ಸಮಾಚಾರ

ಕಷ್ಟ ಅಂದ್ರೆ ಕೈ ಹಿಡಿವ ‘ಬೊಟ್ಲಪ್ಪೇಶ್ವರ’ ದೇವರ ಮಹಿಮೆ ಬಗ್ಗೆ ಗೊತ್ತಾದ್ರೆ ,ಖಂಡಿತಾ ಈ ದೇವರ ಬಗ್ಗೆ ನಿಮಗೆ ಭಕ್ತಿ ಜಾಸ್ತಿಯಾಗುತ್ತೆ .

ಮಡಿಕೇರಿ ಜಿಲ್ಲೆಯ ಕಡಗದಾಳು ಎಂಬ ಹಳ್ಳಿಯಲ್ಲಿ ಸುಮಾರು 300 ವರ್ಷಗಳಿಂದ ನೆಲೆ ನಿಂತಿರುವ ‘ಬೊಟ್ಲಪ್ಪೇಶ್ವರ’ ಕಷ್ಟ ಕಾಲದಲ್ಲಿ ತಮ್ಮ ಕೈ ಹಿಡಿದು ನಡೆಸುತ್ತಾನೆ ಎಂಬುದು ಜನರ ನಂಬಿಕೆ ಇದೆ.

ಕೊಡಗು ಆಸ್ಥಾನವನ್ನು ಸುಮಾರು ಮುನ್ನೂರು ವರ್ಷದ ಹಿಂದೆ ಚಿಕ್ಕದೇವರಾಯ ರಾಜನು ಆಳುತ್ತಿದ್ದ. ಚಿಕ್ಕದೇವರಾಯ ಒಂದು ದಿನ ಬೇಟೆಗೆ ಹೋದಾಗ ಬೃಹತ್ ಬಂಡೆ ಆತನ ಕಣ್ಣಿಗೆ ಬೀಳುತ್ತದೆ. ಬಂಡೆಯ ಸೆರೆಯಲ್ಲಿ ರಾಜನಿಗೆ ಶಕ್ತಿಯೊಂದು ಕಾಣುತ್ತದೆ. ಅದೇ  ಶಿವನ ಪ್ರತಿಬಿಂಬವಾಗಿರುತ್ತದೆ. ಬೆಟ್ಟದಲ್ಲಿ ಪ್ರತ್ಯಕ್ಷನಾದ ಈಶ್ವರನ ದಿವ್ಯ ಶಕ್ತಿಗೆ ಮರುಳಾದ ರಾಜ ತಾನು ಬೇಟೆಗೆ ತಂದಿದ್ದ ಅಸ್ತ್ರವನ್ನು ಅಲ್ಲಿಯೇ ಬಿಟ್ಟು ದೈವೀ ಶಕ್ತಿ ಕಂಡ ಸಂತೋಷದಿಂದ ಆಸ್ಥಾನಕ್ಕೆ ಮರಳಿ ಬರುತ್ತಾನೆ. ಅತೀ ದೈವ ಭಕ್ತನಾಗಿದ್ದ ಚಿಕ್ಕದೇವರಾಯ ಬೆಟ್ಟದಲ್ಲಿರುವ ಈಶ್ವರನಿಗೆ ನಿತ್ಯ ಪೂಜೆಯು ನೆರವೇರಬೇಕೆಂದು ಇಚ್ಛೆಯನ್ನು ಪಡುತ್ತಾನೆ. ಇಲ್ಲಿ ಯಾವುದೇ ಗುಡಿಯಿಲ್ಲ ಬದಲಾಗಿ ನೈಸರ್ಗಿಕವಾಗಿ ಬೆಳೆದಿರುವ ಬೃಹತ್ ಬಂಡೆಯೇ ಶಿವನ ಗುಡಿಯಾಗಿದೆ.

 

 

 

ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿರುವ ಹುಲಿತಾಳ ಮನೆತನದ ಬ್ರಾಹ್ಮಣ ಕುಟುಂಬವನ್ನು ಕರೆತಂದು ಬೆಟ್ಟದಪ್ಪನ ಅರ್ಚನೆಗೆ ನೇಮಿಸುತ್ತಾರೆ. ಇಂದು ಸಹಿತ ಹುಲಿತಾಳ ಸಮುದಾಯದ ಅರ್ಚಕರೇ ಇಲ್ಲಿನ ದೈವಿಕ ಕಾರ್ಯ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದೆ. ಬೆಟ್ಟದಲ್ಲಿ ಈಶ್ವರ ಕಾಣಿಸಿದಕ್ಕೆ ರಾಜ ಬೆಟ್ಟದಪ್ಪ ಎಂದು ಕರೆದ. ಆ ನಂತರದ ದಿನದಲ್ಲಿ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಬೊಟ್ಲಪ್ಪ ಎಂದು ಕರೆದರು. ಇಂದು ಈ ದೇವಸ್ಧಾವನ್ನು ಬೊಟ್ಲಪ್ಪೇಶ್ವರ ದೇವಸ್ಥಾನವೆಂದು ಕರೆಯುತ್ತಾರೆ.

ಶ್ರೀ ಬೊಟ್ಲಪ್ಪೇಶ್ವರ ದೇವಸ್ತಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷವಾದ ವಾರ್ಷಿಕ ಮಹಾಪೂಜೆ ನಡೆಯುತ್ತದೆ.

ಗ್ರಾಮದ ಜನರು ತಮಗೆ, ಜಾನುವಾರಗಳಿಗೆ ಸಮಸ್ಯೆ ಬಂದಾಗ ಬೇಡಿಕೊಳ್ಳುತ್ತಾರೆ. ಅದು ಫಲಿಸಿದಾಗ ಮಣ್ಣಿನ ಮೂರ್ತಿಯನ್ನು ದೇವಾಲಯಕ್ಕೆ ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ. ಅನೇಕ ವರ್ಷದ ಹಿಂದಿನ ಜನ ಹರಕೆ ಹೊತ್ತು ಶಿವನಿಗೆ ಅರ್ಪಿಸಿದ್ದ, ನಾಯಿ, ಹಸು ಸೇರಿದಂತೆ ಇತರೇ ಪ್ರಾಣಿ, ಮನುಷ್ಯನ ರೂಪದ ಮಣ್ಣಿನ ಮೂರ್ತಿಗಳು ದೇವಾಲಯದ ಮುಂಭಾಗ ಕಾಣಿಸುತ್ತವೆ.

ಮಕ್ಕಳ ಪ್ರಾಪ್ತಿ : ಮಕ್ಕಳು ಆಗದೆ ಇರುವ ದಂಪತಿಗಳು ಇಲ್ಲಿ ಬಂದು ಬೇಡಿಕೊಳ್ಳುವ ಪ್ರತೀತಿ ಇದೆ. ಮಕ್ಕಳಾದ ಬಳಿಕ ಇಲ್ಲಿ ಬಂದು ಹರಕೆ ತೀರಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top