ಮನೋರಂಜನೆ

ಅಂತೂ ತೆಲುಗು ಚಿತ್ರರಂಗಕ್ಕೆ ಅಧಿಕೃತವಾಗಿ ಕಾಲಿಟ್ಟ ಪುನೀತ್ ರಾಜಕುಮಾರ್.

ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಯಶಸ್ವೀ ನಾಯಕ ಎನಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಹೊರತು ಪಡಿಸಿ ಬೇರೆ ಯಾವ ಭಾಷೆಯ ಚಿತ್ರಗಳಲ್ಲೂ ಅಭಿನಯಿಸಿಲ್ಲ. ಹಾಗಿದ್ದರೂ ಅವರ ಕೆಲವೊಂದು ಚಿತ್ರಗಳು ಹಲವಾರು ಭಾಷೆಗಳಿಗೆ ಡಬ್ ಆಗಿ ಅಲ್ಲಿಯೂ ಒಳ್ಳೆಯ ಹೆಸರು ತಂದುಕೊಟ್ಟಿವೆ. ಕನ್ನಡ ಬಾರದ ಎಷ್ಟೋ ಮಂದಿ ಅಪ್ಪು ಅಭಿನಯಕ್ಕೆ ಡ್ಯಾನ್ಸಿನ ಖದರ್’ಗೆ ಫ್ಯಾನ್ ಆಗಿದ್ದಾರೆ. ಇಂತಪ್ಪ ಪುನೀತ್ ರಾಜಕುಮಾರ್ ಇದೀಗ ಅಧಿಕೃತವಾಗಿ ಟಾಲಿವುಡ್ ಮಾರ್ಕೆಟ್ ಪ್ರವೇಶಿಸುತ್ತಿದ್ದಾರೆ.

 

 

ಹಾಗಂತ ಪುನೀತ್ ಯಾವುದೊ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಭಾವಿಸಬೇಡಿ ಯಾಕೆಂದರೆ ಅಪ್ಪು ಟಾಲಿವುಡ್ ಪ್ರವೇಶಿಸುತ್ತಿರುವುದು ನಟನಾಗಿಯೂ ಅಲ್ಲ, ಗಾಯಕನಾಗಿಯೂ ಅಲ್ಲ ಬದಲಾಗಿ ಆಡಿಯೋ ಕಂಪನಿಯ ಮಾಲೀಕನಾಗಿ. ಕಳೆದ ವರ್ಷ ಪುನೀತ್ ಸ್ಟಾರ್ಟ್ ಮಾಡಿದ್ದ ಪಿಆರ್’ಕೆ ಆಡಿಯೋ ಸಂಸ್ಥೆಯಿಂದ ಇಲ್ಲಿಯರೆಗೂ ಸಾಕಷ್ಟು ಕನ್ನಡ ಚಿತ್ರಗಳ ಆಡಿಯೋ ರೈಟ್ಸ್ ಖರೀದಿಸಿ ಬಿಡುಗಡೆ ಮಾಡಿದ್ದರು..ಇದೀಗ ತಮ್ಮ PRK ಸಂಸ್ಥೆಯ ಮಾರುಕಟ್ಟೆಯನ್ನು ವಿಸ್ತರಿಸಲು ಮುಂದಾಗಿರುವ ಪುನೀತ್ ರಾಜಕುಮಾರ್ ಮೊದಲ ಹೆಜ್ಜೆಯಾಗಿ ತೆಲುಗು ಇಂಡಸ್ಟ್ರಿಯಲ್ಲಿ ಅಡಿಯಿರಿಸಿದ್ದಾರೆ.

ಕನ್ನಡದ ಖ್ಯಾತ ನಟಿಯರ ಸುಪುತ್ರಿಯರು ಕೂಡಿಕೊಂಡು ‘ಎಂಎಂಸಿಹೆಚ್’ ಎನ್ನುವ ಸಿನಿಮಾ ಮಾಡಿದ್ದರಲ್ಲ ಅದು ‘ರಿಯಲ್​ ದಂಡುಪಾಳ್ಯಂ’ ಎಂಬೆಸರಿನಲ್ಲಿ ಡಬ್​ ಆಗಿ ರಿಲೀಸ್​ ಆಗಿದೆ. ಈ ಚಿತ್ರದ ತೆಲುಗು​​ ಹಾಡುಗಳು ಹಾಗೂ ಟ್ರೈಲರ್​ನ ಕೂಡ ಪುನೀತ್​​ ಅವ್ರ ಪಿಆರ್​ಕೆ ಆಡಿಯೋ ಕಂಪೆನಿ ಮೂಲಕ ರಿಲೀಸ್​ ಮಾಡಲಾಗಿದೆ.ಈ ಮೂಲಕ ತೆಲುಗು ಮಾರುಕಟ್ಟೆಗೆ ಪ್ರವೇಶಿಸಿರುವ ಪುನೀತ್ ಅವರಿಗೆ ಅಲ್ಲಿಯೂ ಇಲ್ಲಿಯ ರೀತಿಯಲ್ಲೇ ಸಕ್ಸಸ್ ಸಿಗಲಿ ಎಂಬುದೇ ಅಭಿಮಾನಿಗಳ ಆಶಯ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top