ಸಮಾಚಾರ

ಮನೆಯಲ್ಲೇ ಕೊಬ್ಬರಿ ಲಾಡು ಮಾಡುವ ಸಿಂಪಲ್ ವಿಧಾನ

ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿ ಪದಾರ್ಥ ಕೊಬ್ಬರಿ ಲಾಡು ಮಾಡುವ ಸಿಂಪಲ್ ವಿಧಾನವನ್ನು ನಾವು ತಿಳಿದು ಕೊಳ್ಳೋಣ.

 

ಕೊಬ್ಬರಿ ಲಾಡು ಮಾಡಲು ಬೇಕಾಗುವ ಸಾಮಗ್ರಿಗಳು:
ಕಾಯಿಯ ತುರಿ – 2 ಬಟ್ಟಲು
ಘನೀಕರಿಸಿದ ಹಾಲು( ಕಂಡೆನ್ಸಡ್ ಮಿಲ್ಕ್) – 2 ಬಟ್ಟಲು
ಸಕ್ಕರೆ – 1 ಬಟ್ಟಲು
ಏಲಕ್ಕಿ ಪೌಡರ್ – ಸ್ವಲ್ಪ
ಬಾದಾಮಿ – ಸ್ವಲ್ಪ
ತುಪ್ಪ – ಸ್ವಲ್ಪ

 

 

 

ಕೊಬ್ಬರಿ ಲಾಡು ಮಾಡುವ ಸಿಂಪಲ್ ವಿಧಾನ:

2 ಬಟ್ಟಲು ಕಾಯಿಯ ತುರಿಯನ್ನು ಬಾಣಲೆಯಲ್ಲಿ ಹಾಕಿ ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ಸ್ವಲ್ಪ ನೀರಿನಂಶ ಹೋಗುವವರೆಗೆ ಹುರಿಯಿರಿ. ನಂತರ 2 ಬಟ್ಟಲು ಘನೀಕರಿಸಿದ ಹಾಲು( ಕಂಡೆನ್ಸಡ್ ಮಿಲ್ಕ್) ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ, ಸ್ವಲ್ಪ ಸಮಯದ ಬಳಿಕ 1 ಅಳತೆ ಸಕ್ಕರೆ ಪುಡಿ, ಏಲಕ್ಕಿ ಪುಡಿ ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ. ಮಿಶ್ರಣವೆಲ್ಲ ಗಟ್ಟಿ ಆದಾಗ ಒಲೆಯಿಂದ ಇಳಿಸಿಕೊಳ್ಳಿ.

ಮಿಶ್ರಣವೆಲ್ಲ ಗಟ್ಟಿಯಾದ ಬಳಿಕ ಒಲೆಯಿಂದ ಇಳಿಸಿಕೊಳ್ಳಿ, ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಕೈಗೆ ಸ್ವಲ್ಪ ತುಪ್ಪವನ್ನು ಸವರಿಕೊಂಡು ಸಾವಕಾಶವಾಗಿ ಮಿಶ್ರಣವನ್ನು ಒಂದೊಂದೆ ಉಂಡೆ ಆಕಾರದಲ್ಲಿ ಮಾಡಿ ಪ್ಲೇಟ್ ನಲ್ಲಿ ಇಡಿ. ಕೊಬ್ಬರಿ ತುರಿಯಿಂದ ತಯಾರಿಸಿದ ಲಡ್ಡುಗಳನ್ನು ಒಂದೊಂದು ಬಾದಾಮಿ ಅಲಂಕರಿಸಿ ಸಿದ್ಧ ಮಾಡಿದರೆ ಕೊಬ್ಬರಿ ಲಡ್ಡು ಸವಿಯಲು ತಯಾರಾಗುತ್ತವೆ.

ನೀವು ಬೇಕಾದರೆ ಸಣ್ಣಗಾಗಿ ಹೆಚ್ಚಿದ ಡ್ರೈ ಫ್ರೂಟ್ಸ(ಬಾದಾಮಿ, ಗೋಡಂಬಿ ) ಉಂಡೆಯನ್ನು ಮಾಡುವಾಗ ಹಾಕಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top