ಮನೋರಂಜನೆ

ಚುನಾವಣೆಯಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿದ WWE ಸೂಪರ್ ಸ್ಟಾರ್ ಕೇನ್.

ಎಲ್ಲಾ ವರ್ಗದ ಜನರು ಕುತೂಹಲದಿಂದ ನೋಡುವ ತಲೆಕೆಟ್ಟ ಆಟವೇ ವರ್ಲ್ಡ್​ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE).  ಥೇಟು ಹುಚ್ಚು ಹಿಡಿದ ಕಾಡುಪ್ರಾಣಿಳಂತೆ ಕಚ್ಚಾಡುವ ರಾಕ್ಷಸ ರೂಪದ ದೈತ್ಯದೇಹಿ ದಾಂಡಿಗರು ಮಾಡುವ ಅಟಾಟೋಪಗಳು ಫೇಕ್ ಎಂದು ಜಾಹೀರಾಗಿದ್ದರೂ; ಅದೆಷ್ಟೇ ತಕರಾರುಗಳು ಇದ್ದರೂ ಇದು ಈಗಲೂ ಅತ್ಯಂತ ಜನಪ್ರಿಯವಾಗಿದೆ. ಇಂಥಾ WWE ಅಭಿಮಾನಿಗಳಿಗೆ ಕೇನ್ ತುಂಬಾನೇ ಪರಿಚಿತರಿರುತ್ತಾರೆ.. WWE ಸೂಪರ್ ಸ್ಟಾರ್ ಎನಿಸಿಕೊಂಡಿರುವ ಕೇನ್ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿದ್ದಾರೆ.

 

 

ಅಷ್ಟಕ್ಕೂ ಕೇನ್ ಅವರ ಮೂಲ ಹೆಸರು ಗ್ಲೇನ್​ ಜಾಕೋಬ್ಸ್​ ಅಂತ, ಮೂಲತಃ ಅಮೆರಿಕದವರಾದ 54ವಯಸ್ಸಿನ ಜಾಕೋಬ್ಸ್ ಅಮೆರಿಕದ ಟೆನ್ನೆಸ್ಸೀ ರಾಜ್ಯದ ನಾಕ್ಸ್ ಕೌಂಟಿಯ ಮೇಯರ್​ ಆಗಿ ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಿಪಬ್ಲಿಕನ್​ ಪಕ್ಷದಿಂದ ಸ್ಪರ್ಧಿಸಿದ್ದ ಜಾಕೋಬ್ಸ್ ಡೆಮಾಕ್ರೆಟಿಕ್​ ಪಕ್ಷದ ಲಿಂಡಾ ಹನ್ನೆಯವರನ್ನು 2-1 ಅಂತರದಿಂದ ಸೋಲಿಸಿ ಅಧಿಕಾರಕ್ಕೇರಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಗ್ಲೇನ್​ ಜೇಕಬ್ಸ್​ ಸೆಪ್ಟೆಂಬರ್​ 1ರಂದು ನೂತನ ಮೇಯರ್​ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

WWEನಲ್ಲಿ ಯಾವಾಗಲೂ ಮುಖಕ್ಕೆ ಮುಖವಾಡ ಹಾಕಿಕೊಂಡು ಭಯಾನಕ ರೀತಿಯಲ್ಲಿ ಎದುರಾಳಿಗಳನ್ನು ಬೆಚ್ಚಿ ಬೀಳುವಂತೆ ಹಿಡಿದು ಕುಕ್ಕುತ್ತಿದ್ದ ಕೇನ್ ಇದೀಗ WWE ರಿಂಗ್ ಬಿಟ್ಟು ರಾಕೀಯದಲೂ ಗೆಲುವು ದಾಖಲಿಸಿದ್ದಾರೆ. ಕಳೆದ 27 ವರ್ಷಗಳಿಂದಲೂ WWE ರಂಜಿಸಿಕೊಂಡು ಬಂದಿದ್ದ ಕೇನ್ ಇದೀಗ ಮೇಯರ್ ಆಗಿರೋದ್ರಿಂದ ಇನ್ನುಮುಂದೆ WWE ರಿಂಗ್’ಗೆ ಮರಳೋ ಸಾಧ್ಯತೆ ಕಡಿಮೆ ಇದೆ ಎಂದು ಅಮೇರಿಕ ಮಾಧ್ಯಮಗಳು ವರದಿ ಮಾಡಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top