ಸಮಾಚಾರ

ನಾಗರಹಾವು ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ – ಹಿರಿಯ ನಟಿ ಲೀಲಾವತಿ.

1973ರಲ್ಲಿ ಬಿಡುಗಡೆ ಆಗಿದ್ದ ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಚಿತ್ರ ‘ನಾಗರಹಾವು’. ಈ ಸಿನೆಮಾ ಡಾ.ವಿಷ್ಣುವರ್ಧನ್ ಅವರ ಜೀವನದಲ್ಲಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರ. ಇಂತಹ ಅಪರೂಪದ ಚಿತ್ರ ಈಗ ಹೊಸ ರೂಪ ಪಡೆದು ಮತ್ತೊಮ್ಮೆ ರೀ ರಿಲೀಸ್ ಆಗಲಿದೆ. ಇತ್ತೀಚೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಚಿತ್ರದ ಟ್ರೈಲರ್ ನ್ನು ಯುರೋಪ್ ನಲ್ಲಿ ರಿಲೀಸ್ ಮಾಡಿದ್ದಾರೆ. ನಾಗರಹಾವು ಸಿನೆಮಾ ಇದೇ ಜುಲೈ 21ಕ್ಕೆ ರೀ ರಿಲೀಸ್ ಆಗುತ್ತಿದೆ.

‘ನಾಗರಹಾವು’ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಅಭಿನಯ ಮಾಡಿದ್ದ ನಟಿ ಲೀಲಾವತಿ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ನಾಗರಹಾವು ಚಿತ್ರದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದರು ಇದರಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ನಟಿ ಲೀಲಾವತಿ ಅವರು ‘ನಾಗರಹಾವು’ ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗಿಲ್ಲ ಎನ್ನುತ್ತಲೇ ಮೈಕ್ ಕೈಗೆ ತೆಗೆದುಕೊಂಡರು. ಈಗ ಸಿನಿಮಾದ ಹಾಡಗಳನ್ನು ಮತ್ತೆ ನೋಡಿ ಬೆರಗಾದೆ. ಈ ಹಿಂದೆ ಅನೇಕ ಬಾರಿ ಓಬವ್ವನ ಹಾಡನ್ನು ನೋಡಿದ್ದೇನೆ. ಆದರೆ, ಈಗ ನೋಡಿದಾಗ ಇಷ್ಟೊಂದು ಚೆನ್ನಾಗಿ ಅದನ್ನು ಮಾಡಲು ಸಾಧ್ಯನಾ ಎಂದು ಅನಿಸಿತು ಎಂದು ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ.

 

 

ನಟ ರವಿಚಂದ್ರನ್ ಮತ್ತು ಅವರ ತಮ್ಮ ಜೊತೆಯಾಗಿ ಈ ಸಿನೆಮಾಗೆ ಹೊಸ ರೂಪವನ್ನು ತಂದಿದ್ದಾರೆ. ಎಲ್ಲ ಕನ್ನಡಿಗರು ಈ ಸಿನಿಮಾ ನೋಡಿ ಎಂದು ಮನವಿ ಮಾಡಿದರು ಹಾಗು ಈ ಸಿನಿಮಾ ನೂರು ದಿನ ಅಲ್ಲ ನೂರು ವರ್ಷ ಓಡಬೇಕು ಎಂದು ಲೀಲಾವತಿ ಅವರು ಶುಭ ಹಾರೈಸಿದರು.

ಇನ್ನು ಇದೆ ಕಾರ್ಯಕ್ರಮದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್, ಹಿರಿಯ ನಟಿ ಜಯಂತಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಕೂಡ ಭಾಗವಹಿಸಿ ಮಾತನಾಡಿದರು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top