ಮನೋರಂಜನೆ

ದೀಪಿಕಾ ಹಾಕಿದ ಕಂಡೀಷನ್ ಕೇಳಿ ಬೆಚ್ಚಿಬಿದ್ದ ನಿರ್ಮಾಪಕರು.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ಹುಟ್ಟುಹಾಕಿದ್ದ ಭಯಾನಕ ವಿವಾದದಿಂದ ಕಂಗೆಟ್ಟು ಹೊಗಿದ್ದಾಕೆ ಆ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ. ಪದ್ಯಾವತಿ ಎಂಬ ಸತ್ಯ ಕಥೆ ಆಧಾರಿತವಾದ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದ, ಒಂದು ಬಣದಿಂದ ತೀವ್ರವಾದ ವಿರೋಧ ಎದುರಿಸಿದ್ದ ದೀಪಿಕಾಳ ಮುಂದಿನ ಚಿತ್ರ ಯಾವುದು ಎಂಬ ಬಗ್ಗೆ ಕುತೂಹಲವಿತ್ತು. ಆದರೆ ಆ ಪ್ರಶ್ನೆ ಈವರೆಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿದ್ದು ದೀಪಿಕಾಳ ಯಾವುದೇ ಸಿನಿಮಾ ಕೂಡ ಸೆಟ್ಟೇರಿಲಲಿಲ್ಲ ಇದಕ್ಕೆ ಕಾರಣ ಹುಡುಕ ಹೊರಟವರಿಗೆ ಸಿಕ್ಕಿದ್ದು ಬೆಚ್ಚಿಬೀಳಿಸುವ ಸಂಗತಿ.

 

 

ಸದಾ ಸವಾಲಿನಬ ಪಾತ್ರಗಳನ್ನೇ ಆರಿಸಿಕೊಳ್ಳುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ದೀಪಿಕಾಳ ಡೇಟ್ಸ್ ಕೇಳಲು ಬಂದ ನಿರ್ದೇಶಕ ನಿರ್ಮಾಪಕರ ಮುಂದೆ ಹೊಸ ಬೇಡಿಕೆಯನ್ನಿಡುತ್ತಿದ್ದಾರಂತೆ. ಅದೇನೆಂದರೆ ಸಿನಿಮಾ ಮಾಡಲು ದೀಪಿಕಾಗೆ ಸಲ್ಮಾನ್, ಶಾರುಖ್ ಖಾನ್’ಗೆ ಕೊಡುತ್ತಿರುವಷ್ಟೇ ಸಂಭಾವನೆ ಕೊಡಬೇಕಂತೆ. ಸದ್ಯ ಬಾಲಿವುಡ್ ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಅವರೇ ಇದ್ದು ಇದೀಗ ಖಾನ್ ನಟರಿಗೆ ಸಮನಾಗಿ ಸಂಭಾವನೆ ಕೇಳುತ್ತಿರುವುದು ನಿರ್ಮಾಪಕರ ತಲೆ ತಿರುಗುವಂತೆ ಮಾಡಿದೆಯಂತೆ.

 

 

ಅಂದಹಾಗೆ ಸದ್ಯ ದೀಪಿಕಾ ಒಂದು ಚಿತ್ರಕ್ಕೆ ಹತ್ತು ಕೋಟಿ ಸಂಭಾವನೆ ಪಡೆಯುತ್ತಾಳಂತೆ.. ಶಾರುಖ್ ಸಲ್ಮಾನ್ ಅವರು ನಲವತ್ತರಿಂದ ಐವತ್ತು ಕೋಟಿ ಪಡೆಯುತ್ತಾರೆ ಅನ್ನೋ ಮಾಹಿತಿ ಇದೆ. ಪದ್ಮಾವತಿ ಚಿತ್ರಕ್ಕೂ ಕೂಡ ದೀಪಿಕಾ ‘ಹತ್ತು’ ಕೋಟಿಯನ್ನೇ ಪಡೆದಿದ್ದಾಳಂತೆ. ಆ ಚಿತ್ರ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದರಿಂದ ತಮಗೂ ಸ್ಟಾರ್ ನಂತರ ಸಮಾನವಾಗಿ ಸಂಭಾವನೆ ಕೊಡಿ ಎಂದು ಕೇಳುತ್ತಿದ್ದಳಂತೆ.ದೀಪಿಕಾಳಿಗೆ ಆಕೆ ಕೇಳುವಷ್ಟೇ ಸಂಭಾವನೆ ನೀಡಲು ಯಾವೊಬ್ಬ ನಿರ್ಮಾಪಕನೂ ಇನ್ನೂ ಮುಂದೆ ಬಂದಿರದ ಕಾರಣ ಪದ್ಮಾವತಿಯ ನಂತರ ಮತ್ಯಾವ ಚಿತ್ರಗಳು ಸೆಟ್ಟೇರಿಲ್ಲ ಎನ್ನುವುದು ಬಾಲಿವುಡ್ ಮಂದಿಯ ಉವಾಚ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top