ಮನೋರಂಜನೆ

ಪ್ರಿಯಾಂಕಾ ಚೋಪ್ರಾ ಹ್ಯಾಂಡ್‍ಬ್ಯಾಗ್ ಬೆಲೆ ಕೇಳುದ್ರೆ ದಂಗಾಗೋದು ಗ್ಯಾರಂಟಿ.

ದುಂದುವೆಚ್ಚ, ಮೋಜು ಮಸ್ತಿ ಮಾಡುವುದರಲ್ಲಿ ಬಾಲಿವುಡ್ ನಟಿಯರು ಯಾವತ್ತೂ ಹಿಂದೆ ಬಿದ್ದವರಲ್ಲ. ಸಣ್ಣಪುಟ್ಟ ಸರಕುಗಳಿಗೆ ಸ್ಪರ್ಧೆಗೆ ಬಿದ್ದವರಂತೆ ಅತಿಹೆಚ್ಚಿನ ಬೆಲೆ ಕೊಟ್ಟು ತಮ್ಮದಾಗಿಸಿಕೊಳ್ಳೋದನ್ನೇ ಹುಚ್ಚಾಗಿಸಿಕೊಂಡಿರೋ ನಟಿಯರು ಇದೇ ವಿಚಾರವಾಗಿ ಆಗಾಗ್ಗೆ ಸದ್ದು ಮಾಡುತ್ತರೆ. ಈ ಪಟ್ಟಿಯಲ್ಲಿ ತೀರಾ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡು ಅದರಲ್ಲೂ ಬರಖತ್ತಾಗದ ನಟಿಯರೇ ಹೆಚ್ಚು. ಹೀಗಿರುವಾಗ ನಟನೆಯ ಮೂಲಕವೇ ವಿಶ್ವಾಧ್ಯಂತ ಅಭಿಮಾನಿಗಳನ್ನು ಹೊಂದಿರೋ ಪ್ರಿಯಾಂಕಾ ಚೋಪ್ರಾ ಇಂಥ ದುಬಾರಿ ವಸ್ತುವನ್ನು ತನ್ನದಾಗಿಸಿಕೊಂಡರೆ ಸುದ್ದಿಯ ಕೇಂದ್ರವಾಗೋದರಲ್ಲೇನೂ ವಿಶೇಷವಿಲ್ಲ.

 

 

ಪ್ರಿಯಾಂಕಾ ಚೋಪ್ರಾ ತನ್ನ ಕೈಯಲ್ಲಿ ಹಿಡಿಸುಕೊಂಡಿರುವ ಹ್ಯಾಂಡ್‌ಬ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ತಲ್ಲಣ ಎಬ್ಬಿಸಿದೆ. ಇತ್ತೀಚಿನ ದಿನಗಳಲ್ಲಿ ಪಿಗ್ಗಿ ಹಾಲಿವುಡ್ ನಟ, ಗಾಯಕ ನಿಕ್ ಜೋನಾಸ್ ಜೊತೆ ಕೈಕೈ ಊರು ಸುತ್ತಿದ್ದಾಳಲ್ಲ ಆತನ ಜೊತೆ ಅಮೇರಿಕಾದ ನ್ಯೂಜರ್ಸಿಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದಳು. ಈ ಸಮಾರಂಭದಲ್ಲಿ ಪಿಗ್ಗಿಗಿಂತಲೂ ಆಕೆಯ ಕೈನಲ್ಲಿದ್ದ ಹ್ಯಾಂಡ್‍ಬ್ಯಾಗ್ ಎಲ್ಲರ ಕಣ್ಣನ್ನು ತನ್ನತ್ತ ನೆಟ್ಟಿಸಿಕೊಂಡಿದೆ. ಯಾಕೆಂದರೆ ಅದು ಅಂತಿಂತ ಬ್ಯಾಗಲ್ಲ ಅದರ ಬೆಲೆ ಕೇಳುದ್ರೆ ಶ್ರೀಸಾಮಾನ್ಯನ ತಲೆ ತಿರುಗೋದು ಗ್ಯಾರಂಟಿ.

ಅಷ್ಟಕ್ಕೂ ಪ್ರಿಯಾಂಕಾ ಚೋಪ್ರಾ ಅವರ ಕೈಯಲ್ಲಿರುವ ಹ್ಯಾಂಡ್‍ಬ್ಯಾಗ್ ಬೆಲೆ ಬರೋಬ್ಬರಿ 6,820 ಯುಎಸ್ ಡಾಲರ್ ಅಂತೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ 5 ಲಕ್ಷದ ಆಸುಪಾಸಂತೇ.. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದ್ದು “ಆಕೆ ಕೊಟ್ಟಿರೋ ಅಷ್ಟು ದುಡ್ಡಿಗೆ ಟಾಟಾ ಟಿಯಾಗೋ, ರೆನೊ ಕ್ವಿಡ್‍ನಂತಹ ಕಾರುಗಳನ್ನೇ ಖರೀಸಬಹುದು. ಪಿಗ್ಗಿಗೆ ಯಾರೋ ನಾಮಹಾಕಿದ್ದಾರೆ, ನಮ್ಮೂರಲ್ಲಿ ಆ ಬ್ಯಾಗಿಗೆ ಏನಿಲ್ಲ ಅಂದ್ರು ಇನ್ನೂರಿಂದ ಮುನ್ನೂರು ರೂಪಾಯಿ ಅಷ್ಟೇ” ಎಂಬಂತ ಫನ್ನಿ ಟ್ವೀಟ್’ಗಳು ಹರಿದಾಡುತ್ತಿವೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top