ಮನೋರಂಜನೆ

ಗೂಗ್ಲಿ ಬೆಡಗಿದೆ ಹೊಡೆಯಿತು ಬಂಪರ್- ಅಕ್ಷಯ್ ಕುಮಾರ್ ಚಿತ್ರಕ್ಕೆ ಕೃತಿ ಆಯ್ಕೆ.

ಕನ್ನಡ ಚಿತ್ರರಂಗ ಮಾತ್ರವಲ್ಲದೆ ನೆರೆಯ ತೆಲುಗು ತಮಿಳು ಒಳಗೊಂಡಂತೆ ಬಾಲಿವುಡ್‌ನಲ್ಲೂ ಮಿಂಚುತ್ತಿರುವ ಸೌಂದರ್ಯ ದೇವತೆ ಕೃತಿ ಕರಬಂಧ ಸದ್ಯ ಬಿಗ್ ಆಫರ್ ಅನ್ನು ತನ್ನದಾಗಿಸಿಕೊಂಡಿದ್ದಾಳೆ. ಸದ್ಯ ಬಾಲಿವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಕೃತಿಗೆ ಇಲ್ಲಿಯವರೆಗೂ ಅವರು ನಟಿಸಿರುವ ಯಾವ ಬಾಲಿವುಡ್ ಚಿತ್ರಗಳು ಹೇಳಿಕೊಳ್ಳುವಂತ ಸಕ್ಸಸ್ ಕಂಡಿಲ್ಲ ಹಾಗಾಗಿ ಒಂದು ಭರ್ಜರಿ ಗೆಲುವಿಗಾಗಿ ಕೃತಿ ಹಪಾಹಪಿಸುತ್ತಿದ್ದಾಳೆ, ಇಂಥಾ ಟೈಮಿನಲ್ಲಿ ಕೃತಿಗೆ ಒಂದೊಳ್ಳೆ ಅವಕಾಶ ಹುಡುಕಿಕೊಂಡು ಬಂದಿದೆ..

 

ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡಿರುವ ಹೌಸ್ ಫುಲ್ ಸರಣಿಯ ನಾಲ್ಕನೇ ಅವತರಣಿಕೆ ಶೀಘ್ರದಲ್ಲಿ ಸೆಟ್ಟೇರುತ್ತಿದ್ದು ಚಿತ್ರಕ್ಕೆ ನಾಯಕಿಯಾಗಿ ಕೃತಿ ಕರಬಂಧ ಆಯ್ಕೆಯಾಗಿದ್ದಾಳೆ. ಈ ಮೂಲಕ ತಾನು ಬಯಸುತ್ತಿದ್ದಂತಹ ಸಿನಿಮಾವೇ ಈಗ ಕೃತಿಯನ್ನು ಹುಡುಕಿಕೊಂಡು ಬಂದಿದ್ದು ಅತೀವ ಸಂತಸದಲ್ಲಿ ಕೃತಿ ಮುಳುಗಿದ್ದಾಳೆ. ಚಿತ್ರದಲ್ಲಿ ಕೃತಿ ಕರಬಂಧ ಜೊತೆಗೆ ಕೃತಿ ಸನೂನ್ ಹಾಗೂ ಪೂಜಾ ಹೆಡ್ಗೆ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ .

 

 

ಅಂದಹಾಗೆ ಹೌಸ್ ಫುಲ್-4 ಚಿತ್ರದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೆಶ್ಮುಖ್, ಬಾಬಿ ಡಿಯೋಲ್ ಮತ್ತು ಅಭಿಷೇಕ್ ಬಚ್ಚನ್ ರಂತಹ ದೊಡ್ಡ ದೊಡ್ಡ ನಟರುಗಳು ನಟಿಸುತ್ತಿದ್ದು ಚಿತ್ರಕ್ಕೆ ಒಳ್ಳೆಯ ಟಾಕ್ ಕ್ರಿಯೇಟ್ ಮಾಡಿಕೊಟ್ಟಿದೆ. ಈ ನಟರಲ್ಲಿ ಕೃತಿ ಕರಬಂಧ ಯಾರಿಗೆ ಜೋಡಿಯಾಗುತ್ತಾಳೆ ಎಂಬ ವಿಚಾರ ಮಾತ್ರ ಇನ್ನೂ ಗುಟ್ಟಾಗಿಯೇ ಉಳಿದುಕೊಂಡಿದೆ. ‘ಹೌಸ್ ಫುಲ್’ ಹಾಗೂ ‘ಹೌಸ್ ಫುಲ್ 2’ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಾಜಿದ್ ಖಾನ್ ಅವರೇ ಈ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದು ಲಂಡನ್ ನಲ್ಲಿ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆಯಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top