ಹೆಚ್ಚಿನ

ಈ ಒಂದು ವಸ್ತು ನಿಮ್ಮ ಮನೆಯಲ್ಲಿ ಇದ್ದರೆ ನೀವು ಲಕ್ಷ್ಮೀ ಕಟಾಕ್ಷವನ್ನು ಪಡೆದು ಕುಬೇರರಾಗುವ ಯೋಗವನ್ನು ಹೊಂದುವಿರಿ,ನೋಡಿ ಯಾವುದು ಆ ವಸ್ತು ಅಂತ.

ಈ ಒಂದು ವಸ್ತು ನಿಮ್ಮ ಮನೆಯಲ್ಲಿ ಇದ್ದರೆ ನೀವು ಲಕ್ಷ್ಮೀ ಕಟಾಕ್ಷವನ್ನು ಪಡೆದು ಕುಬೇರರಾಗುವ ಯೋಗವನ್ನು ಹೊಂದುವಿರಿ,ನೋಡಿ ಯಾವುದು ಆ ವಸ್ತು ಅಂತ.

ಪ್ರತಿಯೊಬ್ಬರಿಗೂ ಮನೆಯಲ್ಲಿ ಲಕ್ಷ್ಮಿ ನೆಲೆಸಿರಬೇಕು ಎನ್ನುವ ಆಸೆ ಮತ್ತು ಬಯಕೆ ಎಲ್ಲರಿಗೂ ಇರುತ್ತದೆ . ಕೆಲವೊಂದು ಅಪರೂಪದ ವಿಸ್ಮಯಕಾರಿ ವಸ್ತುಗಳನ್ನು ಪ್ರಕೃತಿ ನಮಗೆ ವರವಾಗಿ ಕರುಣಿಸಿದೆ. ಅಂತಹ ವಸ್ತುಗಳನ್ನು ನಾವು ತಂದು ಮನೆಯಲ್ಲಿ ಇಟ್ಟುಕೊಂಡರೆ ಲಕ್ಷ್ಮಿ ದೇವಿಯು ಕಾಲು ಮುರಿದುಕೊಂಡು ಮನೆಯಲ್ಲಿ ಬಿದ್ದಿರುತ್ತಾಳೆ ಎಂದು ಹೇಳುತ್ತಾರೆ.

ಕೆಲವರು ಹೇಳುತ್ತಾರೆ ಅವರಿಗೆ ಲಕ್ಷ್ಮಿ ತುಂಬಾ ಚೆನ್ನಾಗಿ ಒಲಿದಿದ್ದಾಳೆ ನಾನು ಒಂದು ಲಕ್ಷ ಸಂಪಾದನೆ ಮಾಡಿದರೂ ಏನು ಮಾಡಲು ಆಗುತ್ತಿಲ್ಲ. ಅವರು ಐವತ್ತು ಸಾವಿರ ಸಂಪಾದಿಸಿದ್ದಾರೆ ಆದರೂ ಕೂಡ ಅವರು ಎಂತಹ ಮನೆಯನ್ನು ಕಟ್ಟಿಸಿದ್ದಾರೆ, ಎಂದು ಹೇಳುತ್ತಾರೆ. ಆದರೂ ನಮ್ಮನ್ನು ನಮಗೆ ಜಿಜ್ಞಾಸೆ ಉಂಟಾಗುತ್ತದೆ. ನಾವು ಸಹ ಕಷ್ಟ ಪಡುತ್ತಿದ್ದೇವೆ, ನಮಗೂ ಸಹ ಲಕ್ಷ್ಮೀ ಒಲಿಯಬೇಕು. ನಮ್ಮ ಮನೆಯಲ್ಲಿ ಸದಾ ಇರಬೇಕು. ನಮ್ಮ ಅಗತ್ಯಕ್ಕೆ ತಕ್ಕಂತೆ ಇರಬೇಕು. ಅಗತ್ಯಕ್ಕೆ ಮೀರಿ ಸಮಸ್ಯೆಗಳು ಇದ್ದರೆ ಆವಾಗ ನಾವು ಹಣಕ್ಕೋಸ್ಕರ ಒದ್ದಾಡುತ್ತೇವೆ. ಅಂತಹ ಒಂದು ಸಮಸ್ಯೆಗೆ ಪ್ರಕೃತಿ ನಮಗೆ ಅದ್ಭುತವಾದಂತಹ ವರವನ್ನು ಕೊಟ್ಟಿದೆ.

 

 

ಇದನ್ನು ನಮ್ಮ ಹಿರಿಯರು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಇದು ಕೂಡ ಅವರಿಗೆ ತಕ್ಕ ಮಟ್ಟಿಗೆ ಅಲ್ಲ ಅವರ ತಕ್ಕ ಮಟ್ಟಿಗೂ ಮೀರಿದಂತಹ ಹಣ,ಆಸ್ತಿ,ಸಂಪಾದನೆ ಅವರಲ್ಲಿ ಇರುತ್ತದೆ. ಅಂತಹ ಒಂದು ಅದ್ಭುತವಾದ ವಸ್ತುವನ್ನು ಇಂದು ನಾವು ತಿಳಿದುಕೊಳ್ಳೋಣ. ಈ ವಸ್ತುವನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಇಟ್ಟು ಪೂಜೆ, ದೂಪ ,ಆರತಿ, ನೈವೇದ್ಯ ಮತ್ತು ಆರಾಧನೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸಿರುವಂತಹ ಯೋಗವೂ ಒಲಿಯುವುದು.

ತುಂಬಾ ಅಪರೂಪವಾದಂತಹ ವಸ್ತು ಇದು. ಅದು ಸಿಗಬೇಕು ಎಂದರೆ ಅದಕ್ಕಾಗಿ ಹುಡುಕಬೇಕು. ಆ ವಸ್ತು ಯಾವುದೆಂದರೆ ಏಕಾಕ್ಷಿ ತೆಂಗಿನ ಕಾಯಿ .ಈ ಹೆಸರನ್ನು ಕೇಳೇ ಇಲ್ಲ ಎಂದು ಕೆಲವರು ಹೇಳುತ್ತಾರೆ. ಒಂದು ತೆಂಗಿನಕಾಯಿಗೆ ಸಾಮಾನ್ಯವಾಗಿ ಮೂರು ಕಣ್ಣುಗಳು ಇರುತ್ತವೆ. ಇದನ್ನು ರುದ್ರಾಕ್ಷಿ ಸ್ವರೂಪ ಎಂದು ಕರೆಯುತ್ತೇವೆ .ನೀವು ತೆಂಗಿನಕಾಯಿಯ ಜುಟ್ಟನ್ನು ತೆಗೆದು ನೋಡಿದಾಗ ಮೂರು ಕಣ್ಣುಗಳು ಕಾಣಿಸುತ್ತವೆ. ಲಕ್ಷದಲ್ಲೋ ಅಥವಾ ಕೋಟಿ ತೆಂಗಿನ ಕಾಯಿಯಲ್ಲಿ ಒಂದು ಈ ಏಕಾಕ್ಷಿ ತೆಂಗಿನಕಾಯಿ ಇರುತ್ತದೆ. ಏಕಾಕ್ಷಿ ತೆಂಗಿನ ಕಾಯಿ ಎಂದರೆ ನೀವು ಜುಟ್ಟು ತೆಗೆದಾಗ ಮುಂದೆ ಒಂದು ಕಣ್ಣು ಹೊಂದಿರುವ ತೆಂಗಿನ ಕಾಯಿಯನ್ನು ಏಕಾಕ್ಷಿ ತೆಂಗಿನಕಾಯಿ ಎಂದು ಕರೆಯುತ್ತೇವೆ. ಅದು ಹುಡುಕಬೇಕು ಹುಡುಕಿದರೆ ಮಾತ್ರ ಸಿಗುತ್ತದೆ. ಯಾವುದೋ ಒಂದು ಪುಣ್ಯಾತ್ಮರ ಕಣ್ಣಿಗೆ ಮಾತ್ರ ಅದು ಕಾಣಿಸುತ್ತದೆ . ಆಚಾರ್ಯರ ಬಳಿ ಗುರುಗಳ ಬಳಿ ಈ ವಸ್ತು ಇರುತ್ತದೆ.

 

 

ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಗಳು ನಡೆದಾಗ, ಗೃಹ ಪ್ರವೇಶ ,ಲಕ್ಷ್ಮಿ ಪೂಜೆ, ದೀಪಾವಳಿಯ ದಿನದಂದು ಧನಲಕ್ಷ್ಮಿ ಪೂಜೆ , ಯುಗಾದಿ ಪೂಜೆ , ಸಂಕ್ರಾಂತಿ ಹಬ್ಬದ ದಿನದ ಪೂಜೆ , ಅಕ್ಷಯ ತೃತೀಯ, ಸತ್ಯನಾರಾಯಣನ ಪೂಜೆ ಅಂತಹ ದಿನದಂದು ಹುಡುಕಿ ಈ ದಿನ ಈ ಒಂದು ಏಕಾಕ್ಷಿ ತೆಂಗಿನ ಕಾಯಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಿ ಅದ್ಭುತವಾಗಿರುವಂತಹ ಫಲಿತಾಂಶವನ್ನು ನೀವು ಪಡೆಯುತ್ತೀರಿ.
ಸದಾ ಲಕ್ಷ್ಮಿ ನಿಮ್ಮ ಬಳಿ ಇರುತ್ತಾಳೆ, ಕುಬೇರರಾಗಿ ಇರುತ್ತೀರಾ. ಇದನ್ನು ಸರಿಯಾದ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಂಡರೆ ಮಾತ್ರ ನಿಮ್ಮ ಬಳಿ ಲಕ್ಷ್ಮೀ ಇರುತ್ತಾಳೆ. ನ್ಯಾಯ ಮಾರ್ಗದಲ್ಲಿ , ಧರ್ಮ ಮಾರ್ಗದಲ್ಲಿ ಇದ್ದರೆ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಅಡ್ಡದಾರಿಯನ್ನು ಹಿಡಿದರೆ ನಿಮ್ಮ ಮನೆಯಲ್ಲಿರುವ ಲಕ್ಷ್ಮೀ ದೇವಿಯೂ ಸಹ ಅಡ್ಡದಾರಿಯಲ್ಲಿಯೇ ಹೊರಟು ಹೋಗುತ್ತಾಳೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top