ಮನೋರಂಜನೆ

ಕಿಚ್ಚ ಸುದೀಪ್ ಜೊತೆ ತೆರೆ ಹಂಚಿಕೊಳ್ಳುತ್ತಾರಂತೆ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಭಾರೀ ಹೆಸರು, ಅವಕಾಶ ಪಡೆದುಕೊಂಡಿರೋ ನಟಿ ರಶ್ಮಿಕಾ ಮಂದಣ್ಣ. ದರ್ಶನ್, ಗಣೇಶ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡದ ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಪಡೆದುಕೊಂಡಿರೋ ರಶ್ಮಿಕಾ ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾರಂಗದಲ್ಲೂ ಮಿರಮಿರ ಮಿಂಚುತ್ತಿದ್ದಾಳೆ. ರಶ್ಮಿ ಮಂದಣ್ಣ ಬಾಚಿಕೊಳ್ಳುತ್ತಿರೋ ಅವಕಾಶ ಕಂಡು ಖಾಲಿ ಕೂತಿರುವ ನಟಿಯರೆಲ್ಲಾ ನಟಿಕೆ ಮುರಿಯಲಾರಂಭಿಸಿದ್ದಾರೆ. ಯಾಕೆಂದರೆ ಈ ಹುಡುಗಿಗೆ ಸಾಲು ಸಾಲಾಗಿ ಸ್ಟಾರ್‌ಗಳ ಚಿತ್ರದಲ್ಲೇ ಅವರಕಾಶಗಳ ಸುರಿಮಳೆಯಾಗುತ್ತಿದೆ!

 

 

ಇಂಥಾ ರಶ್ಮಿಕಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡುವಆಸೆಯನ್ನು ವ್ಯಕ್ತಪಡಿಸಿದ್ದಾರೆ. ಹೌದು ರಶ್ಮಿಕಾ ಅಪರೂಪಕ್ಕೆ ನೆನ್ನೆ ಫೇಸ್ಬುಕ್ ಲೈವ್ ಬಂದಿದ್ದಳು. ಈ ವೇಳೆ ಕಿಕ್ಕಿರಿದು ಲೈವ್ ನೋಡುತ್ತಿದ್ದ ಅವರ ಅಭಿಮಾನಿಗಳು ಸರಣಿಯೋಪಾದಿಯಾಗಿ ನಾನಾ ರೀತಿಯಾ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಅಭಿಮಾನಿಗಳು ಕಿಚ್ಚನ ಜೊತೆ ಯಾವಾಗ ನಟಿಸುತ್ತೀರಾ? ಎಂಬ ಪ್ರಶ್ನೆಯನ್ನು ಪದೇ ಪದೇ ಕೇಳಿದ್ದಾರೆ. ಇವರೆಲ್ಲರ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ಅಂಥದ್ದೊಂದು ಅವಕಾಶ ಕೂಡಿಬಂದರೆ ಖಂಡಿತ ನಟಿಸೋದಾಗೆ ಹೇಳಿಕೊಂಡಿದ್ದಾರೆ.

ಸುದೀಪ್ ಸರ್ ನನಗೆ ಟೀಚರ್ ಇದ್ದಂತೆ, ಅವರ ಜೊತೆ ನಟಿಸುವ ಅವಕಾಶ ಸಿಕ್ಕರೆ ಯಾರ್ ತಾನೇ ಬೇಡ ಅಂತಾರೆ. ಅವರ ಜೊತೆ ತೆರೆ ಹಂಚಿಕೊಳ್ಳೋ ಅದೃಷ್ಟ ಸಿಕ್ಕರೆ ಖಂಡಿತ ನಟಿಸುತ್ತ್ತೇನೆ ಎಂದರು.. ಒಟ್ಟಿನಲ್ಲಿ ಸುದೀಪ್ ಮತ್ತು ರಶ್ಮಿಕಾರನ್ನು ತೆರೆ ಮೇಲೆ ನೋಡಬೇಕು ಎಂಬ ಅಭಿಮಾನಿಗಳ ಆಸೆ ಈಡೇರಲಿದೆಯೇ ಎಂಬುದನ್ನು ಕಾಲವೇ ನಿರ್ಣಯಿಸಲಿದೆ. ಸದ್ಯ ರಶ್ಮಿಕಾ ಕನ್ನಡದ ಯಜಮಾನ ಮತ್ತು ವೃತ್ರ ಎಂಬ ಕನ್ನಡ ಸಿನಿಮಾಗಳ ಜೊತೆ ತೆಲುಗಿನ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top