ಮನೋರಂಜನೆ

ಸನ್ನಿಲಿಯೋನ್’ಗೂ ಇದೆಯಂತೆ ಒಂದು ಕೆಟ್ಟ ಹವ್ಯಾಸ- ಅದು ಏನು ಗೊತ್ತಾ?

ನೀಲಿಚಿತ್ರಗಳ ತಾರೆಯೆಂಬ ಹಣೆಪಟ್ಟಿಯಿಂದ ಕಳಚಿಕೊಳ್ಳುವ ಸಲುವಾಗಿ ನಾಯಕ ನಟಿಯಾಗಿ ರೂಪುಗೊಂಡಿರುವಾಕೆ ಸನ್ನಿ ಲಿಯೋನೀ. ಬಾಲಿವುಡ್‌ನ ಇತರೇ ನಟಿಯರೆಲ್ಲ ಸೇರಿಕೊಂಡು ಈಕೆಯನ್ನು ನೀಲಿ ಚಿತ್ರಗಳಿಗೇ ಬ್ರ್ಯಾಂಡ್ ಮಾಡಿ ಮೂಲೆಗೆ ನೂಕುವ ಪ್ರಯತ್ನ ಮಾಡಿದಷ್ಟೂ ಪುಟಿದೆದ್ದು ನಿಲ್ಲುತ್ತಾ ಬಂದಿರುವ ಸನ್ನಿಯ ಚಿತ್ರಗಳು ಪಡೆಯೋ ಭಾರೀ ಪ್ರಚಾರ ಕಂಡು ಬಾಲಿವುಡ್ ನಟಿಯರನೇಕರು ಕರುಬುತ್ತಾ ನೆಟಿಕೆ ಮುರಿಯಲಾರಂಭಿಸಿದ್ದಾರೆ. ಅಂಥಾ ಕೆಲ ಖಾಲಿ ಕೂತ ಹೊಟ್ಟೆಕಿಚ್ಚಿನ ನಟಿಯರು ಸನ್ನಿ ವಿರುದ್ಧ ಹೇಳಿಕೆ ನೀಡೋ ಮೂಲಕ ತಮ್ಮ ಅಸಹನೆ ಹೊರ ಹಾಕಿದಷ್ಟೂ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಲಾರಂಭಿಸಿದೆ.

 

 

ಇಂಥ ಸನ್ನಿ ಲಿಯೋನ್ ಕುರಿತಾದ ಮತ್ತೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದು ಆಕೆಯ ಅವ್ಯಾಸಕ್ಕೆ ಸಂಭಂದಿಸಿದ ವಿಷಯವಾಗಿದೆ. ಅಂದಹಾಗೆ ಇದು ಅಂತಹ ಘನಂದಾರಿ ಕೆಟ್ಟ ಹವ್ಯಾಸವೇನಲ್ಲ, ಪ್ರತಿ 15 ರಿಂದ 20 ನಿಮಿಷಕ್ಕೊಮ್ಮೆ ಕಾಲು ತೊಳೆದುಕೊಳ್ಳುವಂತ ಚಟವನ್ನು ಮೊದಲಿನಿಂದಲೂ ಸನ್ನಿ ಲಿಯೋನ್ ಮೈಗೂಡಿಸಿಕೊಂಡು ಬಂದಿದ್ದಾಳೆ. ಸನ್ನಿಯ ಈ ಹವ್ಯಾಸದಿಂದ ಶೂಟಿಂಗ್ ಸೆಟ್ಟಿನಲ್ಲಿರುವ ನಿರ್ದೇಶಕರೊಳಗೊಂಡಂತೆ ಅನೇಕರಿಗೆ ಕಿರಿಕಿರಿ ಅನುಭವವುಂಟಾಗುತ್ತಿದೆಯಂತೆ.

 

 

“ಜಿಸ್ಮ್ 2 ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಸನ್ನಿಲಿಯೋನ್ ಮೊದಲಬಾರಿಗೆ ಚಿತ್ರದ ಶೂಟಿಂಗ್ ನಲ್ಲಿ ಬಾಗಿಯಾಗಿದ್ದಾಗ ಅಂದು ಅವರ ಈ ಹವ್ಯಾಸ ಕಂಡು ಸೆಟ್ ನಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರಂತೆ. ಚಿತ್ರೀಕರಣ ನಡೆಯುತ್ತಿದ್ದಾಗ ಬ್ರೇಕ್ ತೆಗೆದುಕೊಂಡು ಹೋಗಿ ಕಾಲು ಕೈ ತೊಳೆದುಕೊಂಡು ಬರುತ್ತಿದ್ದಳಂತೆ. ಆರಂಭದಲ್ಲಿ ಚಿತ್ರತಂಡಕ್ಕೆ ಆಕೆಯ ಈ ಹವ್ಯಾಸ ವಿಚಿತ್ರವಾಗಿ ಕಂಡಿದ್ದರೂ ಕಾಲಕ್ರಮೇಣ ಇದು ಅಭ್ಯಾಸವಾಗಿ ಹೋಗಿದೆ” ಎಂದು ಪೂಜಾ ಭಟ್ ಅವರು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top