ಸಮಾಚಾರ

ಕುಲದೀಪ್, ರೋಹಿತ್ ಅಮೋಘ ಆಟ- ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಇಂಗ್ಲೆಂಡ್​ ನಲ್ಲಿರುವ ನ್ಯಾಟಿಂಗ್ ​​ಹ್ಯಾಮ್​​ ಟ್ರೆಂಟ್​​ ಬ್ರಿಡ್ಜ್​​ನಲ್ಲಿ ನಡೆದ ಭಾರತ ಹಾಗು ಇಂಗ್ಲೆಂಡ್ ಪ್ರಥಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ನ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ರವರ ಅಜೇಯ ಶತಕ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಭಾರತ ಜಯ ಸಾಧಿಸಿದ್ದು, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

 

 

ಟಾಸ್ ಸೋತರು ಕೂಡ ಬ್ಯಾಟಿಂಗ್ ಮಾಡಲು ಇಳಿಸಲ್ಪಟ್ಟ ಇಂಗ್ಲೆಂಡ್ 49.5 ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 268ರನ್ ಗಳಿಸಿ ಭಾರತಕ್ಕೆ 269 ರನ್ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಭಾರತ 40.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿ ಗೆಲುವು ಸಾಧಿಸಿತು ಎಂದು ತಿಳಿದು ಬಂದಿದೆ.

ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಅಜೇಯರಾಗಿ ಉಳಿದು 137 (114) ರನ್ ಸಿಡಿಸಿ ಭಾರತದ ಗೆಲುವಿನ ದಾರಿ ಸುಲಭ ಮಾಡಿದರು. ಇವರೊಂದಿಗೆ ಶಿಖರ್ ಧವನ್ 40 (27), ವಿರಾಟ್ ಕೊಹ್ಲಿ 75 (82), ಕೆಎಲ್ ರಾಹುಲ್ ಅಜೇಯ 9 (18) ರನ್ ಸೇರಿದರು ಎಂದು ತಿಳಿದು ಬಂದಿದೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿಯು 160 ರನ್ ಜೊತೆಯಾಟದಲ್ಲಿ ಕಲೆ ಹಾಕಿತು.

ಮೊದಲು ಬ್ಯಾಟಿಂಗ್‌ ಪ್ರಾರಂಭಿಸದ ಇಂಗ್ಲೆಂಡ್‌ ತಂಡಕ್ಕೆ ಭಾರತೀಯ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಬಿಟ್ಟು ಬಿಡದೇ ಕಾಡಿದರು. ಕುಲದೀಪ್ ಯಾದವ್ ಒಟ್ಟು 6 ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಪರ ಮೊಯಿನ್ ಅಲಿ ಮತ್ತು ಅದಿಲ್ ರಷೀದ್ ತಲಾ ಒಂದು ವಿಕೆಟ್ ಪಡೆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top