ಸಮಾಚಾರ

ಸಿದ್ದರಾಮಯ್ಯನವರಿಗೆ ಇನ್ನೊಂದು ಮದುವೆ ಮಾಡಿಸ್ತಾರಂತೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧ್ನಸಭಾ ಕ್ಷೇತ್ರದ ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ. ಚಿಮ್ಮನ್ನಕಟ್ಟಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇನ್ನೊಂದು ಮದುವೆಗೆ ಪ್ರಸ್ತಾವನೆ ಇಟ್ಟ ಪ್ರಸಂಗ ಬಾದಾಮಿಯಲ್ಲಿ ನಡೆದಿದೆ. ವಿಚಾರವನ್ನು ಚಿಮ್ಮನಕಟ್ಟಿಅವರು ಸಿದ್ದರಾಮಯ್ಯ ಎದುರೇ ಹೇಳಿದ್ದಾರೆ. ಆದರೆ, ಚಿಮ್ಮನಕಟ್ಟಿಈ ರೀತಿ ಹೇಳಿದ್ದು ತಮಾಷೆಗಾಗಿ ಅಷ್ಟೆ. ಸಿದ್ದರಾಮಯ್ಯನವರಿಗೆ ಇನ್ನೊಂದು ವಿವಾಹ ಮಾಡಿಸಬೇಕೆಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

 

 

ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಗೆದ್ದ ಬಳಿಕ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿ, ಸಿದ್ದರಾಮಯ್ಯ ಅವರಿಗೆ 71 ವರ್ಷ ಆಗಿಲ್ಲ. ಈಗಿನ್ನೂ ಅವರಿಗೆ 21 ವರ್ಷ ಆಗಿದೆ. ಪಕ್ಷಕ್ಕಾಗಿ ಈಗಲೂ ಚಿರ ಯುವಕನಂತೆ ಕೆಲಸ ಮಾಡ್ತಾರೆ. ಹಾಗಾಗಿ ಇನ್ನೊಂದು ಮದುವೆ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರವರನ್ನು ಸೋಲಿಸಿದರು. ಬಾದಾಮಿಯಲ್ಲೂ ಸೋಲಿಸುವ ವಿಫಲ ಪ್ರಯತ್ನ ಮಾಡಿದರೂ ನಮ್ಮ ಪ್ರಯತ್ನದ ಮುಂದೆ ಅವರ ಆಟ ನಡೆಯಲಿಲ್ಲ. ಹಗಲಿರುಳು ಶ್ರಮಿಸಿ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿದ ಹೆಮ್ಮೆ ಕ್ಷೇತ್ರದ ಜನತೆಗೆ ಸಲ್ಲುತ್ತದೆ. ನನಗಿಂತ ರಾಜಕೀಯದಲ್ಲಿ ತಡವಾಗಿ ಆಗಮಿಸಿದರೂ ಅವರಿಗೆ ರಾಜ್ಯದ ಸಿಎಂ ಆಗುವ ಯೋಗ ಕೂಡಿ ಬಂತು ಎಂದು ಇದೇ ವೇಳೆ ಚಿಮ್ಮನಕಟ್ಟಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top