ಸಿನಿಮಾ

ತಂಗಿ ಜಾಹ್ನವಿ ಕಪೂರ್ ಬಳಿ ಪರಿಪರಿಯಾಗಿ ಕ್ಷಮೆ ಕೇಳಿದ ನಟ ಅರ್ಜುನ್ ಕಪೂರ್

ಇತ್ತೀಚಿಗೆ ಶ್ರೀದೇವಿ ಮಗಳಾದ ಜಾಹ್ನವಿ ಕಪೂರ್ ಅಭಿನಯದ ದಡಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಜಾಹ್ನವಿ ಕಪೂರ್ ಸಹೋದರ ಅರ್ಜುನ್ ಕಪೂರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಂಗಿಯ ಕ್ಷಮೆ ಕೇಳಿದ್ದಾರೆ.

 

 

ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ಕಪೂರ್ ತನ್ನ ಸಹೋದರಿ ಕುರಿತು ಈ ರೀತಿ ಪೋಸ್ಟ್ ಮಾಡಿದ್ದಾರೆ, “ಈ ದಿನ ಅಭಿಮಾನಿಗಳ ಹೃದಯದಲ್ಲಿ ನೀನು ಎಂದಿಗೂ ಉಳಿದು ಬಿಡ್ತೀಯ ಜಾಹ್ನವಿ. ಯಾಕೆಂದರೆ ಈ ದಿನ ನೀನು ಅಭಿನಯಿಸಿದ ಮೊದಲ ಸಿನಿಮಾ ಧಡಕ್ ಟ್ರೇಲರ್ ರಿಲೀಸ್ ಆಗುತ್ತಿದೆ. ನಾನು ಮುಂಬೈನಲ್ಲಿ ಇಲ್ಲದ ಕಾರಣ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯ ಆಗುತ್ತಿಲ್ಲ, ನನ್ನನ್ನು ಕ್ಷಮಿಸು. ಆದರೆ ನಾನು ನಿನ್ನ ಪಕ್ಕದಲ್ಲೇ ಇರುತ್ತೇನೆ” ಎಂದು ಬರೆದಿದ್ದಾರೆ. ಧಡಕ್ ಸಿನಿಮಾ ತಂಡಕ್ಕೆ, ಚಿತ್ರ ನಿರ್ದೇಶಕರಿಗೆ, ನಿರ್ಮಾಪಕ ಕರಣ್ ಜೋಹಾರ್ ಅವರಿಗೆ ಅರ್ಜುನ್ ಕಪೂರ್ ಶುಭ ಕೋರಿದ್ದಾರೆ ಎಂದು ತಿಳಿದು ಬಂದಿದೆ

2016ರಲ್ಲಿ ಮರಾಠಿ ಭಾಷೆಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಸೈರಾಟ್’ ಚಿತ್ರದ ಕಥೆಯನ್ನಾಧರಿಸಿರುವ ‘ಧಡಕ್’ ಸಿನೆಮಾದಲ್ಲಿ ಜಾಹ್ನವಿ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಧಡಕ್’ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ, ಆಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಟ್ರೈಲರ್ ವೀಕ್ಷಣೆ ಮಾಡುತ್ತಿದ್ದಾರೆ. ಟ್ರೇಲರ್‌ ಅಂತೂ ಭಾರಿ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗಿದೆ. ಆದರೆ, ‘ಸೈರಾಟ್‌’ನಲ್ಲಿ ಕಾಣುವ ಸಹಜತೆ ಇಲ್ಲ. ಬಾಲಿವುಡ್‌ ಗ್ಲಾಮರ್‌ ಸ್ಪರ್ಶ ಸ್ಪಷ್ಟವಾಗಿ ಕಾಣುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top