ಸಮಾಚಾರ

ಪ್ರತಿಭಟನೆ ಹಿನ್ನೆಲೆ: ಅಯೋಧ್ಯೆಯಲ್ಲಿ RSS ಆಯೊಜಿತ ಕಾರ್ಯಕ್ರಮ ರದ್ದು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜನೆಯಾಗಿದೆ ಕಾರ್ಯಕ್ರಮವೊಂದು ಕ್ಯಾನ್ಸಲ್ ಆಗಿರುವ ಘಟನೆ ಬೆಳಕಿಗೆ ಬಂದಿದೆ ..ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ನೆನ್ನೆ (ಗುರುವಾರ) ನಡೆಯಬೇಕಾಗಿದ್ದ ಸಾಮೂಹಿಕ ನಮಾಜ್ ಹಾಗು ಕುರಾನ್ ಪಠಣ ಕಾರ್ಯಕ್ರಮ ರದ್ದಾಗಿದೆ. ಆ ಕಾರ್ಯಕ್ರಮಕ್ಕೆ ತೀವ್ರ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ.

 

 

ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಅಂಗ ಸಂಸ್ಥೆಯಾಗಿರುವ ರಾಷ್ಟ್ರೀಯ ಮುಸ್ಲಿಮ್ ಮಂಚ್ ಈ ಬೃಹತ್ ಸಾಮೂಹಿಕ ನಮಾಜ್ ಮತ್ತು ಕುರಾನ್ ಪಠಣ ಕಾರ್ಯಕ್ರಮವನ್ನು ಆಯೋಜಿಸಿತ್ತು.. ಆದರೆ ಈ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ನಿಂದ ಹೊರ ಬಂದು ಬೇರೆ ಸಂಘಟನೆ ಕಟ್ಟಿರುವ ಪ್ರವೀಣ್ ತೊಗಾಡಿಯಾ ಸೇರಿದಂತೆ ಮಹಂತ್‌ ರಾಜು ದಾಸ್‌,ಸಂತೋಷ್‌ ದುಬೆ ಹಾಗು ಇತರ ಹಿಂದೂಪರ ಹೋರಾಟಗಾರರು ಅಯೋದ್ಯೆಯಲ್ಲಿ ನಮಾಜ್ ಹಾಗು ಕುರಾನ್ ಪಠಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದರಿಂದ ಸರಯೂ ನದಿಯ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ಅವರು ವಾದಿಸಿದ್ದರು.

ತೀವ್ರವಾಗಿ ಪ್ರತಿಭಟನೆಯಾಗುವ ಮುನ್ಸೂಚನೆಯನ್ನು ಗಮನಿಸಿದ ಜಿಲ್ಲಾಡಳಿತ ಕಾರ್ಯಕ್ರಮವನ್ನು ರದ್ದು ಮಾಡುವಂತೆ ಹೇಳಿ ಅನುಮತಿಯನ್ನು ನಿರಾಕರಿಸಿದೆ. ಹಾಗಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಅಂಗ ಸಂಸ್ಥೆಯಾಗಿರುವ ರಾಷ್ಟ್ರೀಯ ಮುಸ್ಲಿಮ್ ಮಂಚ್’ನ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top