ಮನೋರಂಜನೆ

ಆರಾಧ್ಯದೈವನ ದೇವಸ್ಥಾನ ಕಟ್ಟಿಸಿ ಗಮನ ಸೆಳೆದ ಜಗ್ಗೇಶ್- ಇದರ ಹಿಂದಿದೆ ಒಂದು ಕುತೂಹಲಕಾರಿ ಸಂಗತಿ.

ಕನ್ನಡದ ಮಟ್ಟಿಗೆ ಟ್ವಿಟರ್’ನಲ್ಲಿ ಅತಿಹೆಚ್ಚು ಸಕ್ರಿಯವಾಗಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ. ಆಗಾಗ ಜಗ್ಗೇಶ್ ಮನದ ಮಾತುಗಳನ್ನು ಟ್ವಿಟರ್ ನಲ್ಲೆ ದಾಖಲಿಸುತ್ತಿರುತ್ತಾರೆ..ಓರ್ವ ರಾಜಕಾರಣಿಯಾಗಿ ಅವರ ಬಗ್ಗೆ ನಾನಾ ತಕರಾರುಗಳಿರಬಹುದು ಆದರೆ ಒಂದು ವ್ಯಕ್ತಿಯಾಗಿ ಅವರನ್ನು ಮೆಚ್ಚಿಕೊಳ್ಳದಿರುವವರು ವಿರಳ. ಅದೇನೇ ಸಾಧಿಸಿದರೂ, ಯಾವ ಎತ್ತರ ತಲುಪಿದರೂ ತಮ್ಮ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರೋದನ್ನ ನೋಡೋದೇ ಚೆಂದಾ.

ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.. ಇದೀಗ ಜಗ್ಗೇಶ್ ತಮ್ಮ ಟ್ವಿಟರ್ ನಲ್ಲಿ ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದು ತಮ್ಮ ಊರಿನಲ್ಲಿ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿಸಿದ್ದಾರಂತೆ.

 

 

ಪಾಳು ಬಿದ್ದ ಸ್ಥಿತಿಯಲ್ಲಿದ್ದ ‘ಕಾಲಭೈರವ ಸ್ವಾಮಿಯ ದೇವಸ್ಥಾನವನ್ನು ನಿರ್ಮಾಣ ಮಾಡಿಸಿರುವ ಜಗ್ಗೇಶ್ ಅದನ್ನು ಸೆಪ್ಟೆಂಬರ್’ನಲ್ಲಿ ಲೋಕಾರ್ಪಣೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಈ ದೇವಸ್ಥಾನದವನ್ನು ಸುಮಾರು ಮುನ್ನೂರು ವರ್ಷಗಳ ಹಿಂದೆ ಜಗ್ಗೇಶ್ ಅವರ ವಂಶಸ್ಥರೇ ನಿರ್ಮಾಣ ಮಾಡಿದ್ದರಂತೆ. ಆದರೆ ಅನಂತರದ ವರ್ಷಗಳಲ್ಲಿ ಅದು ದುಸ್ಥಿತಿ ಕಂಡಿದ್ದು ಅದರ ಪುನರ್ ನಿರ್ಮಾಣಕ್ಕೆ ಯಾರೇ ಕೈ ಹಾಕಿದರೂ ಕಾರಣಾಂತರಗಳಿಂದ ಪೂರ್ತಿಯಾಗುತ್ತಿರಲಿಲ್ಲವಂತೆ.. ಇದೀಗ ಆ ಕೆಲಸವನ್ನು ತಾನು ಪೂರ್ತಿ ಮಾಡಿದ್ದೇನೆ ಎಂಬ ಜಗ್ಗೇಶ್ ಸಂತಸಗೊಂಡಿದ್ದಾರೆ.

“300ವರ್ಷದ ಹಿಂದೆ ನನ್ನ ವಂಶೀಕರು ನಿರ್ಮಿಸಿದ ಆಲಯ..!!
ಅನೇಕರು ಪುನರ್ ನಿರ್ಮಾಣಕ್ಕೆ ಯತ್ನಿಸಿ ವಿಫಲರಾದರು..!!ದೇವರು ನನಗೆ ಅವಕಾಶ ನೀಡಿದ..!!
ಇಂದು ನನ್ನಿಂದ ಪುನರ್ ನಿಮ್ಮಾರಣದ ಭಾಗ್ಯ ಸಿಕ್ಕಿದ್ದು ನನ್ನ ಸೌಭಾಗ್ಯ..!!
ಭರದಿಂದ ಸಾಗಿದೆ ಸೆಪ್ಟೆಂಬರ್ ಲೋಕಾರ್ಪಣೆ..!!
ಇದರಲ್ಲಿ ಕೊರುವ ನನ್ನವಂಶದ ದೊರೆ” ಈ ಕಾಲಭೈರವ”ಧನ್ಯೋಸ್ಮಿ.. ” ಎಂದು ಜಗ್ಗೇಶ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top