ಸಮಾಚಾರ

ಗಲ್ಲಿ ಕ್ರಿಕೆಟ್ ಶುರು ಹಚ್ಕೊಂಡ ಡಿಂಪಲ್ ಕ್ವೀನ್,ನೀವೇ ನೋಡಿ ಈ ವಿಡಿಯೋ

ಸ್ಯಾಂಡಲ್ವುಡ್ ನಲ್ಲಿ ಆಗಾಗ ಕ್ರಿಕೆಟ್ ಪಂದ್ಯಗಳು ನಡೆಯುತ್ತಲೇ ಇರುತ್ತೆ. ರಾಜ್ ಕಪ್, ಡಿ ಬ್ರದರ್ಸ್ ಪ್ರಿಮಿಯರ್ ಲೀಗ್, ಕೆಸಿಸಿ ಕಪ್ ಹೀಗೆ ಅನೇಕ ಭಾರಿ ಕಲಾವಿದರು ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನದಲ್ಲಿ ಆಟ ಆಡುತ್ತಾರೆ. ಸದ್ಯ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿ ಸುದ್ದಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ರಚಿತಾ ರಾಮ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ‘ಸೀತಾರಾಮ ಕಲ್ಯಾಣ’ ಚಿತ್ರ ಸೆಟ್​​ನಲ್ಲಿ ಬಿಡುವಿನ ವೇಳೆ ರಚಿತಾ ಚಿತ್ರತಂಡದ ಸ್ನೇಹಿತರ ಜೊತೆಗೆ ಬ್ಯಾಟ್ ಹಿಡಿದು ಸಿಂಪಲ್ ಆಗಿ ಕ್ರಿಕೆಟ್ ಆಡಿದ್ದಾರೆ. ಅಲ್ಲೇ ಇರುವವರೊಬ್ಬರು ವಿಡಿಯೋ ಮಾಡಿದ್ದಾರೆ. ಅದನ್ನು ರಚಿತಾ ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಮಂಡ್ಯ ಬಳಿ ಚಿತ್ರೀಕರಣ ನಡೆಯುವಾಗ ಚಿತ್ರದ ನಾಯಕ ನಿಖಿಲ್ ಕುಮಾರಸ್ವಾಮಿ ಕೂಡಾ ಸ್ಥಳೀಯ ಮಕ್ಕಳೊಂದಿಗೆ ಕ್ರಿಕೆಟ್ ಆಡುವ ಮೂಲಕ ಎಂಜಾಯ್ ಮಾಡಿದ್ದರು.

ರಚಿತಾ ರಾಮ್ ಕ್ರಿಕೆಟ್ ಆಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ತಿಳಿದು ಬಂದಿದೆ. ಅನೇಕ ಅಭಿಮಾನಿಗಳು ರಚಿತಾಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಈ ವಿಡಿಯೋ ನೋಡಿ:

🤞😅🏏🏏🏏❤️

A post shared by Rachita Ram (@rachita_ram) on

 

ಇತ್ತೀಚಿಗೆ ‘ಸೀತಾರಾಮ ಕಲ್ಯಾಣ’ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿದೆ. ಬಿಡುಗಡೆಯಾದ ಕೆಲವೇ ದಿನದಲ್ಲಿ 4 ಮಿಲಿಯನ್ಸ್ ವೀಕ್ಷಣೆಯನ್ನು ಪಡೆದಿದ್ದು ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಕನ್ನಡ ಸಿನಿಮಾ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top