ಅರೋಗ್ಯ

ಕಿವಿಹಣ್ಣು ಈ ಕಾಯಿಲೆಗಳನ್ನು ಗುಣಪಡಿಸುವ ಅದ್ಭುತ ಗುಣವನ್ನು ಹೊಂದಿದೆ!

 

 

ನೋಡಲು ಎಷ್ಟು ವಿಚಿತ್ರವಾಗಿದೆಯೋ ಅದೇ ರೀತಿ ರುಚಿಯಲ್ಲೂ ಕೂಡ ವಿಭಿನ್ನವಾಗಿರುವ ಹಣ್ಣು ಕಿವಿಹಣ್ಣು. ಕೋಳಿ ಮೊಟ್ಟೆಯ ಗಾತ್ರವಿರುವ ಕಿವಿ ಹಣ್ಣಿನಲ್ಲಿ ಕಿವಿ ಹಣ್ಣು ಇತರ ಎಲ್ಲಾ ಹಣ್ಣುಗಳಿಗಿಂತ ಅತ್ಯಾಧಿಕ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮವಾಗಿವೆ. ಕೀವಿ ಹಣ್ಣನು ಸೇವಿಸುವುದರಿಂದ ನಾವು ಯಾವೆಲ್ಲಾ ಅರೋಗ್ಯ ಪ್ರಯೋಜನಗಳನ್ನ ಪಡ್ಕೋಬೋದು ಎಂದು ನೋಡೋಣ ಬನ್ನಿ.

1.ಡೆಂಗ್ಯೂ ಜ್ವರಕ್ಕೆ ರಾಮಬಾಣ:


ಡೆಂಘೀ ಜ್ವರದಿಂದ ಬಳಲುತ್ತಿರುವವರು ಪ್ರತಿದಿನ ಕಿವಿಹಣ್ಣನ್ನು ತಿಂದರೆ ದೇಹದಲ್ಲಿ ಬಿಳಿ ರಕ್ತಕಣವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಕೀವಿ ಹಣ್ಣು ಡೆಂಘೀ ಸೋಂಕಿಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ.

2.ಕ್ಯಾನ್ಸರ್ ಅನ್ನು ತಡೆಯುತ್ತದೆ:

ಕ್ಯಾನ್ಸರ್ ಉಂಟುಮಾಡುವ ಅಂಶಗಳನ್ನು ವಿರೋಧಿಸುವ ಸತ್ವವು ಕೀವಿಹಣ್ಣುಗಳಲ್ಲಿ ಇರುತ್ತದೆ ಚರ್ಮ, ಪಿತ್ತಕೋಶ, ಪ್ರೋಸ್ಟಟ್ ಮತ್ತು ಸ್ತನ ಕ್ಯಾನ್ಸರ್ ಗಳು ಬರದ ಹಾಗೆ ತೆಡೆಗಟ್ಟುತ್ತವೆ.

3.ಮಲಬದ್ಧತೆ ಮತ್ತು ಅಜೀರ್ಣತೆಯನ್ನು ನಿವಾರಿಸುತ್ತದೆ:

ಕೀವಿ ಹಣ್ಣಿನಲ್ಲಿ ನಾರಿನ ಅಂಶವು ಜಾಸ್ತಿ ಪ್ರಮಾಣದಲ್ಲಿ ಇರುವುದರಿಂದ ಮಲಬದ್ಧತೆ, ಅಜೀರ್ಣತೆ ಸಮಸ್ಯೆ ನಿವಾರಣೆಯಾಗುವುದು.ಅಲ್ಲದೆ ನಾರಿನಂಶ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ದೇಹದ ತೂಕವನ್ನು ಇಳಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.

4.ಮರೆವಿನ ಸಮಸ್ಯೆಗೆ ಪರಿಹಾರ:

ವಯಸ್ಸಾದ ಮೇಲೆ ಸಹಜವಾಗಿ ಕಾಣಿಸಿಕೊಳ್ಳುವ ಮರೆವಿನ(alzheimer’s) ಕಾಯಿಲೆಗೆ ಕೀವಿ ಹಣ್ಣು ಬಹಳ ಪ್ರಯೋಕಣಕಾರಿಯಾಗಿದೆ. ಇದರಲ್ಲಿರುವ ಜೀವಸತ್ವಗಳು ಮೆದುಳಿನ ನರ ಕೋಶಗಳ ತೊಂದರೆ ನಿವಾರಿಸಿ ವಯಸ್ಸಾದವರಲ್ಲಿ ಅಲ್ಝೈಮರ್ಸ್ ಕಾಯಿಲೆಯನ್ನು ಮತ್ತು ವಯಸ್ಕರ ನಿದ್ರೆಯ ಸಮಸ್ಯೆ, ಅಧಿಕ ರಕ್ತದೊತ್ತಡ, ಸಮಸ್ಯೆಯನ್ನು ನಿವಾರಿಸುತ್ತದೆ.

5.ಶುಗರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ:

ಕೀವಿ ಹಣ್ಣಿನಲ್ಲಿ ರಕ್ತದಲ್ಲಿನ ಶುಗರ್ ಮಟ್ಟವನ್ನು ಕಡಿಮೆ ಮಾಡುವಂತ ಗುಣವಿದೆ. ಸಕ್ಕರೆ ಕಾಯಿಲೆ ರೋಗಿಗಳು ಪ್ರತಿನಿತ್ಯ ಎರಡು ಕೀವಿ ಹಣ್ಣನ್ನು ತಿನ್ನುವುದರಿಂದ ದೇಹದದ ಸಕ್ಕರೆ ಪ್ರಮಾಣವನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಳ್ಳಬಹುದು.

6.ಹೃದಯ ರೋಗಿಗಳಿಗೆ ಸಹಕಾರಿ:

ಕೀವಿ ಹಣ್ಣಿನಲ್ಲಿರುವ ಜೀವಸತ್ವವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವದರ ಮೂಲಕ ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತಪರಿಚಲನೆಯು ಉತ್ತಮವಾಗಿ ನಡೆಯುವುದರಿಂದ ಹೃದಯ ರೋಗಿಗಳನ್ನು ಈ ಹಣ್ಣನ್ನು ಬಳಸಿದರೆ ಒಳಿತು. ಹೃದಯಾಘಾತವಾಗುವುದನ್ನು ಇದು ತಡೆಯುತ್ತದೆ.

7. ಸೌಂದರ್ಯ ವರ್ಧಕ:

ಕಿವಿ ಹಣ್ಣಿನಿಂದ ತಯಾರಾಗುವ ವೈನ್‌ಗೆ ಭಾರೀ ಬೇಡಿಕೆ ಇದೆ. ಸೌಂದರ್ಯ ವರ್ಧಕವಾಗಿಯೂ ಕಿವಿ ಹಣ್ಣು ಬಳಸಲಾಗುತ್ತದೆ. ಕೀವಿ ಹಣ್ಣಿನ ಜ್ಯೂಸ್ ಅನ್ನು ಸೇವಿಸುವುದರಿಂದ ಚರ್ಮ, ಕೂದಲು ಗಳ ಆರೋಗ್ಯವು ಹೆಚ್ಚಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top