ಸಮಾಚಾರ

15 ತಿಂಗಳ ಪೋರನಿಗೆ ರಶ್ಮಿಕಾರಿಂದ ಒಲಿದು ಬಂತು ಅದೃಷ್ಟ

ಕನ್ನಡದ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅಭಿನಯ ಮಾಡುತ್ತಿರುವ ತೆಲುಗು ಸಿನಿಮಾ ಗೀತಂ ಗೋವಿಂದಂನ ಮೊದಲ ಹಾಡು ರಿಲೀಸ್ ಆಗಿದೆ. ಆಗಸ್ಟ್​​​ 15 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಈಗಾಗಲೇ ಚಿತ್ರತಂಡ ಹೇಳಿದೆ. ಈ ಹಾಡು ಬಿಡುಗಡೆ ಆದ ಕೇವಲ 24 ಗಂಟೆಯಲ್ಲಿ 2 ಲಕ್ಷ ವೀವ್ಸ್​ ಪಡೆದಿತ್ತು. ಈ ಹಾಡಿನಲ್ಲಿನ ವಿಜಯ್​ ಹಾಗೂ ರಶ್ಮಿಕಾ ಅವರ ಕೆಮಿಸ್ಟ್ರಿ ಸಕತ್​ ವರ್ಕೌಟ್​ ಆಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತಿದೆ.

 

ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸದ್ದು ಮಾಡುತ್ತಿದ್ದು ಯುಟ್ಯೂಬ್ ನಲ್ಲಿ ದಾಖಲೆ ಮೊತ್ತದ ವಿವ್ಸ್ ಪಡೆದುಕೊಂಡಿದೆ. ಈಗ 15 ತಿಂಗಳ ವಯಸ್ಸಿನ ಮಗುವೊಂದು ಈ ಹಾಡಿಗೆ ಮನಸೋತಿದೆ. ಕಣ್ಣು ರೆಪ್ಪೆಗಳನ್ನು ಪಿಳಿಕಿಸದೆ ಆಸಕ್ತಿಯಿಂದ ಸಾಂಗ್ ನೋಡುವ ಪರಿಗೆ ಸ್ವತಃ ಚಿತ್ರದ ನಟನಾಗಿರುವ ವಿಜಯ್​ ಬೆರಗಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಮೊದಲಿಗೆ ರಾಮು ಎಂಬುವವರು ಈ ವಿಡಿಯೋ ಪೋಸ್ಟ್ ಮಾಡಿದ್ದೂ ಚಿತ್ರದ ನಟ ವಿಜಯ್ ಹಾಗೂ ನಟಿ ರಶ್ಮಿಕಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಫುಲ್ ಖುಷಿಯಾಗಿರುವ ವಿಜಯ್ ಹಾಗೂ ರಶ್ಮಿಕಾ ಈ ವಿಡಿಯೋ ರಿಟ್ವಿಟ್ ಮಾಡಿದ್ದೂ. ಆತನನ್ನು ತಮ್ಮ ಶೂಟಿಂಗ್​ ಸೆಟ್​​ಗೆ ಕರೆತನ್ನಿ, ನಾನು ಹಾಗೂ ರಶ್ಮಿಕಾ ಅವರು ಆತನನ್ನು ನೋಡಬೇಕು ಎಂದು ವಿಜಯ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಇನ್ನು ರಶ್ಮಿಕಾ ಆ ಗೊಂಬೆಯನ್ನು ನನ್ನ ತೋಳ್ಗಳಲ್ಲಿ ಬಿಗಿಯಾಗಿ ಅಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

 

ಸದ್ಯ ಈ ಪುಟಾಣಿ ಹುಡುಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top