ಅರೋಗ್ಯ

ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವ ಬಿಳಿ ಸೆರಗು(ಬಿಳಿ ಸ್ರಾವ) ಸಮಸ್ಯೆಗೆ ಮನೆ ಮದ್ದು

ಗರ್ಭಕೋಶದಲ್ಲಿನ ಸತ್ತ ಜೀವಕೋಶಗಳನ್ನು ಹೆಣ್ಣಿನ ಜನನೇಂದ್ರಿಯದ ಮೂಲಕ ದೇಹದ ಹೊರಹಾಕುವ ಪ್ರಕ್ರಿಯೆಗೆ ಬಿಳಿ ಮುಟ್ಟು ಅಥವಾ ಬಿಳಿ ಸೆರಗು ಎನ್ನಲಾಗುತ್ತದೆ.

 

 

ಯೋನಿಯಲ್ಲಿ ತೀರಾ ವಾಸನೆ ಅಥವಾ ತುರಿಕೆ ಇದ್ದರೆ ಯಾವುದೊ ಸೋಂಕು ಉಂಟಾಗಿರುವ ಲಕ್ಷಣಗಳು ಎನ್ನಬಹುದು.
ಬಾರ್ಥೊಲಿನ್ ಎಂಬ ಗ್ರಂಥಿಗಳಿಂದ ಬಿಳಿ ಮುಟ್ಟು ಉತ್ಪತ್ತಿಯಾಗುತ್ತದೆ.

*ಟ್ರೈಕೋಮೋನಾಸ್ ಮತ್ತು ಕ್ಯಾಂಡಿಡಾ ಎಂಬ ಸೂಕ್ಷ್ಮಾಣು ಜೀವಿಗಳು ಸೋಂಕನ್ನು ಉಂಟುಮಾಡಬಹುದು.
*3 ಗ್ರಾಂ ಆಮ್ಲಾ ಪುಡಿ ಮತ್ತು 6 ಗ್ರಾಂ ಜೇನುತುಪ್ಪ ಮಿಶ್ರಣ ಮಾಡಿ 30 ದಿನಗಳ ಕಾಲ ತೆಗೆದುಕೊಂಡರೆ ಬಿಳಿ ಸೆರಗು ಗುಣಪಡಿಸಲು ಸಹಾಯ ಮಾಡುತ್ತದೆ.

 

 

*30 ತಾಜಾ ದಾಳಿಂಬೆ ಎಲೆಗಳನ್ನು 10 ಕಪ್ಪು ಮೆಣಸು ಗಳನ್ನು ಸೇರಿಸಿ ಜಜ್ಜಿ ಅರ್ಧ ಗ್ಲಾಸ್ ನೀರಿನಲ್ಲಿ ಮಿಶ್ರಣ ಮಾಡಿ ಮೂರು ವಾರಗಳ ಕಾಲ ಸೇವಿಸಬೇಕು.

 

 

*2 ಟೀ ಚಮಚ ಒಣ ಶುಂಠಿ ಪುಡಿ ತೆಗೆದುಕೊಂಡು 250 ಮಿ ಲಿ ನೀರಿನಲ್ಲಿ ಬೇರೆಸಿ ಕುಡಿಯಬೇಕು.

*ಮೆಂತ್ಯೆಯನ್ನು ರಾತ್ರಿ ಇಡೀ ನೀರಿನಲ್ಲಿ ನೆನೆಸಿ , ಬೆಳಗ್ಗೆ 2 ಚಮಚ ಮೆಂತ್ಯೆಗೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

*ಮೂರು -ನಾಲ್ಕು ಬೆಂಡೆ ಕಾಯಿಯನ್ನು ಬಿಸಿ ನೀರಿನಲ್ಲಿ ಬೇಯಿಸಿ ಒಂದು ವಾರ ಕುಡಿದರೆ ಒಳ್ಳೆಯದು.

*ಸೀಬೆಕಾಯಿಯು ಸಹ ಬಿಳಿ ಮುತ್ತಿಗೆ ಉತ್ತಮ ಪರಿಹಾರ .

*ಬಿಳಿ ದಾಸವಾಳದ ಹೂವನ್ನು ( 4 – 6 ) ಸಕ್ಕರೆ ಬೆರೆಸಿ ಅರೆದು ಸೇವಿಸಿದರೆ ಸ್ತ್ರೀಯರ ಬಿಳಿ ಮುಟ್ಟಿನ ಸ್ರಾವ ನಿವಾರಣೆಯಾಗುತ್ತದೆ.

*ಜಿಡ್ಡು ಪದಾರ್ಥಗಳಾದ ಮೊಸರು , ಮೀನನ್ನು ತಿನ್ನಬಾರದು, ಸಿಹಿ ಹಾಗು ಎಣ್ಣೆ ಪದಾರ್ಥಗಳನ್ನು ತಿನ್ನಬಾರದು.

*ಉತ್ತಮ ವಿಟಮಿನ್ ಯುಕ್ತ ಆಹಾರ , ಹಸಿ ತರಕಾರಿ ,ಹಣ್ಣುಗಳು, ಸೊಪ್ಪು ,ಹೆಚ್ಚು ನೀರು , ಮಿನರಲ್ ಯುಕ್ತ ಆಹಾರ ಸೇವಿಸಬೇಕು.

*ಬೇರೆಯವರ ಸೋಪು, ಟವೆಲ್ಲು, ಒಳ ಉಡುಪು, ಹಾಗು ವಸ್ತ್ರಗಳನ್ನು ಉಪಯೋಗಿಸಬಾರದು ಹಾಗು ನೆನೆದ ಒಳಉಡುಪುಗಳನ್ನು ಬಳಸಬಾರದು .

*ಮಲ ಮೂತ್ರದ ನಂತರ ಹಾಗು ಋತು ದಿನಗಳಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡಬೇಕು.

*ಕುಡಿಯುವುದು ಸಿಗರೇಟ್ ಸಿಡುವುದು ಬಿಡಬೇಕು.

*ಗರ್ಭನಿರೋಧಕ ಮಾತ್ರೆ ಹಾಗು ಜಂತು ಹುಳುಗಳು ಸಹ ಬಿಳಿ ಮುಟ್ಟಿಗೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top