ಸಮಾಚಾರ

ಜಗತ್ತಲ್ಲಿರೋ ಈ 8 ಕಟ್ಟಡಗಳ ಬಗ್ಗೆ ಗೊತ್ತಾದ್ರೆ ಖಂಡಿತಾ ನಿಮ್ ತಲೆ ಗಿರ್ ಅನುತ್ತೆ

ಜಗತ್ತಿನಲ್ಲಿ ಅನೇಕ ಬಗೆಯ ವಿನ್ಯಾಸದ ಕಟ್ಟಡಗಳಿವೆ. ಅವುಗಳನ್ನು ನೋಡಿದ್ರೆ ಹೀಗೆ ಕಟ್ಟಿದ್ದಾರಾ ಅಂತೀರಾ. ಹಾಗಾದರೆ ವಿಭಿನ್ನ ಮಾದರಿಯ ಕಟ್ಟಡಗಳನ್ನು ನೋಡೋಣ ಬನ್ನಿ

1. ಬಾಳೆ ಹಣ್ಣಿನ ಆಕಾರದಲ್ಲಿರುವ ಈ ಕಟ್ಟಡ ಇರುವುದು ಆಸ್ಟ್ರೇಲಿಯಾ ದೇಶದಲ್ಲಿ. 1964ರಲ್ಲಿ ಜಾನ್ಲೆಂಡಿ ಇದರ ನಿರ್ಮಾಣವನ್ನು ಮಾಡಿದ್ದಾರೆ. 20 ಎಕರೆ ಪ್ರದೇಶದಲ್ಲಿ ಇದರ ನಿರ್ಮಾಣವಾಗಿದೆ. ಸಿನಿಮಾ ಮಂದಿರ, ನರ್ಸರಿ, ಐಸ್ಕ್ರೀಮ್ ಪಾರ್ಲರ್ ಜೊತೆಗೆ ಮಕ್ಕಳ ಮನೋರಂಜನೆಗೂ ಅವಕಾಶ ಕಲ್ಪಿಸಿಕೊಡಲಾಗಿದೆ.

2. ಅನಾನಸ್ ಹಣ್ಣಿನ ಮಾದರಿಯಲ್ಲಿ ಇರುವ ಈ ಕಟ್ಟಡ ಇರುವುದು ಆಸ್ಟ್ರೇಲಿಯಾ ದೇಶದಲ್ಲಿ. 3 ಅಂತಸ್ತಿನ ಈ ಕಟ್ಟಡದ ಎತ್ತರ 16.7 ಮೀಟರ್. 1971ರಲ್ಲಿ ಇದರ ನಿರ್ಮಾಣ ಆಗಿದೆ. 165 ಹೆಕ್ಟೇರ್ ಪ್ರದೇಶದಲ್ಲಿ ಇದರ ನಿರ್ಮಾಣ ಮಾಡಲಾಗಿದೆ .

 

 

3. ಈ ಬಾಸ್ಕೆಟ್ ಕಟ್ಟಡ ಇರುವುದು ಅಮೆರಿಕದ ಓಹಿಯೊನಲ್ಲಿ. 1997 ನಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ನಿರ್ಮಿಸಿದ್ದು ದಿ ಲಾಂ‌ಗಾ ಬರ್ಗರ್ ಕಂಪನಿ. ಸಂಶ್ಲೇಷಿತ ಪ್ಲಾಸ್ಟರ್ ವ್ಯವಸ್ಥೆ ಹೊಂದಿರುವುದಕ್ಕೆ 1998 ಬಿಲ್ಡ್ ಓಹಿಯೋ ಪ್ರಶಸ್ತಿಯನ್ನು ಕಟ್ಟಡ ಪಡೆದುಕೊಂಡಿತು. ಅಮೆರಿಕದ ಎನ್‌ಬಿಬಿಜೆ ಕಂಪನಿಯು ಕಟ್ಟಡವನ್ನು ವಿನ್ಯಾಸ ಮಾಡಿದೆ..

4. ಇದೇನಿದು ಮನೆ ಹೀಗೆ ತಲೆಕೆಳಗಾಗಿ ಇದೆ ಎಂದು ಯೋಚನೆ ಮಾಡುತ್ತಿದ್ದೀರಾ. ಇದರ ವಿನ್ಯಾಸವೇ ಹಾಗಿದೆ. ಇದು ಪೋಲಂಡ್ನಲ್ಲಿ ಇದೆ .

 

5. ಸೌಂಡ್ ಸಿಸ್ಟಮ್ ರೀತಿ ಇರೋ ಈ ಕಟ್ಟಡ ಬ್ಯಾಂಕ್ ಆಫ್ ಏಷ್ಯಾ, ಇರೋದು ಬ್ಯಾಂಕಾಕ್ನಲ್ಲಿ

6. ಫ್ಲೋರಿಡಾದ ಮಿಯಾಮಿ ನಲ್ಲಿ ಗಿಟಾರ್‌ ಮಾದರಿಯ ಕಟ್ಟಡ ನಿರ್ಮಾಣವಾಗುತ್ತಿದೆ. ಪ್ರಪಂಚದ ಅತಿ ದೊಡ್ಡ ಗಿಟಾರ್‌ ಮಾದರಿ ಕಟ್ಟಡ ಎನ್ನುವ ಹೆಗ್ಗಳಿಕೆ ಪಡೆದಿರುವ ಇದು 2019ರಲ್ಲಿ ಲೋಕಾರ್ಪಣೆ ಆಗಲಿದೆ.

 

 

7. ನೋಡಿದರೆ ಸಾಕು ಭಯ ಹುಟ್ಟುವ ಹಾಗಿರುವ ಈ ಕಟ್ಟಡದ ಹೆಸ್ರು ಹ್ಯಾಂಗ್ ನಾಗ್ ಇರುವುದು ವಿಯೆಟ್ನಾಂ ನಲ್ಲಿ.

8.  ಟೆಕ್ಸಾಸ್ನಲ್ಲಿ ಸುರಂಗ ಮಾರ್ಗದ ರೀತಿಯಲ್ಲಿ ಇರುವ ಈ ಕಟ್ಟಡ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top