ಹೆಚ್ಚಿನ

ಜುಲೈ 27 ನೇ ತಾರೀಖು ಬರುವಂತ ಕೇತುಗ್ರಸ್ತ ಖಗ್ರಾಸ ಚಂದ್ರ ಗ್ರಹಣ ಕನ್ಯಾ ಹಾಗೂ ಸಿಂಹ ರಾಶಿಯವರ ಮೇಲೆ ಯಾವ ಒಳ್ಳೆ ಹಾಗೂ ಘೋರ ರೀತಿಯ ಪರಿಣಾಮ ಬೀರುತ್ತೆ ಅಂತ ತಪ್ಪದೆ ತಿಳ್ಕೊಳ್ಳಿ.

ಈ ಶತಮಾನದ ಸುದೀರ್ಘಾವಧಿಯ ಕೇತುಗ್ರಸ್ಥ ಖಗ್ರಾಸ ಚಂದ್ರಗ್ರಹಣದ ಕನ್ಯಾ ರಾಶಿಯ ಭವಿಷ್ಯ .

ಜುಲೈ 27 ನೇ ತಾರೀಖಿನಂದು ರಾತ್ರಿ ಪ್ರಾರಂಭವಾಗುವ ಕೇತುಗ್ರಸ್ಥ ಚಂದ್ರಗ್ರಹಣ 28 ನೇ ತಾರೀಖು ಕೂಡ ಖಗ್ರಾಸ ಚಂದ್ರ ಗ್ರಹಣದ ದಿನವಾಗಿದ್ದು. ಈ ದಿನ ಕನ್ಯಾ ರಾಶಿಯವರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ನೋಡೋಣ ಬನ್ನಿ.

 

 

ಕನ್ಯಾ ರಾಶಿಗೆ ಈ ಕೇತುಗ್ರಸ್ತ ಖಗ್ರಾಸ ಚಂದ್ರ ಗ್ರಹಣವು ಪಂಚಮ ಭಾವದಲ್ಲಿ ಜರುಗುತ್ತಿದೆ. ಪಂಚಮ ಭಾವವು ನಿಮ್ಮ ಪೂರ್ವ ಸಂಚಿತ ಕರ್ಮಗಳನ್ನು ಸೂಚಿಸುತ್ತದೆ ಮತ್ತು ಪೂರ್ವ ಕರ್ಮಗಳನ್ನು ಪ್ರತಿನಿಧಿಸುತ್ತದೆ .
ಇದು ಸಂತಾನ ಭಾವ ಕೂಡ, ಇದು ವಿದ್ಯೆಯನ್ನು ಕೂಡ ಸೂಚಿಸುತ್ತದೆ ಮತ್ತು ನಿಮ್ಮ ತಾತನ ವಂಶವನ್ನು ಕೂಡ ಸೂಚಿಸುವಂತಹ ಭಾವವಾಗಿದೆ. ಆದ್ದರಿಂದ ನಿಮ್ಮ ರಾಶಿಗೆ ಈ ಬಾರಿ ಮಿಶ್ರ ಫಲವನ್ನು ನೀಡಲಿದೆ. ಯಾಕೆಂದರೆ ಪಂಚಮ ಭಾವದಲ್ಲಿ ಕೇತುಗ್ರಸ್ಥ ಚಂದ್ರ ಗ್ರಹಣ ಸಂಭವಿಸಲಿದೆ. ಅಕ್ಟೋಬರ್ 11 ನೇ ತಾರೀಖಿನ ನಂತರ ನೀವು ಗುರು ಬಲದಿಂದ ವಂಚಿತರಾಗಲಿದ್ದೀರಿ, ಗುರುಬಲವನ್ನು ಕಳೆದುಕೊಳ್ಳಲಿದ್ದೀರಿ, ಅಲ್ಲಿಯವರೆಗೂ ಗುರು ನಿಮ್ಮನ್ನು ಬೆಂಬಲಿಸಲಿಸುತ್ತದೆ.

ಚತುರ್ಥ ಶನಿ ನಿಮಗೆ ಮನೆ, ಭೂಮಿ, ರಿಯಲ್ ಎಸ್ಟೇಟ್, ಜಮೀನು, ಆಸ್ತಿ ಪಾಸ್ತಿಗಳಿಗೆ ಹಾನಿಯನ್ನು ಮಾಡಲಿದ್ದಾನೆ .ಮೋಸದ ಪ್ರಸಂಗದಲ್ಲಿ ನೀವು ಸಿಲುಕಿಕೊಳ್ಳುತ್ತೀರಿ. ಕಾನೂನಾತ್ಮಕ ಹೋರಾಟಗಳಲ್ಲಿಯೂ ಕೂಡ ನಿಮಗೆ ಜಯ ಸಿಗುವುದು ಕಠಿಣವಾಗಿರುತ್ತದೆ. ಹೀಗಾಗಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಪರಸ್ಪರ ಹೊಂದಾಣಿಕೆಯಿಂದ ಬಗೆಹರಿಸಿಕೊಳ್ಳುವುದು ಅಥವಾ ನಿಮ್ಮ ನಿಮ್ಮಲ್ಲಿಯೇ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು. ಈ ಚತುರ್ಥ ಶನಿ ಅಥವಾ ಅರ್ಧಾಷ್ಟಮ ಶನಿ ಸುಮಾರು 50% ರಷ್ಟು ವ್ಯವಹಾರದಲ್ಲಿ ಮತ್ತು ಆಸ್ತಿಯ ವಿಷಯಗಳಲ್ಲಿ ನಿಮ್ಮನ್ನು ನಿಶ್ಚಿತವಾಗಿಯೂ ವಂಚಿಸಲಿದ್ದಾನೆ.
ಈ 5 ನೇ ಮನೆಯಲ್ಲಿರುವ ಕುಜ ಕೇತುಗಳು ನಿಮ್ಮ ಪಂಚಮ ಭಾವದಲ್ಲಿಯೇ ಘೋರವಾದ ಮತ್ತು ಕಠಿಣವಾದ ಸಂದರ್ಭಗಳನ್ನು ತಂದೊಡ್ಡಲಿದೆ. ಕೇತು ಮತ್ತು ಕುಜರ ಜೊತೆಗೆ ಈ ಬಾರಿ ಚಂದ್ರನು ಕೂಡ ಗ್ರಹಣಕ್ಕೆ ಒಳಗಾಗಿ ಸೇರಿಕೊಂಡಿದ್ದಾನೆ . ಆದ್ದರಿಂದ ಇಲ್ಲಿ ನೀವು ಸ್ವಯಂಕೃತ ಅಪರಾಧವನ್ನು ಮಾಡಿಕೊಳ್ಳುವ ಒಂದು ಪ್ರಸಂಗ ಒದಗಿ ಬರುತ್ತದೆ. ಆದ್ದರಿಂದ ನಿಮಗೆ ನೀವೇ ಶತ್ರುಗಳಾಗುತ್ತೀರ.ನಿಮ್ಮ ತಪ್ಪಿನಲ್ಲಿ ನೀವೇ ಸಿಲುಕಿ ಹಾಕಿಕೊಳ್ಳುತ್ತೀರಿ. ಈ ಘೋರ ಪರಿಣಾಮದ ಪ್ರಭಾವ ಚಂದ್ರನನ್ನು ಈಗಾಗಲೇ ಆವರಿಸಿ ಬಿಟ್ಟಿದೆ. ಈ ಕಾಟ ತಾಳಲಾರದೇ ನಿಮ್ಮ ಮನಸ್ಸು ತಡವರಿಸುತ್ತಿದೆ. ಏನೂ ಮಾಡಲಾರದ ಸ್ಥಿತಿಯಲ್ಲಿ ನೀವು ಈಗ ಇದ್ದೀರಿ. ಪೂರ್ವ ಸಂಚಿತ ಕರ್ಮಗಳು ನಿಮ್ಮನ್ನು ಸಂಪೂರ್ಣವಾಗಿ ಆವರಿಸಿ ಬಿಟ್ಟಿದೆ.

ಇಷ್ಟೇ ಅಲ್ಲದೆ ಸರ್ಪದೋಷಕ್ಕೂ ಕೂಡ ನೀವು ಒಳಗಾಗಿದ್ದೀರಿ . ಆದ್ದರಿಂದ ನಿಮ್ಮ ಸಂತಾನ ಮತ್ತು ಮಕ್ಕಳಿಗೂ ಕೂಡ ನಿಮಗೆ ಸಮಸ್ಯೆಯಾಗಲಿದೆ. ಪಿತೃ ವಂಶದ ಶಾಪಗಳು ಕೂಡ ನಿಮ್ಮನ್ನು ಗುರಿಯಾಗಿಸಿವೆ, ಇದನ್ನು ಅನುಭವಿಸಲೇಬೇಕಾಗುತ್ತದೆ. ಆರ್ಥಿಕ ಸ್ಥಿತಿಗೆ ಏನು ಧಕ್ಕೆ ಬರುವುದಿಲ್ಲ . ಪ್ರಾಣಾಪಾಯ ಕೂಡ ಇರುವುದಿಲ್ಲ ಆದರೆ ಮನಸ್ಸು ಮಾತ್ರ ವಿಷಮಯವಾಗಿರುತ್ತದೆ.

ಪರಿಹಾರ .
ಸೆಪ್ಟೆಂಬರ್ 26 ನೇ ತಾರೀಖಿನ ನಂತರ ತ್ರಿಪಿಂಡಿ ಶ್ರಾದ್ದವನ್ನು ಪಿತೃ ಪಕ್ಷದಲ್ಲಿ ಮಾಡಿಕೊಳ್ಳಿ. ಈಗಾಗಲೇ ಮಾಡಿಸಿದ್ದರೆ ಅದನ್ನು ಇನ್ನೊಮ್ಮೆ ಮಾಡಿಸಬಾರದು. ನೀವು ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ನಾರಾಯಣ ಕವಚವನ್ನು ಜಪಿಸಿ.

ಕೇತುಗ್ರಸ್ಥ ಖಗ್ರಾಸ ಚಂದ್ರಗ್ರಹಣದ ಸಿಂಹ ರಾಶಿಯ ಭವಿಷ್ಯ .

ಇದೇ ಜುಲೈ 27 ನೇ ತಾರೀಖು ರಾತ್ರಿ ಮತ್ತು 28 ನೇ ತಾರೀಖಿನಂದು ಸಂಭವಿಸಲಿರುವ ಈ ಶತಮಾನದ ಸುದೀರ್ಘಾವಧಿಯ ಖಗ್ರಾಸ ಚಂದ್ರ ಗ್ರಹಣ ಸಿಂಹ ರಾಶಿಯ ಮೇಲೆ ಶುಭ ಫಲಿತಾಂಶಗಳನ್ನೇ ನೀಡಲಿದೆ . ಆದನ್ನು ಇಂದು ನಾವು ತಿಳಿದುಕೊಳ್ಳೋಣ .’

 

 

ಸಿಂಹ ರಾಶಿಗೆ ಈ ಕೇತುಗ್ರಸ್ತ ಖಗ್ರಾಸ ಚಂದ್ರಗ್ರಹಣ ನಿಮ್ಮ ರಾಶಿಯಿಂದ ಆರನೇ ಭಾವದಲ್ಲಿ ಜರುಗಲಿದೆ. ಆದ್ದರಿಂದ ಈ ಗ್ರಹಣವು ಅತ್ಯಂತ ಉತ್ತಮ ಮತ್ತು ಅದ್ಭುತವಾದ ಶುಭ ಫಲಗಳನ್ನು ನೀಡಲಿದೆ 2011ನೇ ವರ್ಷದಿಂದ ನೀವು ತುಂಬಾ ದುಃಖ ಮತ್ತು ನೋವನ್ನು ಅನುಭವಿಸುತ್ತಲೇ ಬಂದಿದ್ದೀರಿ. 2011ರಲ್ಲಿಯೇ ಗ್ರಹಗಳು ನಿಮ್ಮನ್ನು ದಾರಿ ತಪ್ಪಿಸಿದ್ದವು.ಈ 7 ವರ್ಷಗಳಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಗ್ರಹಗಳು ಹಲವಾರು ರೀತಿಯ ಬಿರುಗಾಳಿಗಳನ್ನು ಎಬ್ಬಿಸಿ ಬಿಟ್ಟಿದ್ದವು, ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಿದ್ದೀರಿ.
ಆದರೆ ಪರಿಸ್ಥಿತಿಯೊಂದಿಗೆ ಎಂದಿಗೂ ಕೂಡ ನೀವು ಹೊಂದಾಣಿಕೆಯನ್ನು ಮಾತ್ರ ಮಾಡಿಕೊಳ್ಳಲಿಲ್ಲ .ಇದುವೇ ನಿಮ್ಮ ಶ್ರೇಷ್ಠ ಗುಣ .ಈ ವಿಶೇಷತೆಗೆ ಸಿಂಹ ರಾಶಿಯವರಲ್ಲಿ ಮಾತ್ರವೇ ಕಾಣಬಹುದಾಗಿದೆ. ಸಿಂಹ ಎಷ್ಟೇ ಹಸಿವಾಗಿದ್ದರೂ ಕೂಡ ಹುಲ್ಲನ್ನು ಮಾತ್ರ ತಿನ್ನುವುದಿಲ್ಲ ಉಪವಾಸವಿದ್ದು ಹಾಗೆಯೇ ಮಲಗುತ್ತದೆ. ಕೂಡ ಆದರೆ ಹುಲ್ಲನ್ನು ಮಾತ್ರ ತಿನ್ನುವುದಿಲ್ಲ. ಅದೇ ರೀತಿ ನಿಮ್ಮೊಡನೆಯೂ ಕೂಡ ಘಟನೆಗಳು ಜರುಗಿವೆ.
ನೀವು ತುಂಬಾ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿರುತ್ತೀರ. ಮಹತ್ವಾಕಾಂಕ್ಷೆ ಇರುವ ನೀವು ಯಾವುದೇ ಕಾರಣಕ್ಕೂ ಗುರಿ ಸಾಧಿಸುವವರೆಗೂ ಛಲ ಬಿಡುವುದಿಲ್ಲ. ವಿಶ್ರಾಂತಿಯನ್ನು ಕೂಡ ಪಡೆಯುವುದಿಲ್ಲ. ನಿರಂತರ ಪರಿಶ್ರಮವನ್ನು ಮಾಡುತ್ತಲೇ ಇರುತ್ತೀರಿ. ಈಗ ಕಾಲ ಕೂಡಿಬಂದಿದೆ ಆ ಸಮಯ ಮತ್ತು ಯೋಗ ಕೂಡಿ ಬಂದಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ನಿಮಗೆ ಈಗ ಒದಗಿ ಬಂದಿದೆ.ಪಂಚಮ ಶನಿ ಇದ್ದರೂ ಕೂಡ ಶನೈಶ್ಚರನು ನಿಮಗೆ ಏನು ಮಾಡುವುದಿಲ್ಲ. ನಿಮ್ಮ ಕರ್ಮಗಳ ಆಧಾರಿತ ಫಲವನ್ನು ನೀಡಲಿದ್ದಾನೆ.

ಈ ಚಂದ್ರ ಗ್ರಹಣ ನಿಮ್ಮ ಶತ್ರುಗಳನ್ನು ಸಂಪೂರ್ಣವಾಗಿ ನಾಶ ಮಾಡಲಿದೆ.. ಹಿತ ಶತ್ರುಗಳು ಶತ್ರುಗಳು ಮತ್ತು ಸಂಪೂರ್ಣ ರೋಗ ರುಜಿನಗಳನ್ನು ನಾಶ ಮಾಡಲಿವೆ.ಇನ್ನೂ ಕರ್ಮಗಳು ಸರಿಯಾದ ಕಾರಣ ಪಂಚಮ ಶನಿಯು ಏನು ಮಾಡುವುದಿಲ್ಲ.ಆದ್ದರಿಂದ ಎಲ್ಲಾ ಅಡೆತಡೆಗಳು ದೂರವಾಗಲಿವೆ. ಹಳೆಯ ವಿಷಯಗಳು ,ಹಳೆಯ ವಿವಾದಗಳು , ಹಳೆಯ ಸಂಬಂಧಗಳು ಅಂತ್ಯವಾಗಿ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ಹೊಸ ಆರಂಭದ ಸೂಚನೆಯನ್ನು ಈ ಗ್ರಹಣದ ಮೂಲಕ ನೀಡುತ್ತವೆ.

ದೀರ್ಘಕಾಲದಿಂದ ಯಾವುದಾದರೂ ರೋಗಗಳಿಂದ ಬಳಲುತ್ತಿದ್ದರೆ ಆ ರೋಗಗಳನ್ನು ಕೂಡ ನಾಶ ಮಾಡಲಿದೆ. ರೋಗಗಳು ಗಣನೀಯ ಏರಿಕೆಯಾಗಿದೆ. ಶನಿ ಮತ್ತು ಗುರುಗಳು ಎಷ್ಟೇ ವಿರೋಧಿಸಿದರೂ ಕೂಡ ನಿಮಗೆ ಕೇತು ಮತ್ತು ಕುಜನ ಸಹಕಾರ ಸಂಪೂರ್ಣವಾಗಿದೆ ಮತ್ತು ಅವರ ಬೆಂಬಲವೂ ನಿಮಗೆ ಇದೆ. ರಾಹು ಮಾತ್ರ ನಿಮಗೆ ದೂರ ಪ್ರದೇಶ ಅಥವಾ ಪ್ರವಾಸ ಭಾಗ್ಯವನ್ನು ನೀಡಲಿದ್ದಾನೆ.

ಪರಿಹಾರ .
ಸಿಂಹ ರಾಶಿಯವರು ಗ್ರಹಣದ ಪಲವು ಶುಭವಾಗಿರುವುದರಿಂದ ಕೇವಲ ಸೂರ್ಯನ ಉಪಾಸನೆ, ಸೂರ್ಯನ ಆರಾಧನೆ ಮತ್ತು ಸಿದ್ಧಿಸಿದ ಸೂರ್ಯ ಕವಚವನ್ನು ಧರಿಸಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top