ಭವಿಷ್ಯ

14 ಜುಲೈ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೧೪ ಜುಲೈ ೨೦೧೮
ಸೂರ್ಯೋದಯ : ೦೬:೦೯
ಸೂರ್ಯಾಸ್ತ : ೧೯:೧೯
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಶುಕ್ಲ ಪಕ್ಷ
ತಿಥಿ : ಬಿದಿಗೆ – ೨೪:೫೫+ ವರೆಗೆ
ನಕ್ಷತ್ರ : ಪುಷ್ಯ – ೧೬:೦೭ ವರೆಗೆ
ಯೋಗ : ವಜ್ರ – ೨೪:೨೨+ ವರೆಗೆ
ಸೂರ್ಯ ರಾಶಿ : ಮಿಥುನ

ಅಭಿಜಿತ್ ಮುಹುರ್ತ : ೧೨:೧೭ – ೧೩:೧೦
ಅಮೃತಕಾಲ : ೧೦:೨೯ – ೧೧:೫೩
ರಾಹು ಕಾಲ:೦೯:೨೬ – ೧೧:೦೫
ಗುಳಿಕ ಕಾಲ: ೦೬:೦೯ – ೦೭:೪೭
ಯಮಗಂಡ:೧೪:೨೨ – ೧೬:೦೧

 

ಅನೇಕ ರೀತಿಯ ಒತ್ತಡಗಳ ನಡುವೆಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸುದಿನವಾಗಿದೆ. ಅಂತೆಯೇ ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ.

 

ಹಿತಶತ್ರುಗಳು ನಿಮ್ಮ ನೆಮ್ಮದಿಯನ್ನು ಕೆಡಿಸುವ ಹುನ್ನಾರದಲ್ಲಿದ್ದಾರೆ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿ ಆಡುವರು. ಇದರಿಂದ ಕೋಪಗೊಳ್ಳುವ ನೀವು ಮಾತಿನ ಭರದಲ್ಲಿ ಸತ್ಯವನ್ನು ನುಡಿದು ಪೇಚಿಗೆ ಸಿಲುಕೊಳ್ಳುವಿರಿ. ತಾಳ್ಮೆಯಿಂದ ಇರಿ.

 

ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.

 

ಮಾತು ಬಲ್ಲವನಿಗೆ ಜಗಳವಿಲ್ಲ ಎಂದರು ಹಿರಿಯರು. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡುವುದು. ಈ ಬಗ್ಗೆ ಜಾಗ್ರತೆ ಇರಲಿ. ಆರೋಗ್ಯದ ಕಡೆ ಗಮನ ಇರಲಿ.

 

 

ನಿಮ್ಮ ಸಮೀಪದ ಜನ ಅಥವಾ ಬಂಧುಗಳೇ ನಿಮ್ಮ ಕಾರ‍್ಯವೈಖರಿಯನ್ನು ಟೀಕಿಸುವರು. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ, ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು. ನಿಮ್ಮ ಬಗ್ಗೆ ದೂರು ಹೇಳಿದರೆ ನಕ್ಕು ಸುಮ್ಮನಾಗಿ.

 

 

ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಂಗಾತಿಯಿಂದ ದೂರ ಇರುವುದು ಒಳ್ಳೆಯದಲ್ಲ. ನೀವು ಆಡುವ ಮಾತುಗಳನ್ನು ಇನ್ನೊಬ್ಬರೂ ಅಷ್ಟೇ ಗಹನವಾಗಿ ಚಿಂತಿಸುತ್ತಾರೆ ಎಂಬುದನ್ನು ತಿಳಿಯಿರಿ.

 

 

ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ಕೆಲವು ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಕುಲದೇವತಾ ಸ್ಮರಣೆ ಮಾಡಿರಿ. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.

 

 

ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್‌ ಚಾತುರ್ಯದಿಂದ ನಿಮ್ಮ ಸಹಪಾಠಿಗಳನ್ನು ಗೆಲ್ಲುವಿರಿ. ದುಷ್ಟ ಫಲ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿರಿ.

 

ಹಣ ಖರ್ಚಾಗುವ ಪರಿ ಕಂಡು ಆಶ್ಚರ್ಯವಾಗುವುದು. ದುಡಿದ ಹಣವನ್ನು ಅನಾರೋಗ್ಯ ಸಲುವಾಗಿ ಖರ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಭಗವಂತನ ಕಾರ್ಯಗಳಿಗೆ ಮತ್ತು ಬಡವರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ.

 

 

ಸಣ್ಣ ವಿಷಯವನ್ನು ಕೂಡಾ ಭೂತ ಕನ್ನಡಿಯಿಂದ ನೋಡಿ ಪರೀಕ್ಷಿಸುವ ಮನಸ್ಥಿತಿಯಿರುವ ನೀವು ಕೆಲವೊಮ್ಮೆ ಉದಾರಿಗಳಾಗಬೇಕಿದೆ. ತಪ್ಪು ಮಾಡದ ಮನುಜ ಈ ಜಗತ್ತಿನಲ್ಲಿ ಇಲ್ಲ. ಹಾಗಾಗಿ ಇತರರು ಮಾಡುವ ತಪ್ಪಿಗೆ ಕ್ಷ ಮೆ ನೀಡಿ.

 

ಎಲೆಮರೆಯ ಕಾಯಿಯಂತೆ ಇದ್ದ ನೀವು ಸಮಾಜಮುಖಿ ಕೆಲಸಗಳಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಸಕಾರಾತ್ಮಕ ಚಿಂತನೆಯು ನಿಮ್ಮಿಂದ ಸರಿಯಾದ ಕೆಲಸವನ್ನು ಮಾಡಿಸುವುದು ಮತ್ತು ಅದರಲ್ಲಿ ಸಫಲತೆಯನ್ನು ಹೊಂದುವಿರಿ.

 

ಆತ್ಮೀಯ ಗೆಳೆಯರು ನಿಮ್ಮಿಂದ ಕೆಲ ವಿಷಯ ತಿಳಿಯಲು ಕಾತುರರಾಗಿದ್ದಾರೆ. ಅವರಿಗೆ ನಿಮ್ಮ ವಿಚಾರಧಾರೆಗಳನ್ನು ತಿಳಿಸುವಿರಿ. ಇದರಿಂದ ಅವರು ಪ್ರಭಾವಿತರಾಗಿ ನಿಮ್ಮನ್ನು ಕೊಂಡಾಡುವರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top