ಸಮಾಚಾರ

ಚಾಲಕನ ಮಗ ಭಾರತ ತಂಡಕ್ಕೆ ಆಯ್ಕೆಯಾಗಲು ಗೌತಮ್ ಗಂಭೀರ್​ ಕಾರಣವಂತೆ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಪ್ರಾರಂಭವಾಗಲಿರುವ ಅಫಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ದಿಲ್ಲಿಯ ಯುವ ವೇಗಿ ನವ್‌ದೀಪ್ ಸೈನಿ ಅವರನ್ನು ಆಯ್ಕೆ ಮಾಡಿದ್ದಾರೆ.

 

 

ಭಾರತ ತಂಡಕ್ಕೆ ಆಯ್ಕೆ ಆಗಿರುವ ನವ್‌ದೀಪ್ ಸೈನಿ ಸಂತಸರಾಗಿದ್ದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಕೇವಲ ಪಾಕೆಟ್​ ಮನಿಗಾಗಿ ಕ್ರಿಕೆಟ್​ ಆಡುತ್ತಿದ್ದ ನನಗೆ ಲೆದರ್​ ಬಾಲ್​ ಹಿಡಿಯುತ್ತೇನೆಂಬ ಕನಸು ಕೂಡ ಇರಲಿಲ್ಲ, ಇವತ್ತು ಇಂದು ನಾನು ಭಾರತ ತಂಡಕ್ಕೆ ಆಯ್ಕೆಯಾಗಿದ್ದೇನೆ ಎಂದರೆ, ಅದಕ್ಕೆ ಗೌತಮ್​ ಗಂಭೀರ್​ ರವರೆ ಕಾರಣ ಎಂದು ನವ್ ​ದೀಪ್​ ಸೈನಿ ಹೇಳಿದ್ದಾರೆ.

ನವ್‌ದೀಪ್ ಸೈನಿ ಗೆ 2013 ರಲ್ಲಿ ರಣಜಿ ಆಟಗಾರರಿಗೆ ನೆಟ್​ನಲ್ಲಿ ಬೌಲಿಂಗ್​ ಮಾಡುವ ಅವಕಾಶ ಸಿಕ್ಕಿತು. ಅದೇ ಮೊದಲು ಲೆದರ್ ಬಾಲ್ ಹಿಡಿದ್ದಿದ್ದ ನವ್‌ದೀಪ್ ಸೈನಿ ಮುಂದೊಂದು ದಿನ ಭಾರತ ತಂಡಕ್ಕೆ ಆಡಬಹುದೆಂಬ ಕನಸು ಕೂಡ ಇರಲಿಲ್ಲ. ಅಂದು ಅವರ ಪ್ರತಿಭೆಯನ್ನು ಗುರುತಿಸಿ ಗೌತಮ್ ಗಂಭೀರ್ ಅವರು ನವ್‌ದೀಪ್ ಸೈನಿಯನ್ನು ದೆಹಲಿ ರಣಜಿ ತಂಡಕ್ಕೆ ಆಯ್ಕೆ ಮಾಡಲು ಬೆಂಬಲಿಸಿದರು. ಸೈನಿ ಆಯ್ಕೆಯನ್ನು ಗಂಭೀರ್ ಬೆಂಬಲಿಸಿದ್ದರೂ ಕೂಡ ಇದಕ್ಕೆ ಆಯ್ಕೆ ಮಂಡಳಿಯ ಇಬ್ಬರು ವಿರೋಧ ಮಾಡಿದ್ದರು ಕೊನೆಗೂ ಸೈನಿಗೆ ಆಡಲು ಅವಕಾಶ ಸಿಕ್ಕು ಈಗ ಭಾರತ ತಂಡಕ್ಕೆ ಆಯ್ಕೆ ಆಗುವ ಮಟ್ಟಕ್ಕೆ ಪ್ರತಿಭಾನ್ವಿತ ಬೌಲರ್ ಆಗಿ ಬೆಳೆದಿದ್ದಾರೆ.

‘ಇಂಡಿಯಾ ಎ’ ಪರ ಈ ಹಿಂದೆ ಆಡಿರುವ ಸೈನಿಗೆ ಕೋಚ್​ ರಾಹುಲ್ ​ ದ್ರಾವಿಡ್​, ರಾಯಲ್ ಚಾಲೆಂಜರ್ಸ್ ಬೌಲಿಂಗ್​ ಕೋಚ್​ ಆಶಿಶ್‌ ನೆಹ್ರಾ, ಮಿಥುನ್​ ಮನ್ಹಾಸ್​, ಅವರು ಕೂಡ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ, ಅವರನ್ನು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ ಎಂದು ಸೈನಿ ಭಾವುಕತೆಯಿಂದ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top