ಸಮಾಚಾರ

ಕೇಂದ್ರ ಸಚಿವೆಯನ್ನೇ ಚುಡಾಯಿಸಿದ ಕಿಡಿಗೇಡಿಗಳು

ಇತ್ತೀಚಿಗೆ ಕೇಂದ್ರ ಸಚಿವೆಯಾಗಿರುವ ಅನುಪ್ರಿಯಾ ಪಟೇಲ್ ರವರನ್ನು ಪುಂಡರು ಚುಡಾಯಿಸಿದ ಘಟನೆ ಉತ್ತರ ಪ್ರದೇಶ ರಾಜ್ಯದ ಅರೋಯ್ ಮತ್ತು ಮಿರ್ಜಾಮುರದ್ ನಡುವೆ ನಡೆದಿದೆ ಎಂದು ತಿಳಿದು ಬಂದಿದೆ.

 

 

ಸೋಮವಾರ ರಾತ್ರಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾಗಿರುವ ಅನುಪ್ರಿಯಾ ಪಟೇಲ್‍ ಅವರು ಕಾಶಿಯಲ್ಲಿ ಸಮಾರಂಭ ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದರು. ಈ ಸಂಧರ್ಭದಲ್ಲಿ ಅರೋಯ್ ಮತ್ತು ಮಿರ್ಜಾಮುರದ್ ನಡುವೆ ಪ್ರಯಾಣಿಸುತ್ತಿದ್ದಾಗ, ನೋಂದಣಿ ಇಲ್ಲದ ಕಾರಿನಲ್ಲಿ ಬಂದ ಮೂವರು ಯುವಕರು ಓವರ್ ಟೇಕ್ ಮಾಡುವ ವೇಳೆ ಸಚಿವೆಗೆ ಅಸಭ್ಯವಾಗಿ ಬೈದಿದ್ದಾರೆ. ಅಲ್ಲದೇ ಭದ್ರತಾ ಸಿಬ್ಬಂದಿಯವರ ಜೊತೆಗೂ ಅಸಭ್ಯ ರೀತಿಯಿಂದ ವರ್ತಿಸಿ ಸ್ಥಳದಿಂದ ಪರಾರಿ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಬಳಿಕ ಸಚಿವೆ ಅನುಪ್ರಿಯಾ ಪಟೇಲ್ ಅವರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ಮಡಿದ ಪೊಲೀಸರು ನೋಂದಣಿ ಇಲ್ಲದ ಕಾರನಲ್ಲಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಕೇಂದ್ರದ ಸಚಿವರಿಗೆ ಚುಡಾಯಿಸುತ್ತಿರುವುದು ಇದೇ ಮೊದಲೆನಲ್ಲ. ಈ ವರ್ಷ ಏಪ್ರಿಲ್‍ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೂ ಕೂಡ ಇಂತಹುದೆ ಅನುಭವವಾಗಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ಮನೆಗೆ ಬರುವಾಗ ಕಾರಿನಲ್ಲಿದ್ದ ಯುವತಿ ಮತ್ತು ಮೂವರು ಯುವಕರು ರೇಗಿಸಿದ್ದರು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top