ಮನೋರಂಜನೆ

ಭೀಕರ ಕಾರು ಅಪಘಾತದಲ್ಲಿ ನಟಿ ನರಳಾಡುತ್ತಿದ್ದರೂ ಸಹಾಯಕ್ಕೆ ಬಾರದ ಜನ.

ಮಲೆಯಾಳಂ ಚ್ಚಿತ್ರರಂಗದ ಖ್ಯಾತ ನಟಿ ಮೇಘಾ ಮ್ಯಾಥ್ಯೂ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ನೋವಿನಲ್ಲಿ ನಟಿ ನರಳಾಡಿರೋ ಘಟನೆ ಕೇರಳದಲ್ಲಿ ನಡೆದಿದೆ.ಕೊಚ್ಚಿಯಿಂದ ಪ್ರಯಾಣಿಸುತ್ತಿದ್ದ ನಟಿಯ ಕಾರು ಎರ್ನಾಕುಲಂ ಬಳಿ ಸಂಭವಿಸಿರುವ ಅಪಘಾತದಲ್ಲಿ ಕೂದಲೆಳೆಯ ಅಂತದದಿಂದ ಪಾರಾಗಿದ್ದಾಳೆ. ಅಪಘಾತದ ತೀವ್ರತೆಯನ್ನ ಗಮನಿಸಿದರೆ ಪ್ರಾಣಕ್ಕೇ ಕುತ್ತುಂಟಾಗ ಬಹುದಾಗಿದ್ದ ಕಂಟಕದಿಂದ ಮೇಘ ಬಚಾವ್ ಆಗಿದ್ದಾಳೆ.

 

 

ಮೇಘ ಪ್ರಯಾಣ ಮಾಡುತ್ತಿದ್ದ ಕಾರು ಅತಿ ವೇಗವಾಗಿ ನುಗ್ಗುತ್ತಿತ್ತು ಅದಕ್ಕಿಂತಲೂ ವೇಗವಾಗಿ ಬರುತ್ತಿದ್ದ ಮತ್ತೊಂದು ಕಾರು ವಿರುದ್ಧ ದಿಕ್ಕಿನಿಂದ ಅಡ್ಡಾ ದಿಡ್ಡಿ ಬಂದು ಮೇಘನಾಳ ಕಾರಿಗೆ ಡಿಕ್ಕಿ ಹೊಡೆದಿತ್ತು. ಆ ರಭಸಕ್ಕೆ ಎರಡೂ ಕಾರುಗಳು ನಜ್ಜುಗುಜ್ಜಾಗಿದ್ದವು. ಅದೃಷ್ಟವಷಾತ್ ಪ್ರಾಣಾಪಾಯದಿಂದ ಮೇಘ ಪಾರಾಗಿದ್ದು ಆಕೆಯ ಕಾರಿನಲ್ಲಿ ಅಳವಡಿಸಲಾಗಿದ್ದ ಏರ್‌ ಕಾರ್ ಸೆಫ್ಟಿಯ ದೆಸೆಯಿಂದ ಆಕೆ ಬದುಕುಳಿದಿದ್ದಾಳೆ.

ಆಶ್ಚರ್ಯ ಎಂದರೆ ಅಪಘಾತ ಜರುಗಿದ ಹತ್ತದಿನೈದು ನಿಮಿಷ ಪ್ರಜ್ಞೆ ತಪ್ಪಿ ಕಾರಿನಲ್ಲೇ ಇದ್ದಿದ್ದ ನಟಿಯನ್ನು ಕಂಡ ಜನರು ಆಕೆ ಸತ್ತು ಹೋಗಿದ್ದಾಳೆ ಎಂದು ಭಾವಿಸಿದ್ದಾರೆ. ಆದ್ರೆ ನಂತರ ಆಕೆ ಪ್ರಜ್ಞೆ ಬಂದ ನಂತರ ತೀವ್ರ ನೋವಿನಿಂದ ಬಳಲುತ್ತಿದ್ದರೂ ಆಕೆಯನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಯಾರು ಮುಂದಾಗದೇ ಅಮಾನವೀಯತೆಯನ್ನು ಎತ್ತಿ ತೋರಿಸಿದ್ದಾರೆ.. ಬಳಿಕ ಅಲ್ಲೇ ಇದ್ದ ಫೋಟೋಗ್ರಾಫರ್​ ಒಬ್ಬರು ನಟಿಯನ್ನ ಆಸ್ಪತ್ರೆಗೆ ಸಾಗಿಸಿಮಾನವೀಯತೆ ಮೆರೆದಿದ್ದಾರೆ. ನಟನೆಯ ಕಾರಣದಿಂದಲೇ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿರುವಾಕೆ ಮೇಘಾ ಮ್ಯಾಥ್ಯೂ . ಇದೀಗ ಆಕೆ ಭೀಕರ ಅಪಘಾತದಿಂದ ಪಾರಾಗಿದ್ದರಿಂದ ಅಭಿಮಾನಿಗಳೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top