ಸಮಾಚಾರ

ಮೊಬೈಲ್ ಬ್ಯಾಂಕಿಂಗ್ ಬಳಕೆದಾರರಿಗೆ ಆಗಸ್ಟ್ 15ಕ್ಕೆ ಬಿಗ್ ಸರ್ಪ್ರೈಸ್ ನೀಡಲಿರುವ ಪ್ರಧಾನಿ ಮೋದಿ

500 ಹಾಗು 1 ಸಾವಿರ ರೂ. ನೋಟು ನಿಷೇದವಾದ ನಂತರ ದೇಶದಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ನೋಟ್ ಬ್ಯಾನ್ ಬಳಿಕ ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ಮೂಲಕ ನಡೆಸುವ ವಹಿವಾಟು 77 ಪಟ್ಟು ಏರಿಕೆ ಆಗಿದೆ ಎನ್ನಲಾಗಿದೆ.

ಪಿಎಂ ನರೇಂದ್ರ ಮೋದಿ ರವರು 2017 ರಲ್ಲಿ ಭಾರತ್ ಇಂಟೆರ್’ಫೇಸ್ ಫಾರ್ ಮನಿ(ಭೀಮ್) ಅಪ್ಲಿಕೇಶನ್ ಲಾಂಚ್ ಮಾಡಿದ್ದರು. ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೇರೇಷನ್ ‘ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ. ಪೇಟಿಎಂ, ಜಿಯೋ ಮನಿ, ಪೋನ್‍ಪೇ ಇತ್ಯಾದಿ ಅಪ್‍ಗಳು ಯುಪಿಐ ಮೂಲಕವೇ ಕಾರ್ಯನಿರ್ವಹಿಸುತ್ತಿದ್ದರು. ಈಗ ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ಗೆ ಮಹತ್ತರ ಬದಲಾವಣೆ ಜಾರಿ ಮಾಡಲು ನ್ಯಾಶನಲ್ ಪೇಮೆಂಟ್ಸ್ ಕಾರ್ಪೇರೇಷನ್ ಮುಂದಾಗಿದೆ.

 

 

ಮೊಬೈಲ್ ಬ್ಯಾಂಕಿಂಗ್ ವಹಿವಾಟನ್ನು ಇನ್ನು ಸರಳೀಕೃತ ಹಾಗು ಸುರಕ್ಷಿತ ಮಾಡುವ ಸಲುವಾಗಿಯೇ UPI 2.0ವನ್ನು ಅಭಿವೃದ್ದಿ ಪಡಿಸಲಾಗಿದ್ದು, ಇದನ್ನು ಅಧಿಕೃತವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಆಗಸ್ಟ್ 15 ರಂದು ದೆಹಲಿಯಲ್ಲಿ ಲಾಂಚ್ ಮಾಡಲಿದ್ದಾರೆ ಎನ್ನಲಾಗಿದ್ದು, ಇದು ಸರ್ಪೈಸ್ ಆಗಿ ಎನ್ನುವ ಮಾತು ಕೇಳಿ ಬಂದಿದ್ದವು. ಈ ಕುರಿತು ಮಾಹಿತಿಯೂ ಲೀಕ್ ಆಗಿದೆ.

ಹೊಸ UPI 2.0 ಪ್ರಾಯೋಗಿಕವಾಗಿ 10 ಬ್ಯಾಂಕ್‌ಗಳು ಈಗಾಗಲೇ UPI 2.0ದಲ್ಲಿ ಕಾರ್ಯವನ್ನು ಶುರು ಮಾಡಿದಿವೆ ಎನ್ನಲಾಗಿದೆ. ಇದರಿಂದಾಗಿ ಮೊಬೈಲ್ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸುವವರಿಗೆ ಸಾಕಷ್ಟು ಸಹಾಯವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top