ಮನೋರಂಜನೆ

ಮೊಟ್ಟಮೊದಲ ಬಾರಿಗೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಕಮಲ್-ಸಲ್ಮಾನ್.

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಇದೆ ಮೊದಲಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಇವರಿಬ್ಬರೂ ಸೇರಿ ಯಾವುದೇ ದೊಡ್ಡ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಬಾವಿಸಿದರೆ ಅದು ತಪ್ಪು ನಿರ್ಧಾರವಾಗುತ್ತದೆ. ಯಾಕೆಂದರೆ ಈ ಇಬ್ಬರೂ ಸ್ಟಾರ್ ಗಳು ಒಟ್ಟಾಗುತ್ತಿರುವುದು ಸಿನಿಮಾದಲ್ಲಲ್ಲ ಬದಲಾಗಿ ಟಿವಿ ಷೋ ಒಂದರಲ್ಲಿ..

 

 

ಖಾಸಗಿ ವಾಹಿನಿಯಲ್ಲಿ ಸಲ್ಮಾನ್ ಖಾನ್ ಅವರು ‘ದಸ್ ಕ ದಮ್’ ಎಂಬ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರಲ್ಲ ಆ ಶೋಗೆ ಅತಿಥಿಯಾಗಿ ಕಮಲ್ ಹಾಸನ್ ಆಗಮಿಸಿದ್ದಾರೆ ಆ ಮೂಲಕ ಇದೆ ಮೊದಲ ಬಾರಿಗೆ ನಟರಿಬ್ಬರು ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ಕಮಲ್ ಹಾಸನ್ ಅವರು ತಮ್ಮ ಅಭಿನಯದ ವಿಶ್ವರೂಪಂ 2 ಚಿತ್ರದ ಪ್ರಚಾರದಲ್ಲಿ ತೊಡಗಿದ್ದು ಆ ಸಿನಿಮಾದ ಪ್ರಚಾರಕ್ಕಾಗಿ ಸಲ್ಲು ನಿರೂಪಣೆಯ ಶೋಗೆ ಹೋಗಿದ್ದಾರೆ. ವಿಶ್ವರೂಪಂ 2 ಚಿತ್ರ ಹಿಂದಿಯಲ್ಲೂ ಬರುತ್ತಿದ್ದು ಹಿಂದಿ ಆವೃತ್ತಿಯ ಹಕ್ಕುಗಳನ್ನು ನಿರ್ದೇಶಕ ರೋಹಿತ್ ಶೆಟ್ಟಿ ಮತ್ತು ಅನಿಲ್ ಅಂಬಾನಿಯ ರಿಲಾಯನ್ಸ್ ಎಂಟರ್ಟೈನ್ಮೆಂಟ್ ಖರೀದಿಸಿದೆ. ವಿಶ್ವರೂಪಂ 2 ಚಿತ್ರವನ್ನು ಕಮಲ್ ಹಾಸನ್ ನಟಿಸಿ, ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಆಗಸ್ಟ್ 10ಕ್ಕೆ ದೇಶಾದ್ಯಂತ ತೆರೆಕಾಣುತ್ತಿದ್ದು ತಮಿಳು, ಹಿಂದಿ ಹಾಗೂ ತೆಲುಗು ಮೂರು ಭಾಷೆಯಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top