ಮನೋರಂಜನೆ

ಸುದೀಪ್ ಖರೀದಿಸಿರುವ ಹೊಸ ಕಾರಿನ ಬೆಲೆಯೆಷ್ಟು ಗೊತ್ತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಮನೆಗೆ ಹೊಸ ಅಥಿತಿಯನ್ನ ಸ್ವಾಗತಿಸಿದ್ದಾರೆ, ಅಂದ್ರೆ ಅವರು ಹೊಸ ಕಾರನ್ನು ತಗೊಂಡಿದ್ದಾರೆ. ಸಾಮಾನ್ಯವಾಗಿ ಸಿನಿಮಾ ತಾರೆಯರು ದುಬಾರಿ ಬೆಲೆಯ ಕಾರುಗಳು ಮತ್ತು ಬೈಕುಗಳನ್ನು ಖರೀದಿಸೋ ಕ್ರೇಜ್ ಹೊಂದಿರುತ್ತಾರೆ ಆದರೆ ಇತರೆ ನಟರಿಗೆ ಹೋಲಿಸಿದರೆ ಸುದೀಪ್ ಅವರಿಗೆ ದುಬಾರಿ ಕಾರಿನ ಹುಚ್ಚು ಸ್ವಲ್ಪ ಕಡಿಮೆ. ಸಧ್ಯ ತಮ್ಮ ಬಳಿ ನಾಲ್ಕೈದು ಕಾರುಗಳನ್ನು ಮಾತ್ರಹೊಂದಿರುವ ಕಿಚ್ಚ ಇದೀಗ ಮತ್ತೊಂದು ಕಾರು ತಗೊಂಡಿದ್ದಾರೆ.

 

 

ಸುದೀಪ್ ಅವರು ಕೆಂಪು ಬಣ್ಣದ VOLVO XC90 SUV ಕಾರನ್ನು ಖರೀದಿಸಿರುವ ವಿಚಾರ ತಿಳಿದುಬಂದಿದೆ. ಈ ಕಾರಿನ ಬೆಲೆ ಬರೋಬ್ಬರಿ 56ಲಕ್ಷ ರೂಪಾಯಿ. ಹೊಸ ಕಾರಿನ ಜೊತೆ ನಿಂತು ಪೋಸ್ ಕೊಟ್ಟಿರುವ ಫೋಟೋವೊಂದು ಸಾಮಾಜಿಕ ಜಾ ತಾಣದಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿ ನಿರ್ಮಾಪಕ ಕಮ್ ವಿತರಕ ಜ್ಯಾಕ್ ಮಂಜು ಅವರನ್ನೂ ಕಾಣಬಹುದು.

ಸುದೀಪ್ ಅವರು ಕಳೆದ ತಿಂಗಳಷ್ಟೇ ಕಪ್ಪು ಬಣ್ಣದ ಜೀಪ್ ಕಂಪಾಸ್ ಕಾರನ್ನು ಖರೀಧಿಸಿ ಅಕ್ಕ ಸುಜಾತ ಸಂಜೀವ್ ಅವರ ಮಗಳು ಶ್ರೇಯಾ ಹುಟ್ಟುಹಬ್ಬಕ್ಕಾಗಿ ಗಿಫ್ಟ್ ನೀಡಿದ್ದರು. ಇದೀಗ VOLVO XC90 SUV ಕಾರನ್ನು ಖರೀದಿಸುವ ಮೂಲಕ ತಮ್ಮ ಪುಟ್ಟ ಕಾರ್ ಕಲೆಕ್ಷನ್ ಗೆ ಮತ್ತೊಂದನ್ನು ಸೇರಿಕೊಂಡಿದ್ದಾರೆ. ಅಂದಹಾಗೆ ಕಿಚ್ಚ ಸುದೀಪ್‌, ನಾಳೆ ಕೋಟಿಗೊಬ್ಬ3 ಚಿತ್ರೀಕರಣಕ್ಕಾಗಿ ಸರ್ಬಿಯಾ ದೇಶಕ್ಕೆ ಹೊರಟ್ಟಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top