ಕ್ರಿಕೆಟ್

1000ದ ಟೆಸ್ಟ್​​ನಲ್ಲಿ ಭರ್ಜರಿ ಜಯ ದಾಖಲಿಸಿ ಇತಿಹಾಸ ನಿರ್ಮಿಸಿದ ಇಂಗ್ಲೆಂಡ್: ಕೊಹ್ಲಿ ಪಡೆಗೆ ಭಾರೀ ಮುಖಭಂಗ

ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸೋಲುಕಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸುವ ಮೂಲಕ 1000ದ ಪಂದ್ಯ ಗೆದ್ದ ಸಾಧನೆ ಮಾಡಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 110 ರನ್​ ಗಳಿಸಿ ಇಂದು ಬ್ಯಾಟಿಂಗ್ ಮುಂದುವರೆಸಿದ್ದ ಭಾರತ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿಗೆ ಸಿಲುಕಿ ಕುಸಿತ ಕಂಡು 162 ರನ್ ಗಳಿಗೆ ಆಲೌಟ್ ಆಗುವ ಮೂಲಕ 31ರನ್ನುಗಳ ಸೋಲು ಕಂಡಿದೆ.

 

 

ಗೆಲುವಿಗಾಗಿ ಇಂಗ್ಲೆಂಡ್ ನೀಡಿದ್ದ 194ರನ್ ಸಾದಾರಣ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 3ನೇ ದಿನದಾಟದ ಅಂತ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಒಂದು ಹಂತದಲ್ಲಿ ತಂಡಕ್ಕೆ ದಿನೇಶ್ ಕಾರ್ತಿಕ್ ಮತ್ತು ನಾಯಕ ಕೊಹ್ಲಿ ಆಸರೆಯಾಗಿದ್ದರು ಆದರೆ ಇಂದು 4ನೇ ದಿನದಾಟ ಆರಂಭದ ಮೊದಲ ಓವರ್ ನಲ್ಲಿಯೇ ಭಾರತ ದಿನೇಶ್ ಕಾರ್ತಿಕ್ ವಿಕೆಟ್ ಕಳೆದುಕೊಂಡಿತು. ನಂತರ ಕೊಹ್ಲಿ 51ರನ್ ಸಿಡಿಸಿರಾದರೂ ಅವರೂ ಬೇಗನೆ ಪೆವಿಲಿಯನ್ ಸೇರಿಕೊಂಡರೆ. ಕೊಹ್ಲಿ ಬೆನ್ನಲ್ಲೇ ಬಂದ ಬಾಲಂಗೋಚಿಗಳಾದ ಮೊಹಮ್ಮದ್ ಶಮಿ ಕೂಡ ಬಹುಬೇಗನೆ ನೆಲಕಚ್ಚಿ ಪೆಲಿಯನ್ ಹಾದಿ ಹಿದರು. ಅದಾದ ನಂತರ ಇಶಾಂತ್ ಶರ್ಮ ಮತ್ತು ಹಾರ್ದಿಕ್ ಪಾಂಡ್ಯ ಔಟಾಗುವ ಮೂಲಕ ಕೊಹ್ಲಿ ಬಾಯ್ಸ್ ಸೋಲೊಪ್ಪಿಕೊಂಡಿದ್ದಾರೆ. ಇಂಗ್ಲಂಡ್ ಪರ ಮಾರಕ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ ತಂಡದ ಪಾಲಿಗೆ ಗೆಲುವಿನ ರೂವಾರಿಯಾದರು.

ಸಂಕ್ಷಿಪ್ತ ಸ್ಕೊರ್:
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್.
89.4 ಓವರ್​ಗಳಲ್ಲಿ 287 ರನ್ ಆಲೌಟ್ ​
ಜೋ ರೂಟ್ (80 ರನ್, 156 ಎಸೆತ, 9 ಬೌಂಡರಿ)
ಜಾನಿ ಬೇರ್​ಸ್ಟೋ (70ರನ್, 88 ಎಸೆತ, 9 ಬೌಂಡರಿ)
ಕೀಟನ್ ಜೆನ್ನಿಂಗ್ಸ್ (42ರನ್ 98 ಎಸೆತ )

ಭಾರತದ ಬೌಲಿಂಗ್:
ಅಶ್ವಿನ್ 62-4
ಮೊಹಮದ್ ಶಮಿ 64-3

ಭಾರತ ಮೊದಲ ಇನ್ನಿಂಗ್ಸ್
76 ಓವರ್‌ಗಳಲ್ಲಿ 274 ರನ್‌ ಆಲೌಟ್
ವಿರಾಟ್ ಕೊಹ್ಲಿ149,
ಹಾರ್ಧಿಕ್ ಪಾಂಡ್ಯ 22
ಮುರಳಿ ವಿಜಯ್ 20,
ಶಿಖರ್ ಧವನ್ 26,

ಇಂಗ್ಲೆಂಡ್:
ಸ್ಯಾಮ್ ಕರ್ರನ್ 74-4
ಜೇಮ್ಸ್ ಆಂಡೆರ್ಸನ್ 41-2
ಆದಿಲ್ ರಶೀದ್ 31-2
ಬೆನ್ ಸ್ಟೋಕ್ಸ್ 73-2

ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: 180/10 (53.0 ov)
ಸ್ಯಾಮ್ ಕುರ್ರನ್ 63
ಜಾನಿ ಬೈರ್ಸ್ಟೊ 28
ಡೇವಿಡ್ ಮಲನ್ 20

ಬೌಲಿಂಗ್ :
ಇಶಾಂತ್ ಶರ್ಮ 5-51
ಅಶ್ವಿನ್ 3-59

ಭಾರತ ದ್ವಿತೀಯ ಇನ್ನಿಂಗ್ಸ್:
54.2 ಓವರ್‌ಗಳಲ್ಲಿ 162 ರನ್ ಆಲೌಟ್
ವಿರಾಟ್ ಕೊಹ್ಲಿ 51
ಹಾರ್ಧಿಕ್ ಪಂದ್ಯ 31
ದಿನೇಶ್ ಕಾರ್ತಿಕ್ 20

ಬೌಲಿಂಗ್:
ಬೆನ್ ಸ್ಟೋಕ್ಸ್​ 40-4
ಸ್ಟುವರ್ಟ್​ ಬ್ರಾಡ್ 29-2
ಜೇಮ್ಸ್ ಆಂಡರ್ಸ್​ನ್ 33-1
ಸ್ಯಾಮ್ ಕುರ್ರನ್ 17-1
ರಶೀದ್ 9-1

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top