ಭವಿಷ್ಯ

15 ಜೂನ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ೧೫ ಜೂನ್ ೨೦೧೮
ಸೂರ್ಯೋದಯ : ೦೫:೫೭
ಸೂರ್ಯಾಸ್ತ : ೧೮:೪೨
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ

ಪಕ್ಷ : ಶುಕ್ಲ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಆರಿದ್ರ
ಯೋಗ : ವೃದ್ಧಿ
ಸೂರ್ಯ ರಾಶಿ : ವೃಷಭ

ಅಭಿಜಿತ್ ಮುಹುರ್ತ : ೧೧:೫೪ – ೧೨:೪೫
ರಾಹು ಕಾಲ: ೧೦:೪೪ – ೧೨:೨೦
ಗುಳಿಕ ಕಾಲ: ೦೭:೩೩ – ೦೯:೦೮
ಯಮಗಂಡ: ೧೫:೩೧ – ೧೭:೦೭

 

ಮಹತ್ವಾಕಾಂಕ್ಷೆಯ ಸಿದ್ಧಿಗಾಗಿ ಈದಿನ ತುಂಬ ಶ್ರಮ ಪಡಬೇಕಾಗುವುದು. ಗುರಿ ತಲುಪಲು ಹೊಸ ಅವಕಾಶ ಒದಗಿ ಬರುವುದು. ನೆಚ್ಚಿನ ಸ್ನೇಹಿತರು ಇಂದು ನಿಮಗೆ ಸಹಾಯಕರಾಗಿ ಸೇವೆ ಸಲ್ಲಿಸುವರು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

 

ನೀವು ಹಮ್ಮಿಕೊಂಡ ಕಾರ್ಯದಲ್ಲಿ ಗುರುವಿನ ರಕ್ಷೆ ಇದೆ. ಹಾಗಂತ ಎಲ್ಲ ಕಡೆಯಲ್ಲೂ ನೀವು ಗುರುಗಳನ್ನು ಕರೆದುಕೊಂಡು ಹೋಗುವುದಿಲ್ಲ. ನಿಮಗೆ ಅತ್ಯಂತ ಆತ್ಮೀಯರ ಬಳಿ ನಿಮ್ಮ ಕಾರ್ಯ ಯೋಜನೆ ಬಗ್ಗೆ ಮಾತನಾಡಿರಿ. ಇದರಿಂದ ಅನುಕೂಲವಾಗುವುದು.

 

ಬಾಳಸಂಗಾತಿಯೊಡನೆ ಜಗಳ , ಮನಸ್ತಾಪ ಬೇಡ. ನಿಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಆಕೆಗೆ ತಿಳಿಸಿ. ಸದ್ಯದ ಪರಿಸ್ಥಿತಿಯ ನೈಜ ದರ್ಶನ ಮಾಡಿಸಿರಿ. ಆಗ ನಿಮ್ಮಲ್ಲಿನ ತಾತ್ವಿಕ ಭಿನ್ನಾಭಿಪ್ರಾಯಗಳು ಶಮನಗೊಳ್ಳುವುದು.

 

ನಿಮ್ಮ ಯೋಚನಾಲಹರಿ ಸೂಕ್ತವಾದರೂ ಅದನ್ನು ಸರಿಯಾದ ಸಮಯಕ್ಕೆ ಅಭಿವ್ಯಕ್ತಿ ಗೊಳಿಸಲು ಆಗುವುದಿಲ್ಲ. ಆಂಜನೇಯ ಸ್ತೋತ್ರ ಪಠಿಸಿರಿ. ಈದಿನ ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

 

 

ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಹಳೆಯ ಸ್ನೇಹಿತರ ಸಹಕಾರ ದೊರೆಯುವುದು. ಹಳೆ ವಿದ್ಯಾರ್ಥಿಗಳಿಂದ ಸಹಕಾರ ಸಿಗುವುದು. ಗುರುಹಿರಿಯರ ಆಶೀರ್ವಾದದಿಂದ ನಂಬಿಕೊಂಡ ಭಗವಂತನ ಪೂಜೆ ಮಾಡುವುದು ಒಳಿತು.

 

 

ನಿಮ್ಮ ಮನಸ್ಸಿನ ಕಾರ್ಯ ಯೋಜನೆಗಳು ಸಿದ್ಧಿಸುವುದು. ಈದಿನ ನಿಮ್ಮ ಅನಿಸಿಕೆಯಂತೆ ಕೆಲಸ ಕಾರ್ಯಗಳು ನಡೆಯುವುದು. ಮಕ್ಕಳಿಂದ ಬರುವ ವಾರ್ತೆಯು ಇಡೀ ದಿನ ಉಲ್ಲಾಸಿತವನ್ನುಂಟು ಮಾಡುವುದು. ಆರ್ಥಿಕ ಸಮಸ್ಯೆ ಇರುವುದಿಲ್ಲ.

 

 

ಮನಸ್ಸಿಗೆ ಬೇಡದ ವಿಚಾರಗಳು ಈದಿನ ಮನಸ್ಸನ್ನು ಗಲಿಬಿಲಿಗೊಳಿಸುವುದು. ಇದಕ್ಕೆ ಪೂರಕವಾಗಿ ಮನೆಯಲ್ಲಿನ ಮಕ್ಕಳ ತುಂಟಾಟವು ನಿಮ್ಮ ನೆಮ್ಮದಿಯನ್ನು ಹಾಳು ಮಾಡಿ ಕೋಪಗೊಳ್ಳುವಂತೆ ಮಾಡುವುದು. ತಾಳ್ಮೆ ಇರಲಿ.

 

 

ಕೆಲ ಗ್ರಹಗಳ ಅಶುಭ ಸಂಚಾರದಿಂದ ಅನಾರೋಗ್ಯ ಕಾಣಿಸಿಕೊಳ್ಳುವ ಸಾಧ್ಯತೆ. ಆದರೆ ವ್ಯೆದ್ಯಕೀಯ ತಪಾಸಣೆಯಲ್ಲಿ ಅನಾರೋಗ್ಯದ ಮೂಲ ಕಂಡುಹಿಡಿಯುವಲ್ಲಿ ವಿಫಲರಾಗುವರು. ಗುರುವಿನ ಮೊರೆ ಹೋಗಿರಿ.

 

 

ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿರಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ಈದಿನ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.

 

 

ನಿಮ್ಮ ಕೆಲಸ ಕಾರ್ಯಗಳು ಸಾರ್ಥಕವಾಗಿಸಲು ನಿಮ್ಮ ಮಕ್ಕಳು ನಿಮಗೆ ಸಹಕಾರಿಯಾಗಿ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬೆಳ್ಳಗೆ ಇರುವುದೆಲ್ಲ ಹಾಲು ಎಂದು ನಂಬಿ ಮೋಸಹೋಗದಿರಿ.

 

 ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನು ಗೌರವಿಸಿ. ಮುಂದೆ ಉತ್ತಮ ದಿನಗಳಿವೆ.

 

ಆರೋಗ್ಯದ ವಿಷಯದಲ್ಲಿ ಉದಾಸೀನತೆ ಬೇಡ. ಗುರುವಿನ ಬಲ ಇರುವುದರಿಂದ ಅತಿ ಚಿಂತೆ ಬೇಡ, ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ಇಂದು ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿ ಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top