ಸಮಾಚಾರ

ಖ್ಯಾತ ನಟ ತಮ್ಮ ಜೊತೆಯಲ್ಲೇ ಇದ್ರೂ ಗುರುತಿಸಲಿಲ್ಲ ಈ ಯುವ ಜೋಡಿ,ಏನಿದು ಸ್ಟೋರಿ ಅಂತೀರಾ,ನೀವೇ ನೋಡಿ

ಇತ್ತೀಚಿಗೆ ಬಿಡುಗಡೆಯಾದ ಸಂಜಯ್ ದತ್ ಜೀವನಾಧಾರಿತ ‘ಸಂಜು’ ಸಿನಿಮಾದಲ್ಲಿ ನಾಯಕನಾಗಿ ಅಭಿನಯ ಮಾಡಿ ಅಪಾರ ಖ್ಯಾತಿ ಪಡೆದಿರುವ ನಟ ರಣಬೀರ್ ಕಪೂರ್ ಈಗ ರೆನೋ ಕಾರ್‌ ಶೋರೂಂ ಒಂದರಲ್ಲಿ ಮಧ್ಯ ವಯಸ್ಕ ಸೇಲ್ಸ್‌ ಮ್ಯಾನ್‌ ಆಗಿದ್ದಾರೆ.

ಸಂಜು ಸಿನಿಮಾದಲ್ಲಿ ರಣಬೀರ್ ಕಪೂರ್ ವಿವಿಧ ವಯೋಮಾನಗಳನ್ನು ನಟಿಸಿ ಸೈ ಅನಿಸಿಕೊಂಡಿದ್ದರು ಇದು ನಿಮಗೆ ಗೊತ್ತಿರುವ ವಿಚಾರ. ಎಲ್ಲ ಪಾತ್ರಗಳಿಗೆ ತಕ್ಕುದಾದ ಮೇಕ್‌ ಅಪ್‌, ಆ ಪಾತ್ರದ ಭಾವನೆಗಳಿಗೆ ಒಗ್ಗಿಕೊಳ್ಳುವ ಗುಣವನ್ನು ಹೊಂದಿರುವ ರಣಬೀರ್, ಯುವ ದಂಪತಿಗೆ ರೆನೋ ಕ್ವಿಡ್‌ ಕಾರಿನ ಬಗೆಗೆ ವಿವರಣೆಯನ್ನು ನೀಡಿ, ಟೆಸ್ಟ್‌ ಡ್ರೈವ್‌ ಕೂಡ ಮಾಡಿಸಿದ್ದಾರೆ.

ರಣಬೀರ್‌ ಕಪೂರ್‌ ರವರನ್ನು ಪತ್ತೆ ಹಚ್ಚುವುದರಲ್ಲಿ ಯುವ ಜೋಡಿ ವಿಫಲವಾಗಿದೆ. ರಣಬೀರ್ ಯುವ ಜೋಡಿಗೆ ಪ್ರಶ್ನೆ ಮಾಡುತ್ತ. ನಿಮ್ಮ ನೆಚ್ಚಿನ ನಟ ಯಾರು ಏನು ಕೇಳಿದರು. ಆಗ ದಂಪತಿಗಳು ಶಾರುಖ್ ಖಾನ್ ಎಂದು ಹೇಳಿದರು. ಆದ ರಣಬೀರ್ ಯುವ ನಟರಲ್ಲಿ ಯಾರು ಇಷ್ಟ ಎಂದು ಪ್ರಶ್ನೆ ಮಾಡಿದಾಗ. ರಣಬೀರ್, ವರುಣ್ ಹಾಗು ರಣವೀರ್ ಎಂದು ಹೇಳಿದರು. ತಮ್ಮ ಜತೆಗಿದ್ದದ್ದು ರಣಬೀರ್‌ ಕಪೂರ್‌ ಎಂಬ ಸತ್ಯ ತಿಳಿದ ತಕ್ಷಣ, ದಂಪತಿ ಖುಷಿಗೆ ಪಾರವೇ ಇರಲಿಲ್ಲ. ನಂತರ ದಂಪತಿಗಳು ರಣಬೀರ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಈ ವಿಡಿಯೋ ನೋಡಿ:

 

ಅಂದಹಾಗೆ ರಣಬೀರ್ ಕಪೂರ್ 2015 ರಿಂದ ರೆನೋ ಇಂಡಿಯಾ ಆಟೊಮೊಬೈಲ್ ರಾಯಭಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀವು ಕ್ವಿಡ್ ಕಾರ್ ಟೆಸ್ಟ್ ಡ್ರೈವ್ ಮಾಡಲು ಹೋದಾಗ ರಣಬೀರ್ ಬಂದರೆ ಅಚ್ಚರಿ ಪಡಬೇಕಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top