಕ್ಕಾಗಿಯೇ ಸಮಂತಾ ಇತ್ತೀಚಿಗೆ ಯೂಟರ್ನ್ ರೀತಿಯ ಹೀರೋಯಿನ್ ಪಾತ್ರಕ್ಕೆ ಪ್ರಾಮುಖ್ಯತೆಯಿರುವ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಉತ್ಸುಕಳಾಗುತ್ತಿದ್ದಾಳೆ.

ಇದೆ ವರ್ಷ ತೆರೆಕಂಡಿದ್ದ ರಂಗಸ್ಥಲಂನಲ್ಲಿ ಹಳ್ಳಿ ಹುಡುಗಿಯ ಹಾಗೂ ರಾಜುಗಾರಿ ಗಾದಿ-2 ರಲ್ಲಿ ದೆವ್ವದ ಪಾತ್ರದಲ್ಲಿ ಗಮನಸೆಳೆದಿದ್ದ ಸಮಂತಾ ಯೂಟರ್ನ್’ನಲ್ಲಿ ಕ್ರೈಮ್ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅಂತದ್ದೇ ಮತ್ತೊಂದು ವಿಭಿನ್ನ ಪಾತ್ರ ಸಮಂತಾಳನ್ನು ಹುಡುಕಿಕೊಂಡು ಹೋಗಿದೆ. ದಕ್ಷಿಣ ಕೊರಿಯಾದ ‘ಮಿಸ್ ಗ್ಯ್ರಾನಿ’ ಸಿನಿಮಾವನ್ನು ನಿರ್ದೇಶಕಿ ನಂದಿನಿ ರೆಡ್ಡಿ ತೆಲುಗಿಗೆ ರಿಮೇಕ್ ಮಾಡಲು ಹೊರಟಿದ್ದು ಈ ನಾಯಕಿ ಪ್ರಧಾನ ಚಿತ್ರಕ್ಕೆ ಸಮಂತಾ ಅವರನ್ನು ನಟಿಸಲು ಕೇಳಲಾಗಿದೆಯಂತೆ. 70ವರ್ಷದ ಅಜ್ಜಿ ಹಠಾತ್ತನೇ 20 ವರ್ಷದ ಯುವತಿಯಾಗಿ ಬದಲಾಗುವ ಕಥೆಯನ್ನು ಈ ಸಿನಿಮಾ ಹೊಂದಿದ್ದು ಒಂದೊಮ್ಮೆ ಸಮಂತಾ ಒಪ್ಪಿಗೆ ಸೂಚಿಸಿದರೇ ಸದ್ಯದಲ್ಲೇ ಹಣ್ಣಣ್ಣು ಮುದಿಕಿಯಾಗೋದು ಗ್ಯಾರಂಟೀ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top