ಮನೋರಂಜನೆ

ಶುರುವಾಯ್ತು ಮತ್ತೊಂದು ರಾದ್ದಂತ- ಸಂಜು ಹುಟ್ಟುಹಾಕಿದ ಚಿತ್ರದ ‘ಟಾಯ್ಲೆಟ್’ ವಿವಾದ.

ವೆರೈಟಿ ವೆರೈಟಿ ವಿವಾದಗಳನ್ನು ಹುಟ್ಟುಹಾಕುವುದರಲ್ಲಿ ಬಾಲಿವುಡ್ ಮಂದಿ ನಿಸ್ಸೀಮರು. ಅದೆಂಥದೇ ಭಯಾನಕ ವಿವಾದವಾದರೂ ನೀರು ಕುಡಿದಷ್ಟು ಸಲೀಸಾಗಿ ಹುಟ್ಟುಹಾಕುವ ಇವರು ಖರ್ಚಿಲ್ಲದೇ ತಮ್ಮ ಸಿನಿಮಾ ಪ್ರಚಾರಕ್ಕಾಗಿ ವಿವಾದದ ರೂಟು ಹಿಡಿದ್ದಾರೆಯೇ ಎಂಬ ಡೌಟ್ ಹಲವರಲ್ಲಿ ಮೂಡಿಕೊಂಡಿದೆ. ಮಾಮೂಲಾಗಿ ಒಂದು ಚಿತ್ರದ ಪ್ರಚಾರಕ್ಕೆ ಅದರ ಒಟ್ಟಾರೆ ಬಜೆಟ್ಟಿಗೆ ಸರಿಸಮನಾದ ಕಾಸು ಖರ್ಚು ಮಾಡಬೇಕಾಗುತ್ತೆ. ಆದರೆ ಯಾರನ್ನಾದರೂ ಕೆರಳಿಸುವ ಸನ್ನಿವೇಶವನ್ನು ಸೃಷ್ಟಿಸಿ ಬಿಟ್ಟರೆ ಪ್ರಚಾರವೆಂಬುದು ಹೋದಲ್ಲಿ ಬಂದಲ್ಲಿ ಹಿಂಬಾಲಿಸಿಕೊಂಡು ಬರುತ್ತದೆ. ಇಂಥಾದ್ದೇ ಒಂದು ಫಾರ್ಮುಲಾವನ್ನು ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ‘ಸಂಜು’ ಚಿತ್ರವೂ ಕೂಡ ಅನುಸರಿಸಲು ಮುಂದಾಗಿದೆಯಾ ಎಂಬ ಅನುಮಾನ ಪ್ರೇಕ್ಷಕರ ವಲಯದಲ್ಲಿ ದಟ್ಟವಾಗಿದೆ.

 

 

ಸಂಜಯ್ ದತ್ ಜೀವನವನ್ನು ಆಧರಿಸಿದ ‘ಸಂಜು’ ಚಿತ್ರ ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರವಾಗಿ ಪರಿಗಣಿಸಲ್ಪಟ್ಟಿದೆ. ರಂಗು ರಂಗಾದ ವ್ಯಕ್ತಿತ್ವ ಹೊಂದಿರುವ ಸಂಜಯ್ ದತ್ ಜೀವನವನ್ನು ಸಿನಿಮಾ ಚೌಕಟ್ಟಿಗೆ ಹೇಗೆ ಒಗ್ಗಿಸಲಾಗಿದೆ ಎಂಬ ಕ್ಯೂರಿಯಾಸಿಟಿ ಸಿನಿಮಾ ಪ್ರೇಮಿಗಳಲ್ಲಿ ಇದ್ದೇ ಇದೆ.ಅದಕ್ಕೆಲ್ಲ ತಕ್ಕಮಟ್ಟಿಗೆ ಉತ್ತರಿಸುವಂಥಾ ಟೀಸರ್ ಒಂದನ್ನು ಸಂಜು ಚಿತ್ರತಂಡ ಬಿಡುಗಡೆ ಮಾಡಿದೆ. ಇದನ್ನು ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಈ ಟೀಸರ್ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಇದೆ ಟೀಸರ್ ಕಂಡ ಒಂದು ದೃಶ್ಯದ ದೆಸೆಯಿಂದ ವಿವಾದವೂ ಹುಟ್ಟುಕೊಂಡಿದೆ.

 

 

ನಾಯಕ ರಣಬೀರ್ ಕಪೂರ್ ಜೈಲಿನಲ್ಲಿ ಇರುವಾಗ ಟಾಯ್ಲೆಟ್ ನಲ್ಲಿ ಲೀಕೇಜ್ ಆಗುವ ಒಂದು ದೃಶ್ಯ ಚಿತ್ರದ ಟ್ರೈಲರ್ ನಲ್ಲಿದೆ. ಈ ದೃಶ್ಯವೇ ಈಗ ವಿವಾದದ ಕೇಂದ್ರ ಬಿಂದುವಾಗಿರುವುದು. ಈ ಸಂಭಂದ ‘ಪೃಥ್ವಿ ಮಾಸ್ಕೆ’ ಎಂಬುವರು ಸೆನ್ಸಾರ್ ಮಂಡಳಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. “ಜೈಲಿನಲ್ಲಿರುವ ಪ್ರತಿಯೊಂದು ಕೋಣೆಯನ್ನು ಸರ್ಕಾರ ಹಾಗೂ ಜೈಲಿನ ಅಧಿಕಾರಿಗಳು ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಾರೆ. ಕೋಣೆಯೊಳಕ್ಕೆ ಟಾಯ್ಲೆಟ್ ಲೀಕ್ ಆಗಿ ಹರಿಯುವ ಘಟನೆಯನ್ನ ನಾವು ಎಲ್ಲಿಯೂ ಕೇಳಿಲ್ಲ. ಆದರೆ ಸಂಜಯ್ ದತ್ ಜೈಲ್ಲಿರುವ ಟಾಯ್ಲೆಟ್ ತುಂಬಿ ಹರಿಯುತ್ತಿರುವುದನ್ನು ಸಂಜು ಚಿತ್ರದ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಖೈದಿಯೊಬ್ಬರ ಕೊನೆಗೆ ಟಾಯ್ಲೆಟ್ ಲೀಕ್ ಆಗಿ ಹರಿದುಬರುವಂತೆ ತೋರಿಸಿರುವುದು ಜೈಲಿನ ಅಧಿಕಾರಗಳ ಬಗ್ಗೆ ತಪ್ಪು ಸಂದೇಶ ರವಾನೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಕೋರ್ಟ್ ಮೆಟ್ಟಲೇರಿ ಚಿತ್ರಕ್ಕೆ ತಡೆ ಕೋರುತ್ತೇನೆ” ಎಂದು ಮಾಸ್ಕೆ ಸೆನ್ಸಾರ್ ಬೋರ್ಡ್ ಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಂಜು ಚಿತ್ರದ ಈ ಟಾಯ್ಲೆಟ್ ವಿವಾದ ಬೇಗನೇ ಬಗೆಹರಿದು ಸುಖಾಂತ್ಯ ಕಾಣುತ್ತದೆಯೋ ಇಲ್ಲ ಪದ್ಮಾವತಿ ಶೈಲಿಯಲ್ಲಿಯೇ ಮತ್ತೊಂದಷ್ಟು ರಾಡಿ ಎಬ್ಬಿಸಲು ಅನುವು ಮಾಡಿಕೊಡುತ್ತದಾ ಎಂಬುದನ್ನು ಕಾದು ನೋಡ ಬೇಕಿದೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top