ಸಮಾಚಾರ

ಈ ಬಿಗ್‌ಬಾಸ್‌ ಮಾಜಿ ಸ್ಪರ್ಧಿಯ ಮೇಲೆ ಸನ್ನಿಗೆ ಮೊದಲ ನೋಟದಲ್ಲೇ ಕ್ರಶ್‌ ಆಗಿತ್ತಂತೆ

ನೀಲಿಚಿತ್ರಗಳ ಮೂಲಕವೇ ಸದ್ದು ಮಾಡಿ, ಆ ಮೂಲಕವೇ ಪರಿಚಯವಾಗಿ ನಂತರ ಬಾಲಿವುಡ್ ಚಿತ್ರಗಳಲ್ಲಿನ ನಟನೆಯನ್ನೇ ಪ್ರಧಾನವಾಗಿ ತೆಗೆದುಕೊಂಡ ಮೋಹಕ ನಟಿ ಸನ್ನಿ ಲಿಯೋನ್. ಇವರು ಬಾಲಿವುಡ್ ಪ್ರವೇಶ ಮಾಡುವ ಮುನ್ನ ಹಿಂದಿ ಬಿಗ್‌ಬಾಸ್‌‌ ಸೀಸನ್‌ 5 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ಬಾಲಿವುಡ್‌ಗೆ ಪ್ರವೇಶ ಮಾಡಿದರು.

ಕೆಲವು ವರ್ಷಗಳ ಹಿಂದೆ ಬಿಗ್‌ಬಾಸ್‌‌‌ನ 5 ನೇ ಸೀಸನ್‌‌ನಲ್ಲಿ ಸ್ಪರ್ಧಿಯಾಗಿದ್ದ ಸನ್ನಿ ಲಿಯೋನ್ ಎಲ್ಲರ ಗಮನ ಸೆಳೆದಿದ್ದರು. ಬಿಗ್‌ ಮನೆಯಲ್ಲಿದ್ದ ವೇಳೆ ಎಲ್ಲರ ಗೆಳೆತನ ಸಂಪಾದಿಸಿದ್ದರು. ಇದೇ ವೇಳೆ ಬಿಗ್‌ಬಾಸ್‌ ಸ್ಪರ್ಧಿಯೋರ್ವನ ಮೇಲೆ ಅವರಿಗೆ ಕ್ರಶ್‌ ಕೂಡ ಆಗಿತ್ತು ಎಂಬ ಸುದ್ದಿಗಳು ಕೂಡ ಎದ್ದಿದ್ದವು. ಅದರ ಬಗ್ಗೆ ಮಾಹಿತಿ ಈಗ ಹೊರಬಿದ್ದಿದೆ.

 

 

 

ಬಿಗ್‌ಬಾಸ್‌ ಸ್ಪರ್ಧಿ ವಿಜೆ ಆ್ಯಂಡಿ ಮೇಲೆ ಸನ್ನಿಗೆ ಲವ್ ಆಗಿತ್ತಂತೆ. ಹಾಗಂತಾ ಸನ್ನಿ ಹಾಗೂ ಆ್ಯಂಡಿ ಒಂದೇ ಸೀಸನ್‌ನಲ್ಲಿ ಸ್ಪರ್ಧಿ ಆಗಿರಲಿಲ್ಲ. ಆ್ಯಂಡಿ 7 ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ವೇಳೆ ಸನ್ನಿ ವಿಶೇಷ ಅತಿಥಿಯಾಗಿ ಬಿಗ್‌ ಮನೆಗೆ ಬಂದಿದ್ದರು. ಈ ವೇಳೆ ಆ್ಯಂಡಿ ಮತ್ತುಸನ್ನಿ ಲಿಯೋನ್ ಪರಸ್ಪರ ಪರಿಚಯವಾಗಿದ್ದರು. ಮೊದಲ ಬಾರಿಗೆ ಆ್ಯಂಡಿ ನೋಡಿದ ಸನ್ನಿಗೆ ಲವ್‌ ಅಟ್‌ ಫಸ್ಟ್ ಸೈಟ್‌ ಎಂಬಂತೆ ಕ್ರಶ್‌‌ ಆಗಿತ್ತು ಎಂಬುದನ್ನು ಸನ್ನಿ ಹಾಗು ಆ್ಯಂಡಿ ನಡುವೆ ನಡೆದ ಟ್ವಿಟ್ಟರ್ ಸಂಭಾಷಣೆಯಲ್ಲಿ ತಿಳಿದು ಬಂದಿದೆ. ಇತ್ತೀಚಿಗೆ ಸಿನ್ನಿ ಲಿಯೋನ್ ‘ನಿನ್ನ ನೋಡಿದ ಮೊದಲ ದಿನವೇ ನಿನ್ನ ಮೇಲೆ ಲವ್ ಆಗಿತ್ತು ‘ಎಂದು ಟ್ವೀಟ್‌ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top