ಸಮಾಚಾರ

ಈ ಚಿತ್ರಗಳೇ ನೋಡಿ ಒಂದೇ ಕಥೆ, ಎರಡೆರಡು ಸಿನಿಮಾ,ನೋಡಿ ಯಾವುದು ಆ ಕನ್ನಡ ಸಿನಿಮಾಗಳು ಅಂತ

ಎಲ್ಲ ನಿರ್ದೇಶಕರು ಸಿನಿಮಾ ಮುಗಿಯುವವರೆಗೂ ಚಿತ್ರದ ಸುಳಿವುಗಳನ್ನು ಕೊಟ್ಟಿರುವುದಿಲ್ಲ. ಹೀಗೆ ಒಬ್ಬ ನಿರ್ದೇಶಕ ಅಥವಾ ಕಥೆಗಾರನಿಗೆ ಬಂದಿರುವ ಆಲೋಚನೆ ಮತ್ತೊಬ್ಬ ನಿರ್ದೇಶಕನಿಗೆ ಬಂದು, ಒಮ್ಮೊಮ್ಮೆ ಒಂದೇ ರೀತಿಯ ಎರಡು ಸಿನಿಮಾ ರಿಲೀಸ್ ಆಗಿರುವ ಘಟನೆಗಳು ಕನ್ನಡ ಸಿನಿಮಾ ರಂಗದಲ್ಲಿ ನಡೆದಿವೆ. ಹಾಗಾದರೆ ಯಾವ ಯಾವ ಸಿನಿಮಾ ಹಾಗೆ ಆಗಿವೆ ನೋಡೋಣ ಬನ್ನಿ.

1978 ರಲ್ಲಿ ಡಾ. ರಾಜಕುಮಾರ ಅವರು ಅಭಿನಯ ಮಾಡಿದ್ದ ಶಂಕರ್ ಗುರು ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಣ ಮಾಡಿದ್ದರು. ರಾಜಣ್ಣ ಅವರು ತ್ರಿಪಾತ್ರದಲ್ಲಿ ಅಭಿನಯ ಮಾಡಿದ್ದು ವಿಶೇಷವಾಗಿತ್ತು. ಎಂ.ಡಿ.ಸುಂದರ್ ಎಂಬ ಚಿತ್ರಕಥೆಗಾರ ಈ ಸಿನಿಮಾ ಕಥೆ ಬರೆದಿದ್ದರು. ಅದೇ ವರ್ಷ “ಸಿಂಗಾಪುರದಲ್ಲಿ ರಾಜಾಕುಳ್ಳ” ಸಿನಿಮಾ ಕೂಡ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ಈ ಎರಡು ಸಿನಿಮಾಗಳಿಗೂ ಹಲವು ಸಾಮ್ಯತೆಗಳಿದ್ದವು. ಈ ಎರಡು ಚಿತ್ರಗಳ ಕಥೆ ಬಹುತೇಕ ಒಂದೇ ಆಗಿತ್ತು. ಈ ಎರಡು ಸಿನೆಮಾಗಳಿಗೂ ಎಂ.ಡಿ.ಸುಂದರ್ ರವರೆ ಕಥೆ ಬರೆದಿದ್ದರು.

 

 

ವಿಷ್ಣುವರ್ಧನ್ ಹಾಗು ವಿಜಯಶಾಂತಿ ಅಭಿನಯ ಮಾಡಿದ್ದ ಸಿಂಹ ಘರ್ಜನೆ’ ಎನ್ನುವ ಸಿನಿಮಾ 1983 ರಲ್ಲಿ ರಿಲೀಸ್ ಆಗಿತ್ತು. ಅದೇ ರೀತಿಯ ಕಥೆ ಹೊಂದಿದ ಚಿತ್ರ ‘ಬೀಗರ ಪಂದ್ಯ’ ಎನ್ನುವ ಹೆಸರಿನಲ್ಲಿ 1986 ರಲ್ಲಿ ಬಿಡುಗಡೆ ಆಗಿತ್ತು.

1980 ರಲ್ಲಿ ಶಂಕರ್ ನಾಗ್ ಮತ್ತು ಅನಂತ್ ನಾಗ್ ನಟಿಸಿದ್ದ ಪುನರ್ ಜನ್ಮ ಆಧಾರಿತ ಕಥೆ ಹೊಂದಿದ್ದ ಸಿನಿಮಾ ‘ಜನ್ಮ ಜನ್ಮದ ಅನುಬಂಧ’ ಕಥೆ ಹಾಗು ಅದೇ ವರ್ಷ ಬಿಡುಗಡೆ ಆಗಿದ್ದ ವಿಷ್ಣುವರ್ಧನ್ ಅಭಿನಯ ಮಾಡಿದ್ದ ‘ಬಂಗಾರದ ಜಿಂಕೆ’ ಸಿನಿಮಾ ಕಥೆ ಬಹುತೇಕೆ ಒಂದೇ ಆಗಿತ್ತು. ಕೆಲವೊಂದು ಬದಲಾವಣೆ ಇದ್ದವು ಹೊರತು ಪಡಿಸಿದರೆ ಉಳಿದೆಲ್ಲ ಕಥೆ ಒಂದೇ ಆಗಿತ್ತು.

ಇದು ಕಾಕತಾಳಿಯವೋ ಅಥವಾ ಕಥೆಗಾರ ಬೇಕಂತಲೇ ಎರಡು ಸಿನೆಮಾಗಳಿಗೆ ಒಂದೇ ರೀತಿಯ ಕಥೆಯನ್ನು ನೀಡಿರುವ ಸಾಧ್ಯತೆ ಕೂಡ ಇರಬಹುದು. ಇದೆ ರೀತಿ ಹಲವು ಒಂದೇ ಕಥೆ ಹೊಂದಿರುವ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬಂದಿವೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top