ಅರೋಗ್ಯ

ಚಿನ್ನ ಹಾಕೊಳ್ಳೋದ್ರಿಂದ ಎಷ್ಟು ಲಾಭಗಳಿವೆ ಅಂತ ತಿಳ್ಕೊಂಡ್ರೆ ನೀವು ಮೈಮೇಲೆ ಚಿನ್ನ ಹೇರಿಸಿಕೊಳ್ತೀರಾ

ಚಿನ್ನ ಧರಿಸುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಏನೇನು ? ಎಂದು ನಿಮಗೆ ಗೊತ್ತಾ ?

ಬಂಗಾರ ಧರಿಸುವುದು ಶುಭ ಎಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಬಂಗಾರದ ಆಭರಣಗಳನ್ನು ಧರಿಸುವುದು ಒಂದು ರೀತಿಯ ಫ್ಯಾಶನ್ ಆಗಿಬಿಟ್ಟಿದೆ .ಪ್ರತಿ ಮಹಿಳೆಯೂ ಸಹ ಬಂಗಾರದ ಮೇಲೆ ಪ್ರೀತಿಯನ್ನು ಹೊಂದಿರುತ್ತಾಳೆ .ಚಿನ್ನ ಮಂಗಳಕರವಾದುದು. ಫ್ಯಾಷನ್ ಒಂದೇ ಅಲ್ಲ ಆರೋಗ್ಯಕ್ಕೂ ಕೂಡಾ ಬಹಳ ಒಳ್ಳೆಯದು .

 

 

ಪ್ರಾಚೀನ ಕಾಲದಿಂದಲೂ ಕೂಡ ಕೆಲವು ರೋಗಗಳನ್ನು ಗುಣಪಡಿಸಲು ಚಿನ್ನವನ್ನು ಬಳಸುತ್ತಾ ಬರಲಾಗಿದೆ. ಮಾನಸಿಕ ಖಿನ್ನತೆ, ಸಂಧಿವಾತ ಇಂತಹ ಕಾಯಿಲೆಗಳನ್ನು ಚಿನ್ನ ಕಡಿಮೆ ಮಾಡುತ್ತದೆ.

ಅಂದರೆ ನೀವು ನಂಬಲೇಬೇಕು ಇಪ್ಪತ್ನಾಲಕ್ಕು ಕ್ಯಾರೆಟ್ ಶುದ್ಧ ಚಿನ್ನವನ್ನು ಗಾಯ ಅಥವಾ ಸೋಂಕಿನ ಮೇಲೆ ಇಟ್ಟರೆ, ಗಾಯ ಬಹು ಬೇಗನೆ ಗುಣವಾಗುತ್ತದೆ. ಚಿನ್ನ ಬೆಚ್ಚಗಿನ ಅನುಭವವನ್ನು ನೀಡುತ್ತದೆ ಎಂದು ಪ್ರಾಚೀನ ಕಾಲದ ಜನರು ನಂಬುತ್ತಿದ್ದರು.

ಮಾನಸಿಕ ಹಾಗೂ ಭಾವನಾತ್ಮಕ ಶಾಂತಿಯನ್ನು ಚಿನ್ನ ಮನಸ್ಸಿಗೆ ನೀಡುತ್ತದೆ. ಚಿನ್ನವನ್ನು ನಾವು ಸದಾ ಕಾಲ ಧರಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ನೈಸರ್ಗಿಕ ಖನಿಜಗಳು ಇದರಲ್ಲಿ ಇರುವುದರಿಂದ ಇದು ದೇಹದ ಮೇಲೆ ಯಾವುದೇ ದುಷ್ಪರಿಣಾಮಗಳನ್ನು ಬೀರುವುದಿಲ್ಲ. ದೇಹಕ್ಕೆ ಹಾನಿಕಾರಕವೂ ಅಲ್ಲ. ಚಿನ್ನದ ಜೊತೆ ಬೇರೆ ಲೋಹಗಳನ್ನು ಮಿಶ್ರಣ ಮಾಡಿದರೆ ಚಿನ್ನದ ಪ್ರಭಾವ ಕಡಿಮೆಯಾಗುತ್ತದೆ. ಹಾಗಾಗಿ ಚಿನ್ನದ ಜೊತೆ ಯಾವುದೇ ಬೇರೆ ಲೋಹದ ವಸ್ತುಗಳನ್ನು ಇಡಬಾರದು .

 

 

ಚಿನ್ನ ಧರಿಸುವುದರಿಂದ ರಕ್ತ ಪರಿಚಲನೆ ಸುಲಭವಾಗುತ್ತದೆ. ರೋಗಗಳನ್ನು ತಡೆಯಲು ಇದು ನೆರವಾಗುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ವಾತಾವರಣ ಬದಲಾದಂತೆ ನಮ್ಮ ದೇಹದಲ್ಲಿ ಆಗುವ ಬದಲಾವಣೆ ಹಾಗೂ ಕಾಯಿಲೆಗಳನ್ನು ಚಿನ್ನ ನಿಯಂತ್ರಣದಲ್ಲಿ ಇಡುತ್ತದೆ. ಮಾನಸಿಕ ಒತ್ತಡ, ಮಾನಸಿಕ ಖಿನ್ನತೆ ಜೊತೆಗೆ ಸಂಧಿವಾತ ಇಂತಹ ರೋಗ ಲಕ್ಷಣಗಳನ್ನು ಇದು ಕಡಿಮೆ ಮಾಡುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top