ಹೆಚ್ಚಿನ

ಈ 6 ವಸ್ತುವನ್ನು ಮಲಗುವಾಗ ದಿಂಬಿನ ಬಳಿ ಅಥವಾ ಕೆಳಗೆ ಇಟ್ಟ್ಕೊಂಡು ಮಲಗಿದರೆ ಋಣಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿಯ ಜೊತೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ .

ಈ 6 ವಸ್ತುವನ್ನು ಮಲಗುವಾಗ ದಿಂಬಿನ ಬಳಿ ಅಥವಾ ಕೆಳಗೆ ಇಟ್ಟ್ಕೊಂಡು ಮಲಗಿದರೆ ಋಣಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿಯ ಜೊತೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ .

 

 

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುವನ್ನು ಕೆಲವು ಕಡೆ ಇಟ್ಟರೆ , ಋಣಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇದನ್ನು ನಮ್ಮ ಪೂರ್ವಿಕರು ಕೂಡ ಅನುಸರಿಸುತ್ತಿದ್ದರು. ಅದೇ ರೀತಿ ಕೆಲವು ನಿಯಮಗಳನ್ನು ಇಂದು ನಾವು ತಿಳಿದುಕೊಳ್ಳೋಣ. ಮಲಗುವ ಹಾಸಿಗೆಯ ಕೆಳಗೆ ಅಥವಾ ದಿಂಬಿನ ಕೆಳಗೆ ಯಾವ ವಸ್ತುಗಳನ್ನು ಇಟ್ಟುಕೊಂಡು ಮಲಗಿದರೆ ಏನು ಲಾಭ ? ಎಂದು ನೋಡೋಣ ಬನ್ನಿ .

1.ಅರಿಶಿನದ ಕೊಂಬು

ಒಂದು ಅರಿಶಿನದ ಕೊಂಬು (ಗಟ್ಟಿ ಅರಿಶಿಣ )ಇದನ್ನು ಒಂದು ಅರಿಶಿನದ ಬಟ್ಟೆಯಲ್ಲಿ ಸುತ್ತಿ ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಹಣ ಸಂಪತ್ತನ್ನು ಆಕರ್ಷಿಸುತ್ತದೆ.

2.ತಾಮ್ರದ ಬಟ್ಟಲಿನಲ್ಲಿ ನೀರು.
ತಾಮ್ರದ ಬಟ್ಟಲಿನಲ್ಲಿ ನೀರನ್ನು ತುಂಬಿ ನಿಮ್ಮ ಹಾಸಿಗೆಯ ಬಳಿ ಮಲಗುವ ಸಮಯದಲ್ಲಿ ಇಟ್ಟುಕೊಂಡು ಮಲಗಬೇಕು. ಜೊತೆಗೆ ಅದರೊಳಗೆ ರಕ್ತ ಚಂದನದ ತುಂಡು ಅಥವಾ ಕೆಂಪು ಚಂದನದ ತುಂಡನ್ನು, ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಸೂರ್ಯ ದೇವನ ಅನುಗ್ರಹ ನಿಮಗೆ ಲಭಿಸುತ್ತದೆ ಮತ್ತು ಶನಿದೋಷ ಕೂಡ ನಿವಾರಣೆಯಾಗುತ್ತದೆ.

3.ಬೆಳ್ಳಿಯ ಬಟ್ಟಲು.
ಬೆಳ್ಳಿಯ ಬಟ್ಟಲಿನಲ್ಲಿ ನೀರನ್ನು ತುಂಬಿ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು ಅಥವಾ ಬೆಳ್ಳಿಯ ಯಾವುದಾದರೂ ಅಭರಣವನ್ನು ಇಟ್ಟುಕೊಂಡು ಮಲಗಬೇಕು. ಹೀಗೆ ಮಾಡಿದರೆ ನಿಮ್ಮ ಆತ್ಮ ಬಲ ಅಥವಾ ಮನೋಬಲ ಹೆಚ್ಚುತ್ತದೆ .

4.ಕಂಚಿನ ಬಟ್ಟಲು .
ಕಂಚಿನ ಬಟ್ಟಲಿನಲ್ಲಿ ನೀರನ್ನು ತುಂಬಿ ನಿಮ್ಮ ಹಾಸಿಗೆ ಕೆಳಗೆ ಇಟ್ಟುಕೊಂಡರೆ ಜಾತಕದಲ್ಲಿನ ಮಂಗಳ ದೋಷಗಳು ನಿವಾರಣೆಯಾಗುತ್ತವೆ . ಇದರ ಜತೆಯಲ್ಲಿ ಚಿನ್ನ ಅಥವಾ ಬೆಳ್ಳಿಯ ವಸ್ತುವನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ. ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅಥವಾ ಅಧಿಕಾರ ನಿಮಗೆ ದೊರೆಯುತ್ತದೆ.

5. ಲೋಹದ ಮೀನು.
ಲೋಹದ ಮೀನನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಅದೃಷ್ಟವನ್ನು ತಂದುಕೊಡುತ್ತದೆಯಂತೆ.

6.ಕಬ್ಬಿಣದ ಬಟ್ಟಲು .
ಕಬ್ಬಿಣದ ಬಟ್ಟಲಲ್ಲಿ ನೀರನ್ನು ತುಂಬಿ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು. ಜೊತೆಗೆ ನೀಲಿ ಮಣಿಯನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡರೆ ಕೆಟ್ಟ ಶಕ್ತಿ ಅಥವಾ ಋಣಾತ್ಮಕ ಶಕ್ತಿಯನ್ನು ದೂರ ಮಾಡಬಹುದು . ಕಬ್ಬಿಣದ ವಸ್ತುವನ್ನು ಮದುವೆ ಆಗದೇ ಇರುವವರು ಅಥವಾ ಮದುವೆ ಆಗಬೇಕು ಎನ್ನುವವರು ಇಟ್ಟುಕೊಳ್ಳಬಾರದು .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top