ಮನೋರಂಜನೆ

ಮೈಸೂರು ಅರಮನೆಯಲ್ಲಿ ಮಾಡಬಾರದ ಕೆಲಸ ಮಾಡಿ ವಿವಾದಕ್ಕೀಡಾದ ನಟಿ ನಿಧಿ ಸುಬ್ಬಯ್ಯ.

ಸಿನಿಮಾ ನಟಿಯರು ಖಾಲಿ ಕೂತ ಘಳಿಗೆಯಲ್ಲಿ ಅನಾವಶ್ಯಕ ಎಡವಟ್ಟು ಮಾಡಿಕೊಳ್ಳೋ ಮೂಲಕವೇ ಪ್ರಚಾರದಲ್ಲಿರುತ್ತಾರೆ, ಆ ಮೂಲಕವೇ ವಿವಾದಕ್ಕೂ ಈಡಾಗುತ್ತಾರೆ. ಸದ್ಯ ಅದೇ ಸ್ಥಿತಿಯಲ್ಲಿರುವವರು ನಟಿ ನಿಧಿ ಸುಬ್ಬಯ್ಯ.. ಸಿನಿಮಾರಂಗದಲ್ಲಿ ಹೇಳಿಕೊಳ್ಳುವಂತ ಗೆಲವನ್ನೇನು ದಾಖಲಿಸಿದ ನಿಧಿ ಸುಬ್ಬಯ್ಯ ಇದೀಗ ನಿರ್ಬಂಧಿಸಿರುವ ಕೆಲಸವೊಂದನ್ನು ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ..

 

ಮೈಸೂರು ಅರಮನೆಯ ದರ್ಬಾರ್ ಹಾಲ್’ನಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋಶೂಟ್ ಮಾಡಿದ್ದಾರೆ.. ದರ್ಬಾರ್ ಸಭಾಂಗಣದಲ್ಲಿ ಕುಳಿತು ಫೊಟೋಗೆ ಪೋಸ್ ಕೊಟ್ಟಿರುವ ನಿಧಿ ಸುಬ್ಬಯ್ಯ ಆ ಫೋಟೋವನ್ನು ತಮ್ಮ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.. ಮೈಸೂರು ಅರಮನೆಯಲ್ಲಿ ಫೋಟೋಶೂಟ್ ಮಾಡುವುದು ನಿಷೇಧಿಸಿದ್ದರೂ ನಟಿಯ ಈ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು ಆಕೆಯ ಮೇಲೆ ಟೀಕೆಗಳು ಎದುರಾಗುತ್ತಿವೆ.

ಮೈಸೂರು ಅರಮನೆಯಲ್ಲಿ ಫೋಟೊ ಶೂಟ್ ಮಾಡುವುದುದಕ್ಕೆ ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದೆ ಹೇಗಿದ್ದರೂ ನಟಿಗೆ ಶೊಟೊ ಶೂಟ್ ಮಾಡಲು ಅವಕಾಶ ಕೊಟ್ಟಿದ್ದು ಯಾರು? ಸಾಮಾನ್ಯ ಜನರಿಗೆ ಇಲ್ಲದ ಅವಕಾಶವನ್ನು ನಟಿಗೆ ಕೊಟ್ಟಿದ್ದಾರಾ? ಫೋಟೋ ಶೂಟ್ ಮಾಡಲು ವಿಐಪಿಗಳಿಗೆ ಮಾತ್ರ ಅವಕಾಶವಿದೆಯೇ? ಸಾಮಾನ್ಯ ಜನರಿಗೆ ಒಂದು ನ್ಯಾಯ ಸೆಲೆಬ್ರೆಟಿ ಮತ್ತು ವಿಐಪಿಗಳಿಗೆ ಒಂದು ನ್ಯಾಯವಾ? ಎಂಬಂತ ನಾನಾ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಿಂದ ತೂರಿಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top