ಸಮಾಚಾರ

ಅಂದು ಈ ಕಾರಣಕ್ಕೆ ವಿಜಯಲಕ್ಷ್ಮಿ ಹಾಗು ಸೃಜನ್ ಮದುವೆ ಮುರಿದು ಬಿತ್ತು

ಸುವರ್ಣ ನ್ಯೂಸ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ತಮ್ಮ ನೋವನ್ನು ತಮ್ಮ ವೃತ್ತಿ ಜೀವನ ಹಾಗೂ ಖಾಸಗಿ ಜೀವನದ ಅನೇಕ ತೊಂದರೆಗಳನ್ನು ಪರಿಪರಿಯಾಗಿ ಹೇಳಿಕೊಂಡಿದ್ದಾರೆ. ನಟ ಸೃಜನ್ ಲೋಕೇಶ್ ಅವರು ಈಗ ಗ್ರೀಷ್ಮಾ ಅವರನ್ನು ಮದುವೆ ಆಗಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದಿನ ಕಥೆ ಮೆಲಕು ಹಾಕಿದಾಗ ಗೊತ್ತಾಗುತ್ತೆ ವಿಜಯಲಕ್ಷ್ಮಿ ಅವರನ್ನು ಸೃಜನ್ ಲೋಕೇಶ್ ಮದುವೆ ಆಗಬೇಕಿತ್ತು.

 

 

ನಟ ಸುಜನ್ ಲೋಕೇಶ್ ಹಾಗು ವಿಜಯಲಕ್ಷ್ಮಿ ಇಬ್ಬರು ಮೂರೂ ವರ್ಷ ಪ್ರೀತಿ ಮಾಡಿದ್ದರು ಇಬ್ಬರಿಗೂ ನಿಶ್ಚಿತಾರ್ಥ ಕೂಡ ಆಗಿತ್ತು. ಆದರೆ ಇಬ್ಬರಿಗೂ ಮದುವೆ ಆಗುವ ಯೋಗ ಇರಲಿಲ್ಲ. ಇಬ್ಬರಲ್ಲೂ ಬಿರುಕು ಬಂದು ಮದುವೆ ಮುರಿದು ಬಿತ್ತು. ಇದಕ್ಕೆ ಈಗ ಕಾರಣವೇನು?

ಅಷ್ಟು ದಿನ ಗೌರವದಿಂದ ವಿಜಯಲಕ್ಷ್ಮಿ ಹಾಗೂ ವಿಜಿ ಎಂದು ಕರೆಯುತ್ತಿದ್ದ ಅನೇಕರು ಆಕೆಯನ್ನು ಚಪ್ಪಲಿ ವಿಜಯಲಕ್ಷ್ಮಿ ಎಂದು ಕರೆಯಲು ಶುರು ಮಾಡಿದರು ,ವಿಜಯಲಕ್ಷ್ಮಿ ಖ್ಯಾತ ನಟರೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆದು ಅವಮಾನ ಮಾಡಿದ್ದಾರೆ ಎಂದು ಆ ಕಾಲದ ಪತ್ರಿಕೆಗಳು ಹೆಡ್ ಲೈನ್ ಮಾಡಿ ನ್ಯೂಸ್ ಅನ್ನು ಹರಿಯಬಿಟ್ಟಿದ್ದು ಈ ವಾರ್ತೆಯನ್ನು ಕೇಳಿದ ವಿಜಯಲಕ್ಷ್ಮಿ ಕಂಗಾಲಾಗಿ ಹೋಗಿದ್ದರು ಅದೊಂದು ಸುಳ್ಳು ಸುದ್ದಿಯಾಗಿತ್ತು ಆದರೆ ಈ ವಿವಾದ ಚಿತ್ರರಂಗದ ತುಂಬೆಲ್ಲ ತುಂಬಿ ವಿಜಯಲಕ್ಷ್ಮಿ ಅವರ ಹೆಸರನ್ನು ಹಾಳು ಮಾಡಿತ್ತು .

ವಿವಾದಗಳು ಆದಾಗ, ನಾನು ಅವತ್ತೇ ಮಾತನಾಡಿ ಎಲ್ಲದಕ್ಕೂ ಸ್ಪಷ್ಟನೆ ನೀಡಬೇಕಿತ್ತು. ಆದರೆ, ನಾನು ಸುಮ್ಮನೆ ಇದ್ದು ಬಿಟ್ಟೆ. ಅದು ನನ್ನ ವೈಯುಕ್ತಿಕ ಜೀವನದ ಮೇಲೆಯೂ ಪರಿಣಾಮ ಬೀರಿತು ಎಂದು ನಟಿ ವಿಜಯಲಕ್ಷ್ಮಿ ಅಳಲು ತೊಂಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top